ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿಸುದ್ದಿ: ಕೊರೊನಾ ಲಸಿಕೆ ಪಡೆದುಕೊಳ್ಳುವ ಸುಲಭ ವಿಧಾನ

|
Google Oneindia Kannada News

ನವದೆಹಲಿ, ಮಾರ್ಚ್ 24: ಭಾರತದಲ್ಲಿ ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ದೇಕರ್ ಸ್ಪಷ್ಟಪಡಿಸಿದ್ದಾರೆ.

ಕೊವಿಡ್-19 ಲಸಿಕೆ ಪಡೆದುಕೊಳ್ಳಲು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಹೀಗೆ ಹೆಸರು ನೋಂದಾಯಿಸಿದವರಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

Explained: ಭಾರತದಲ್ಲಿ ಕೊರೊನಾ ಲಸಿಕೆ ವ್ಯರ್ಥಕ್ಕೆ ಕಾರಣವೇನು?Explained: ಭಾರತದಲ್ಲಿ ಕೊರೊನಾ ಲಸಿಕೆ ವ್ಯರ್ಥಕ್ಕೆ ಕಾರಣವೇನು?

ದೇಶದಲ್ಲಿ ಪ್ರಸ್ತುತ ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ, ಮೊದಲ ಶ್ರೇಣಿ ಕಾರ್ಮಿಕರು ಜೊತೆಗೆ 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಸ್ವಸ್ಥತೆ ಹೊಂದಿರುವ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗುತ್ತಿದೆ. ಏಪ್ರಿಲ್ 1 ರಿಂದ 45 ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ನಿಮಗೂ 45 ವರ್ಷ ಆಗಿದೆಯೇ, ಕೊವಿಡ್-19 ಲಸಿಕೆ ಹಾಕಿಸಿಕೊಳ್ಳುವ ನಿರೀಕ್ಷೆಯಿದೆಯೇ. ಲಸಿಕೆ ಪಡೆದುಕೊಳ್ಳಲು ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೊದಲ ಡೋಸ್ ಲಸಿಕೆ ಪಡೆದ ನಂತರ ಮುಂದೇನು ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ ಓದಿ.

2ನೇ ಡೋಸ್ ಲಸಿಕೆ ಪಡೆಯುವ ದಿನಾಂಕ ನಿಗದಿ ನಿಮ್ಮಿಷ್ಟ

2ನೇ ಡೋಸ್ ಲಸಿಕೆ ಪಡೆಯುವ ದಿನಾಂಕ ನಿಗದಿ ನಿಮ್ಮಿಷ್ಟ

ಕೊರೊನಾವೈರಸ್ 2ನೇ ಡೋಸ್ ಲಸಿಕೆ ಪಡೆದುಕೊಳ್ಳಲು ಕೊವಿನ್ ಅಪ್ಲಿಕೇಷನ್ ಸ್ವಯಂಪ್ರೇರಿತವಾಗಿ ದಿನಾಂಕವನ್ನು ನಿಗದಿಗೊಳಿಸುತ್ತಿತ್ತು. ಆದರೆ ಈ ಅಪ್ಲಿಕೇಷನ್ ತಿದ್ದುಪಡಿ ಮಾಡಲಾಗಿದೆ. ಕೊರೊನಾ ಲಸಿಕೆಯ 2ನೇ ಡೋಸ್ ಪಡೆದುಕೊಳ್ಳುವ ದಿನಾಂಕವನ್ನು ಸಾರ್ವಜನಿಕರೇ ನಿರ್ಧರಿಸಬಹುದು. ತಮ್ಮ ಅನುಕೂಲಕ್ಕೆ ತಕ್ಕಂತೆ 4 ರಿಂದ 8 ವಾರಗಳ ಒಳಗೆ 2ನೇ ಡೋಸ್ ಲಸಿಕೆ ಪಡೆಯುವ ದಿನಾಂಕ ನಿಗದಿಗೊಳಿಸುವ ಅವಕಾಶ ನೀಡಲಾಗಿದೆ.

