ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾಗೆ ಮೊದಲು ಸಿಗುವ ಲಸಿಕೆ ಯಾವುದು?

|
Google Oneindia Kannada News

ನವದೆಹಲಿ, ನವೆಂಬರ್.19: ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡಬಲ್ಲ ಪರಿಣಾಮಕಾರಿ ಲಸಿಕೆ ಸಂಶೋಧನೆಯಲ್ಲಿ ಜಗತ್ತಿನ ಸಂಶೋಧಕರು ತೊಡಗಿದ್ದಾರೆ. ವಿಶ್ವದಾದ್ಯಂತ ಹಲವು ಕಂಪನಿಗಳು ಕೊವಿಡ್-19 ಸೋಂಕಿನ ಲಸಿಕೆ ಅಭಿವೃದ್ಧಿಪಡಿಸುವುದಕ್ಕೆ ವೈದ್ಯಕೀಯ ಪ್ರಯೋಗಗಳನ್ನು ನಡೆಸುತ್ತಿವೆ.

ಪಿ-ಫಿಜರ್ ಮತ್ತು ಮಾಡರ್ನ್ ಸೇರಿದಂತೆ ಕೆಲವು ಕಂಪನಿಗಳು ಕೊರೊನಾವೈರಸ್ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಪ್ರಾಥಮಿಕ ಯಶಸ್ಸನ್ನು ಗಳಿಸಿವೆ. ಲಸಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆಸಿದ ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳು ಯಶಸ್ವಿ ಆಗಿರುವ ಬಗ್ಗೆ ಕಂಪನಿಗಳು ಇತ್ತೀಚಿಗಷ್ಟೇ ಘೋಷಿಸಿದ್ದವು.

ಡಿಸೆಂಬರ್ ವೇಳೆಗೆ ಭಾರತಕ್ಕೆ ಬರಲಿದೆ 10 ಕೋಟಿ ಕೊರೊನಾ ಲಸಿಕೆಡಿಸೆಂಬರ್ ವೇಳೆಗೆ ಭಾರತಕ್ಕೆ ಬರಲಿದೆ 10 ಕೋಟಿ ಕೊರೊನಾ ಲಸಿಕೆ

ಭಾರತದಲ್ಲಿಯೂ ಕೂಡಾ ಮನುಷ್ಯನ ಮೇಲೆ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಲಸಿಕೆಯು ಎಷ್ಟರ ಮಟ್ಟಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಎನ್ನುವುದನ್ನು ಮಾನವನ ಮೇಲೆ ನಡೆಸುವ ಪ್ರಯೋಗಗಳಿಂದ ತಿಳಿದುಕೊಳ್ಳಲಾಗುತ್ತದೆ. ಆದರೆ ಭಾರತದಲ್ಲಿ ನಡೆಸಿದ ಪ್ರಯೋಗಗಳ ಫಲಿತಾಂಶದ ಕುರಿತು ದತ್ತಾಂಶವು ಇನ್ನಷ್ಟೇ ತಿಳಿದು ಬರಬೇಕಿದೆ. ಭಾರತ ಸೇರಿದಂತೆ ಜಗತ್ತಿನಲ್ಲಿ ಕೊರೊನಾವೈರಸ್ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಕಂಪನಿಗಳು ಯಾವುವು. ಯಾವ ಲಸಿಕೆಗೆ ಸಂಬಂಧಿಸಿದಂತೆ ವೈದ್ಯಕೀಯ ಪ್ರಯೋಗವು ಯಾವ ಹಂತದಲ್ಲಿದೆ. ಕೊವಿಡ್-19 ಲಸಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ.

ಎಷ್ಟು ವಿಧದ ಲಸಿಕೆಗಳನ್ನು ಸಂಶೋಧಿಸಲಾಗುತ್ತಿದೆ?

ಎಷ್ಟು ವಿಧದ ಲಸಿಕೆಗಳನ್ನು ಸಂಶೋಧಿಸಲಾಗುತ್ತಿದೆ?

