ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19: ನಿಮಗೆ ಯಾವಾಗ ಕೃತಕ ಆಮ್ಲಜನಕದ ಬೆಂಬಲ ಬೇಕು?

|
Google Oneindia Kannada News

ನವದೆಹಲಿ, ಏಪ್ರಿಲ್ 22: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಮ್ಲಜನಕದ ಕೊರತೆ ಎದುರಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಅಪೆಕ್ಸ್ ಕೋರ್ಟ್ ಆಮ್ಲಜನಕ ಸರಬರಾಜು ಹಾಗೂ ಔಷಧಗಳ ಕುರಿತು ಸುಮೊಟೊ ಜಾರಿ ಮಾಡಿದೆ. ಈ ಕುರಿತು ಕನಿಷ್ಠ 6 ಹೈಕೋರ್ಟ್‌ಗಳು ಸಮಸ್ಯೆ ಆಲಿಸಿವೆ. ಇದೀಗ ಸಾಕಷ್ಟು ರಾಜ್ಯಗಳಲ್ಲಿ ಆಮ್ಲಜನಕ ಕೊರತೆ ಎದುರಾಗಿರುವುದರಿಂದ ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ.

ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!

ಒಂದೊಮ್ಮೆ ಕೋವಿಡ್ 19 ಪಾಸಿಟಿವ್ ಬಂದರೆ ಭಯ ಪಡುವುದು ಬೇಡ, ಇದೀಗ ಅದು ಸಾಮಾನ್ಯವೆನಿಸಿಕೊಂಡಿದೆ. ಶೇ.85ರಷ್ಟು ಮಂದಿ ಸಣ್ಣ ಪ್ರಮಾಣದ ಲಕ್ಷಣಗಳನ್ನು ಹೊಂದಿರುತ್ತಾರೆ. ಆಗ ಅವರು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ ಮನೆಯಲ್ಲಿಯೇ ಗುಣಪಡಿಸಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೋಂಕಿನ ಲಕ್ಷಣಗಳು

ಸೋಂಕಿನ ಲಕ್ಷಣಗಳು

ಕೊರೊನಾ ಸೋಂಕಿನ ಲಕ್ಷಣಗಳು ಹಾಗೂ ಕೃತಕ ಆಮ್ಲಜನಕ ಅಗತ್ಯ ಯಾವಾಗಿದೆ?
ನಿಮಗೆ ಜ್ವರ, ಶೀತ, ಕಫ, ವಾಂತಿ ರೀತಿಯ ಯಾವುದೇ ಲಕ್ಷಣಗಳು ಗೋಚರಿಸಿದರೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಪರೀಕ್ಷೆ ಮಾಡಿಸುವುದು ತಡವಾದಲ್ಲಿ ಹೀಗೆ ಮಾಡಿ

ಪರೀಕ್ಷೆ ಮಾಡಿಸುವುದು ತಡವಾದಲ್ಲಿ ಹೀಗೆ ಮಾಡಿ

ಒಂದೊಮ್ಮೆ ನೀವು ಪರೀಕ್ಷೆ ಮಾಡಿಸುವುದು ತಡವಾಗುತ್ತದೆ ಎಂದಾದಲ್ಲಿ, ಮನೆಯವರಿಗೆ ತೊಂದರೆಯಾಗದಂತೆ ಗೃಹಬಂಧನದಲ್ಲಿರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ರೂಮಿನಿಂದ ಪದೇ ಪದೇ ಹೊರಬರಬೇಡಿ, ಮಕ್ಕಳು, ಗರ್ಭಿಣಿಯರು, ಹಿರಿಯರಿಂದ ದೂರವಿರಿ.

ಕೋವಿಡ್ 19 ಪಾಸಿಟಿವ್ ಬಂದರೆ ಭಯ ಬೇಡ

ಕೋವಿಡ್ 19 ಪಾಸಿಟಿವ್ ಬಂದರೆ ಭಯ ಬೇಡ

ಒಂದೊಮ್ಮೆ ಕೋವಿಡ್ 19 ಪಾಸಿಟಿವ್ ಬಂದರೆ ಭಯ ಪಡುವುದು ಬೇಡ, ಇದೀಗ ಅದು ಸಾಮಾನ್ಯವೆನಿಸಿಕೊಂಡಿದೆ. ಶೇ.85ರಷ್ಟು ಮಂದಿ ಸಣ್ಣ ಪ್ರಮಾಣದ ಲಕ್ಷಣಗಳನ್ನು ಹೊಂದಿರುತ್ತಾರೆ. ಆಗ ಅವರು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ ಮನೆಯಲ್ಲಿಯೇ ಗುಣಪಡಿಸಿಕೊಳ್ಳಬಹುದು.
*ಪ್ರತಿ ಆರು ತಾಸಿಗೊಮ್ಮೆ ಆಕ್ಸಿಜನ್ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು
*ಆರು ನಿಮಿಷಗಳ ಕಾಲ ವಾಕಿಂಗ್ ಮಾಡಿ ಬಳಿಕ ಆಮ್ಲಜನಕ ಪ್ರಮಾಣವನ್ನು ವೀಕ್ಷಿಸಬೇಕು.
*ಒಂದೊಮ್ಮೆ ವ್ಯಾಯಾಮ ಮಾಡಿ ತೀರಾ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರೆ ವೈದ್ಯರಿಗೆ ಕರೆ ಮಾಡಬೇಕು.

ಆಕ್ಸಿಜನ್ ಬೆಂಬಬ ಬೇಕಾಗಿರುವುದು ಯಾವಾಗ

ಆಕ್ಸಿಜನ್ ಬೆಂಬಬ ಬೇಕಾಗಿರುವುದು ಯಾವಾಗ

ಒಂದೊಮ್ಮೆ ಆಕ್ಸಿಜನ್ ಪ್ರಮಾಣ ಶೇ.94ರಷ್ಟಿದ್ದರೆ ಯಾವುದೇ ಕೃತಕ ಆಮ್ಲಜನಕದ ಅಗತ್ಯವಿರುವುದಿಲ್ಲ. ಒಂದೊಮ್ಮೆ ಈ ಪ್ರಮಾಣದಲ್ಲಿ ಶೇ.2ರಷ್ಟು ಕಡಿಮೆಯಾದರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಯಾಕೆಂದರೆ ನಿಮ್ಮ ರಕ್ತದಲ್ಲಿ ಸಾಕಷ್ಟು ಆಮ್ಲಜನಕವಿರುತ್ತದೆ.

*ಕೆಲವು ಆರೋಗಿಗಳು ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುತ್ತಾರೆ, ಇಂಥವರು ಆಕ್ಸಿಜನ್ ಪ್ರಮಾಣವನ್ನು ತುಸು ಹೆಚ್ಚು ಇರಿಸಿಕೊಳ್ಳಬೇಕು ಒಂದೊಮ್ಮೆ ಶೇ.90-92ರಷ್ಟಿದ್ದರೂ ಭಯ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.

English summary
The ongoing second surge in Covid-19 cases has seen a huge rise in the demand for supplemental oxygen. Here is the information athst When Do You Need Oxygen Support.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X