ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ತಿಂಗಳಿನಲ್ಲೇ ಪಿ-ಫಿಜರ್ ಸಂಸ್ಥೆಯಿಂದ ಕೊವಿಡ್-19 ಲಸಿಕೆ!

|
Google Oneindia Kannada News

ನವದೆಹಲಿ, ನವೆಂಬರ್.20: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮೂಲದ ಔಷಧಿ ಉತ್ಪಾದನಾ ಸಂಸ್ಥೆಯಾದ ಪಿ-ಫಿಜರ್ ತನ್ನ ಕೊರೊನಾವೈರಸ್ ಸೋಂಕಿನ ಲಸಿಕೆಯನ್ನು ಮುಂದಿನ ತಿಂಗಳಿನಿಂದಲೇ ತುರ್ತು ಸಂದರ್ಭದಲ್ಲಿ ಬಳಸುವುದಕ್ಕೆ ಅನುಮತಿ ನೀಡುವಂತೆ ಕೇಳುತ್ತಿದೆ.
ಪಿ-ಫಿಜರ್ ಸಂಸ್ಥೆಯು ನಡೆಸಿದ ಕೊರೊನಾವೈರಸ್ ಲಸಿಕೆ ಸಂಶೋಧನೆಯು ಮೂರು ಹಂತಗಳನ್ನು ಪೂರ್ಣಗೊಳಿಸಿದೆ. ಪಿ-ಫಿಜರ್ ಸಂಸ್ಥೆಯ ಕೊವಿಡ್-19 ಲಸಿಕೆಯು ಶೇ.95ರಷ್ಟು ಪರಿಣಾಮಕಾರಿ ಮತ್ತು ಪ್ರಭಾವಶಾಲಿ ಎಂದು ವೈದ್ಯಕೀಯ ಪ್ರಯೋಗದಲ್ಲಿ ತಿಳಿದು ಬಂದಿದೆ.

Coronavirus in India Live Updates: Live: ದೇಶದಲ್ಲಿ 90 ಲಕ್ಷದ ಗಡಿ ದಾಟಿದ ಒಟ್ಟು ಪ್ರಕರಣಗಳುCoronavirus in India Live Updates: Live: ದೇಶದಲ್ಲಿ 90 ಲಕ್ಷದ ಗಡಿ ದಾಟಿದ ಒಟ್ಟು ಪ್ರಕರಣಗಳು

ತುರ್ತು ಸಂದರ್ಭಗಳಲ್ಲಿ ಈ ಪಿ-ಫಿಜರ್ ಸಂಸ್ಥೆಯ ಕೊವಿಡ್-19 ಲಸಿಕೆಯನ್ನು ಬಳಸುವುದಕ್ಕೆ ಅಮೆರಿಕಾದ ಆಹಾರ ಮತ್ತು ಔಷಧೀಯ ಆಡಳಿತ ಮಂಡಳಿಗೆ ಈಗಿರುವ ಪುರಾವೆಗಳು ಸಾಕಾಗುತ್ತವೆ. ಫಿ-ಫಿಜರ್ ನಡೆಸುತ್ತಿರುವ ಕೊರೊನಾವೈರಸ್ ವೈದ್ಯಕೀಯ ಪ್ರಯೋಗಗಳು ಅಂತಿಮ ಹಂತಕ್ಕೆ ಬಂದು ತಲುಪಿವೆ. ಮೊದಲ ಲಸಿಕೆಯ ಪ್ರಯೋಗದಲ್ಲಿ ಶೇ.95ರಷ್ಟು ಯಶಸ್ಸು ಕಂಡಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.

Covid-19 Vaccine News: Pfizer Asks For Emergency Use Of Its Covid-19 Vaccine From Next Month

ಅಮೆರಿಕಾ ಆಡಳಿತ ಮಂಡಳಿಗೆ ಮನವಿ:
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಪಿ-ಫಿಜರ್ ಸಂಸ್ಥೆಯು ಸಿದ್ಧಪಡಿಸಿರುವ ಕೊರೊನಾವೈರಸ್ ಲಸಿಕೆಯನ್ನು ತುರ್ತು ಪರಿಸ್ಥಿತಿಗಳಲ್ಲಿ ರೋಗಗಳ ಮೇಲೆ ಪ್ರಯೋಗಿಸುವುದಕ್ಕೆ ಅನುಮತಿ ನೀಡುವಂತೆ ಸಂಸ್ಥೆಯು ಅಮೆರಿಕಾದ ಆಡಳಿತ ಮಂಡಳಿಗೆ ಶುಕ್ರವಾರ ಮನವಿ ಸಲ್ಲಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್ ವೇಳೆಗೆ ಪಿ-ಫಿಜರ್ ಸಂಸ್ಥೆಯು ಸಂಶೋಧಿಸಿರುವ ಕೊವಿಡ್-19 ಸೋಂಕಿನ ಲಸಿಕೆಯು ಲಭ್ಯವಾಗಲಿದೆ ಎಂದು ಕಂಪನಿಯು ತಿಳಿಸಿದೆ.

ವಿದೇಶದಲ್ಲಿ ಹಲವು ಕಂಪನಿಗಳು ಕೊರೊನಾವೈರಸ್ ಲಸಿಕೆ ಸಂಶೋಧಿಸುವಲ್ಲಿ ತೊಡಗಿವೆ. ಭಾರತೀಯರಿಗೆ ಕೊರೊನಾವೈರಸ್ ಲಸಿಕೆಯನ್ನು ಒದಗಿಸುವ ಉದ್ದೇಶದಿಂದ ಕೆಲವು ಭಾರತೀಯ ಕಂಪನಿಗಳು ಕೂಡಾ ಅಂಥ ವಿದೇಶಿ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. ಉದಾಹರಣೆಗೆ, ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ವೈದ್ಯಕೀಯ ಪ್ರಯೋಗಗಳನ್ನು ನಡೆಸುತ್ತಿದ್ದು, ಇದರ ಜೊತೆಗೆ ಲಸಿಕೆ ತಯಾರಿಕೆ ಮಾಡುತ್ತಿದೆ.

Recommended Video

Corona ಲಸಿಕೆ ಪೂರೈಸಲು ಮಾಸ್ಟರ್ ಪ್ಲಾನ್ ಮಾಡಿದ Modi | Oneindia Kannada

ಹೀಗಿದ್ದರೂ ಕೂಡಾ ಡಾ. ರೆಡ್ಡೀಸ್ ಅವರ ಪ್ರಯೋಗಾಲಯಗಳಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ವಿತರಣೆಗೆ ಒಪ್ಪಂದ ಮಾಡಿಕೊಂಡಿದೆ.
ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತಮ್ಮ ಲಸಿಕೆಗಳನ್ನು ತಯಾರಿಸಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಸ್ಟ್ರಾಜೆನಿಕಾ, ಕೊಡಾಜೆನಿಕ್ಸ್ ಮತ್ತು ನೊವಾವಾಕ್ಸ್‌ನೊಂದಿಗೆ ಮಾದರಿಯ ಲಸಿಕೆ ಸಂಶೋಧನೆಯಲ್ಲಿ ಸಹಭಾಗಿತ್ವವನ್ನು ಹೊಂದಿದೆ.

English summary
Covid-19 Vaccine News: Pfizer Asks For Emergency Use Of Its Covid-19 Vaccine From Next Month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X