ಭಾರತದಲ್ಲಿ ಒಟ್ಟು ಐದು ಮಾದರಿಯ ಕೊರೊನಾವೈರಸ್ ಲಸಿಕೆಗಳ ಮೇಲೆ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಅಸ್ಟ್ರಾಜೆನಿಕಾ, ಭಾರತ್ ಬಯೋಟೆಕ್, ಕ್ಯಾಡಿಲಾ, ಬಯೋಲಾಜಿಕಲ್-ಇ ಮಾದರಿಗಳನ್ನು ಕೂಡಾ ಒಳಗೊಂಡಿದೆ.

ವಿದೇಶಿ ಕಂಪನಿ ಜೊತೆಗೆ ಭಾರತೀಯ ಕಂಪನಿಗಳ ಒಪ್ಪಂದ

ವಿದೇಶಿ ಕಂಪನಿ ಜೊತೆಗೆ ಭಾರತೀಯ ಕಂಪನಿಗಳ ಒಪ್ಪಂದ

ವಿದೇಶದಲ್ಲಿ ಹಲವು ಕಂಪನಿಗಳು ಕೊರೊನಾವೈರಸ್ ಲಸಿಕೆ ಸಂಶೋಧಿಸುವಲ್ಲಿ ತೊಡಗಿವೆ. ಭಾರತೀಯರಿಗೆ ಕೊರೊನಾವೈರಸ್ ಲಸಿಕೆಯನ್ನು ಒದಗಿಸುವ ಉದ್ದೇಶದಿಂದ ಕೆಲವು ಭಾರತೀಯ ಕಂಪನಿಗಳು ಕೂಡಾ ಅಂಥ ವಿದೇಶಿ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. ಉದಾಹರಣೆಗೆ, ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ವೈದ್ಯಕೀಯ ಪ್ರಯೋಗಗಳನ್ನು ನಡೆಸುತ್ತಿದ್ದು, ಇದರ ಜೊತೆಗೆ ಲಸಿಕೆ ತಯಾರಿಕೆ ಮಾಡುತ್ತಿದೆ. ಹೀಗಿದ್ದರೂ ಕೂಡಾ ಡಾ. ರೆಡ್ಡೀಸ್ ಅವರ ಪ್ರಯೋಗಾಲಯಗಳಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ವಿತರಣೆಗೆ ಒಪ್ಪಂದ ಮಾಡಿಕೊಂಡಿದೆ.

ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತಮ್ಮ ಲಸಿಕೆಗಳನ್ನು ತಯಾರಿಸಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಸ್ಟ್ರಾಜೆನಿಕಾ, ಕೊಡಾಜೆನಿಕ್ಸ್ ಮತ್ತು ನೊವಾವಾಕ್ಸ್‌ನೊಂದಿಗೆ ಮಾದರಿಯ ಲಸಿಕೆ ಸಂಶೋಧನೆಯಲ್ಲಿ ಸಹಭಾಗಿತ್ವವನ್ನು ಹೊಂದಿದೆ.

ಹೈದ್ರಾಬಾದ್ ಮೂಲದ ಬಯೋಲಾಜಿಕಲ್-ಇ ಲಿಮಿಟೆಡ್ ಕಂಪನಿಯು ಯುಎಸ್ಎ ಮೂಲದ ಡೈನಾವ್ಯಾಕ್ಸ್ ಟೆಕ್ನಾಲಜೀಸ್ ಕಾರ್ಪೋರೇಷನ್ ಮತ್ತು ಬೈಯ್ಲರ್ ಕಾಲೇಜು ಆಫ್ ಮೆಡಿಸನ್ ಜೊತೆಗೆ ಕೊವಿಡ್-19 ಲಸಿಕೆ ಸಂಶೋಧನಾ ಕಾರ್ಯದಲ್ಲಿ ಕೈಜೋಡಿಸಿದೆ.

ಲಸಿಕೆಯ ವೈದ್ಯಕೀಯ ಪ್ರಯೋಗ ಯಾವ ಹಂತದಲ್ಲಿದೆ?

ಲಸಿಕೆಯ ವೈದ್ಯಕೀಯ ಪ್ರಯೋಗ ಯಾವ ಹಂತದಲ್ಲಿದೆ?