2ನೇ ಡೋಸ್ ಪಡೆಯಲು 8 ವಾರಗಳ ಗಡುವು

2ನೇ ಡೋಸ್ ಪಡೆಯಲು 8 ವಾರಗಳ ಗಡುವು

ಕೊರೊನಾವೈರಸ್ ಸೋಂಕಿನ ಮೊದಲ ಡೋಸ್ ಪಡೆದು 6 ವಾರಗಳ ನಂತರ ಮತ್ತು ಎಂಟು ವಾರಗಳೊಳಗೆ 2ನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಎಂಟು ವಾರಗಳ ನಂತರದಲ್ಲಿ 2ನೇ ಡೋಸ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಯಾವುದೇ ರೀತಿ ಅವಕಾಶ ಇರುವುದಿಲ್ಲ.

45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಉಚಿತ45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಉಚಿತ

ಸರ್ಕಾರಿ ಜಾಲತಾಣದಲ್ಲಿ ಲಸಿಕೆ ಪಡೆಯುವ ದಿನಾಂಕ ನಿಗದಿ

ಸರ್ಕಾರಿ ಜಾಲತಾಣದಲ್ಲಿ ಲಸಿಕೆ ಪಡೆಯುವ ದಿನಾಂಕ ನಿಗದಿ

ಕೊವಿಡ್-19 ಸೋಂಕಿನ ಮೊದಲ ಡೋಸ್ ಪಡೆದ ವೇಳೆಯಲ್ಲಿ 2ನೇ ಡೋಸ್ ಪಡೆಯುವ ದಿನಾಂಕ ಸ್ವಯಂಚಾಲಿತವಾಗಿ ನಿಗದಿಯಾಗುತ್ತದೆ. ತದನಂತರದಲ್ಲಿ ಲಸಿಕೆ ಪಡೆಯಲು ಬಯಸುವವರು ಈ ದಿನಾಂಕವನ್ನು ಮರುನಿಗದಿಗೊಳಿಸಬಹುದು. ಸರ್ಕಾರದ ವೆಬ್‌ಸೈಟ್‌ನಲ್ಲಿ 2ನೇ ಡೋಸ್ ಪಡೆಯಲು ಇಚ್ಛಿಸುವ ದಿನಾಂಕ ಮತ್ತು ದಿನವನ್ನು ಮರು ನಿಗದಿಗೊಳಿಸಲು ಅವಕಾಶ ನೀಡಲಾಗಿದೆ.

ಲಸಿಕೆ ಪಡೆಯಲು ಏಪ್ರಿಲ್ 1ರಿಂದ ಹೆಸರು ನೋಂದಣಿ

ಲಸಿಕೆ ಪಡೆಯಲು ಏಪ್ರಿಲ್ 1ರಿಂದ ಹೆಸರು ನೋಂದಣಿ

ಭಾರತದಲ್ಲಿ ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾವೈರಸ್ ಲಸಿಕೆ ನೀಡುವುದಕ್ಕೆ ನಿರ್ಧರಿಸಲಾಗಿದೆ. ಜನವರಿ 1, 1977ಕ್ಕೂ ಮೊದಲು ಜನಿಸಿದ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಲು ಹೆಸರು ನೋಂದಾಯಿಸಿಕೊಳ್ಳಬಹುದು. ಏಪ್ರಿಲ್ 1 ರಿಂದ ಹೆಸರು ನೋಂದಣಿ ಆರಂಭಿಸಲಾಗುತ್ತದೆ. 45 ವರ್ಷ ಮೇಲ್ಪಟ್ಟವರು ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಅನುಕೂಲ ಆಗುವಂತೆ ಕೊವಿನ್ ಅಪ್ಲಿಕೇಶನ್ ಅಪ್ ಡೇಟ್ ಮಾಡಲಾಗಿದೆ.

ಕೊರೊನಾ ಲಸಿಕೆ ಪ್ರಮಾಣಪತ್ರ ಸಿಗುತ್ತದೆಯೇ?

ಕೊರೊನಾ ಲಸಿಕೆ ಪ್ರಮಾಣಪತ್ರ ಸಿಗುತ್ತದೆಯೇ?

ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ ಫಲಾನುಭವಿಗೆ ಕಾಗದದಲ್ಲಿ ಮುದ್ರಿಸಿದ ಪ್ರಮಾಣಪತ್ರ, ಡಿಜಿಟಲ್ ರೂಪದ ಪ್ರಮಾಣಪತ್ರ ಅಥವಾ ಡಿಜಿಟಲ್ ಪ್ರಮಾಣಪತ್ರದ ಲಿಂಕ್ ಅನ್ನು ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರದ ಜೊತೆಗೆ ಲಸಿಕೆಗೆ ಪಾವತಿಸಿದ ಹಣದ ಸ್ವೀಕೃತಿ ಪತ್ರವನ್ನು ನೀಡಲಾಗುತ್ತದೆ. ಲಸಿಕೆ ಹಾಕಿಸಿಕೊಂಡವರ ಮೇಲೆ 30 ನಿಮಿಷ ನಿಗಾ ವಹಿಸಿದ ಆರೋಗ್ಯ ತಪಾಸಣೆ ಬಳಿಕ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪ್ರಮಾಣ ಪತ್ರ ನೀಡಲಾಗುತ್ತದೆ. ಈ ಪ್ರಮಾಣಪತ್ರವನ್ನು ಪಡೆಯದೇ ಯಾವುದೇ ಕಾರಣಕ್ಕೂ ಮನೆಗೆ ವಾಪಸ್ ಹೋಗಬೇಡಿ. ಒಂದು ವೇಳೆ ಆಸ್ಪತ್ರೆಯಲ್ಲಿ ಪ್ರಮಾಣಪತ್ರ ನೀಡುವುದಕ್ಕೆ ನಿರಾಕರಿಸಿದ್ದಲ್ಲಿ ಸಹಾಯವಾಣಿ 1075ಕ್ಕೆ ದೂರು ನೀಡಿ.

ಆನ್‌ಲೈನ್ ಮುಖೇನ ಹೆಸರು ನೋಂದಣಿ

ಆನ್‌ಲೈನ್ ಮುಖೇನ ಹೆಸರು ನೋಂದಣಿ

ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳುವುದಕ್ಕೆ ಕೊವಿನ್ ಅಪ್ಲಿಕೇಷನ್ ಮೂಲಕವೇ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಇದರ ಹೊರತಾಗಿ ಯಾವುದೇ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೇರೆ ಮಾರ್ಗಗಳಿಂದ ಹೆಸರು ನೋಂದಾಣಿಸುವ ಹಾಗಿಲ್ಲ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ 1075 ಸಹಾಯವಾಣಿ ಸಂಖ್ಯೆಗೆ ದೂರು ಸಲ್ಲಿಸಬಹುದು.

ಭಾರತದಲ್ಲಿ ಕೊರೊನಾಗೆ ಎರಡು ಮಾದರಿ ಲಸಿಕೆ

ಭಾರತದಲ್ಲಿ ಕೊರೊನಾಗೆ ಎರಡು ಮಾದರಿ ಲಸಿಕೆ

ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಕಳೆದ ಜನವರಿ 16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ಕೊರೊನಾವೈರಸ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಅಂದು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ವಿತರಿಸಲು ಆರಂಭಿಸಲಾಗಿತ್ತು. ಫೆಬ್ರವರಿ 2ರಿಂದ ಎರಡನೇ ಡೋಸ್ ಲಸಿಕೆಯ ವಿತರಣೆ ಕಾರ್ಯಾರಂಭ ಮಾಡಲಾಗಿತ್ತು.

5 ಕೋಟಿಗೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ

5 ಕೋಟಿಗೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ

ಭಾರತದಲ್ಲಿ ಈವರೆಗೂ 5,00,75,162 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. 79,03,068 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 50,09,252 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 83,33,713 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 30,60,060 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.

ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಹೊಡೆತ

ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಹೊಡೆತ

ಭಾರತದಲ್ಲಿ ಕೊರೊನಾವೈರಸ್ ಎರಡನೇ ಅಲೆಯ ಹೊಡೆತಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. 24 ಗಂಟೆಗಳಲ್ಲೇ 47262 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಅವಧಿಯಲ್ಲಿ 23,907 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಂದೇ ದಿನ 275 ಜನರು ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಒಟ್ಟು 1,17,34,058 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಈವರೆಗೂ 1,12,05,160 ಸೋಂಕಿತರು ಗುಣಮುಖರಾಗಿದ್ದು, ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆ 1,60,441ಕ್ಕೆ ಏರಿಕೆಯಾಗಿದೆ. ಉಳಿದಂತೆ 3,68,457 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
Covid-19 Vaccine To People Above 45 Years Of Age : All You Need To Know In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X