ಕಳೆದ ನವೆಂಬರ್.16ರಂದು ಭಾರತದ 25 ಕೇಂದ್ರಗಳಲ್ಲಿ ಭಾರತ ಬಯೋಟೆತ್ ಲಿಮಿಟೆಡ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯನ್ನು ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು ಚಾಲನೆ ನೀಡಿತ್ತು. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿರುವ ಕೊವಿಶೀಲ್ಡ್ ಲಸಿಕೆಯನ್ನು ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಲು ಐಸಿಎಂಆರ್ ನಲ್ಲಿ ನೋಂದಾಯಿಸಿಕೊಳ್ಳಲಾಗಿದೆ. ಕೊವಿಶೀಲ್ಡ್ ಲಸಿಕೆಯ ಮೂರನೇ ಹಂತದ ಪ್ರಯೋಗದಲ್ಲಿ 1600 ಜನರನ್ನು ಬಳಸಿಕೊಳ್ಳಲಾಗುತ್ತಿದೆ.

ಅಹ್ಮದಾಬಾದ್ ಮೂಲದ ಕ್ಯಾಡಿಲಾ ಹೆಲ್ತ್ ‌ಕೇರ್ ಸಂಸ್ಥೆಯು ಈಗಾಗಲೇ ಒಂಬತ್ತು ಸೈಟ್‌ಗಳಲ್ಲಿ 1,000ಕ್ಕೂ ಹೆಚ್ಚು ಜನರ ಮೇಲೆ ಎರಡನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ಪೂರ್ಣಗೊಳಿಸಿದೆ. ಡಾ. ರೆಡ್ಡಿ ಪ್ರಯೋಗಾಲಯವು ಶೀಘ್ರದಲ್ಲೇ ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಲಸಿಕೆಯ ಮೇಲೆ 2 ಮತ್ತು 3ನೇ ಹಂತದ ವೈದ್ಯಕೀಯ ಪ್ರಯೋಗ ಆರಂಭಿಸಲಾಗುತ್ತದೆ.

ಕೊವಿಡ್-19 ಲಸಿಕೆ ಸಂಸ್ಕರಣೆ ಮಾಡುವುದೇ ಸವಾಲು

ಕೊವಿಡ್-19 ಲಸಿಕೆ ಸಂಸ್ಕರಣೆ ಮಾಡುವುದೇ ಸವಾಲು

ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಂತಾ ರಾಷ್ಟ್ರದಲ್ಲಿ ಕೊವಿಡ್-19 ಲಸಿಕೆಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದೇ ದೊಡ್ಡ ಸವಾಲಾಗಿದೆ. ಕೊರೊನಾವೈರಸ್ ಲಸಿಕೆ ಅಭಿವೃದ್ಧಿಪಡಿಸಿದ ನಂತರದಲ್ಲಿ ಅದನ್ನು ಮೈನಸ್ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಸ್ಕರಣೆ ಮಾಡಿ ಇರಿಸಬೇಕಾಗುತ್ತದೆ. ಅದಕ್ಕಾಗಿ ಸಂಸ್ಕರಣಾ ಕೇಂದ್ರಗಳ ವ್ಯವಸ್ಥೆ ಮಾಡುವುದು, ಲಸಿಕೆಯನ್ನು ವಿಮಾನಗಳು, ಶೈತ್ಯೀಕರಿಸಿದ ಟ್ರಕ್ ‌ಗಳು ಮತ್ತು ಐಸ್-ಪೆಟ್ಟಿಗೆಗಳಲ್ಲಿ ಆಸ್ಪತ್ರೆಗಳಿಗೆ ರವಾನೆ ಮಾಡಬೇಕಾಗುತ್ತದೆ.

ಕೊವಿಶೀಲ್ಡ್ ಮತ್ತು ಬಯೋಲಾಜಿಕಲ್-ಇ ಲಸಿಕೆಯನ್ನು ಕನಿಷ್ಠ 2 ರಿಂದ -8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಸ್ಪುಟ್ನಿಕ್ ವಿ, ಮಾಡರ್ನ್, ಪಿ-ಫಿಜರ್, ಬಯೋ ಟೆಕ್ ಲಸಿಕೆಗಳನ್ನು -18 ರಿಂದ -20 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಿಡಬೇಕಾಗಿರುತ್ತದೆ.

English summary
Covid-19 Vaccine News: Different Coronavirus Vaccines And Clinical Trials In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X