ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವ ಉಳಿಸಲು ಕೋವಿಡ್‌ ಲಸಿಕೆ ಅತ್ಯಗತ್ಯ - ಪಿಎಂ ಮೋದಿ

|
Google Oneindia Kannada News

ನವದೆಹಲಿ, ಮೇ 26: ಕೋವಿಡ್‌19 ಅನೇಕ ಮಂದಿಯ ಮನೆ ಬಾಗಿಲಿಗೆ ಸಂಕಟವನ್ನು ತಂದೊಡ್ಡಿದೆ. ಭಾರಿ ಆರ್ಥಿಕ ಪರಿಣಾಮವನ್ನು ಉಂಟುಮಾಡಿದೆ ಎಂದು ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೋವಿಡ್‌ನಿಂದ ಜೀವ ಉಳಿಸಲು ಲಸಿಕೆ ಪಡೆಯವುದು ಅತ್ಯಗತ್ಯ ಎಂದು ಹೇಳಿದ್ದಾರೆ.

ಬುದ್ಧ ಪೂರ್ಣಿಮಾ ಹಿನ್ನೆಲೆ ನಡೆದ ವರ್ಚುವಲ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ಸಾಂಕ್ರಾಮಿಕ ರೋಗವು ಎಲ್ಲಾ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದೆ. ಆದರೆ ಅದರ ವಿರುದ್ಧ ಹೋರಾಡುವ ನಮ್ಮ ಕಾರ್ಯತಂತ್ರವನ್ನು ಬಲಪಡಿಸುವ ಅನೇಕ ಗಮನಾರ್ಹ ಬೆಳವಣಿಗೆಗಳು ನಮ್ಮ ದೇಶದಲ್ಲಿ ನಡೆದಿವೆ. ಬಹು ಮುಖ್ಯವಾಗಿ, ನಮ್ಮಲ್ಲಿ ಲಸಿಕೆ ಇದೆ, ಇದು ಜೀವಗಳನ್ನು ಉಳಿಸಲು ಮತ್ತು ಸಾಂಕ್ರಾಮಿಕ ರೋಗವನ್ನು ಸೋಲಿಸಲು ಅತೀ ಮುಖ್ಯ ಎಂದು ಹೇಳಿದರು.

ಲಸಿಕೆ ಕೊರತೆ: ದೇಶದಲ್ಲಿ ವ್ಯಾಕ್ಸಿನೇಷನ್‌ ವೇಗ ಶೇ 35 ಕ್ಕೆ ಕುಸಿತಲಸಿಕೆ ಕೊರತೆ: ದೇಶದಲ್ಲಿ ವ್ಯಾಕ್ಸಿನೇಷನ್‌ ವೇಗ ಶೇ 35 ಕ್ಕೆ ಕುಸಿತ

ಕೋವಿಡ್‌ ಪತ್ತೆಯಾದ ಒಂದು ವರ್ಷದೊಳಗೆ ಕೋವಿಡ್‌ ಲಸಿಕೆಯನ್ನು ಉತ್ಪಾದಿಸಿರುವುದು ಮಾನವನ ದೃಢತೆಯ ಶಕ್ತಿಯನ್ನು ತೋರಿಸುತ್ತದೆ. ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ನಮ್ಮ ಭಾರತದ ವಿಜ್ಞಾನಿಗಳ ಬಗ್ಗೆ ದೇಶವೇ ಹೆಮ್ಮೆಪಡುತ್ತದೆ. ಇತರರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಕ್ಕಾಗಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನಾನು ನಮಸ್ಕರಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

COVID-19 vaccine absolutely important to defeat pandemic says PM Narendra Modi

ಸಾಂಕ್ರಾಮಿಕ ರೋಗದಲ್ಲಿ ಬಳಲುತ್ತಿರುವ ಮತ್ತು ಮೃತಪಟ್ಟವರ ಬಗ್ಗೆ ಸಂತಾಪ ಸೂಚಿಸುತ್ತಾ, ಮೃತ ಕುಟುಂಬದ ದುಃಖದೊಂದಿಗೆ ನಾನೂ ಭಾಗಿಯಾಗುತ್ತೇನೆ ಎಂದು ಕೂಡಾ ಹೇಳಿದ್ದಾರೆ.

ಇನ್ನು ಹವಾಮಾನ ಬದಲಾವಣೆ ಮತ್ತು ಭಯೋತ್ಪಾದನೆಯ ವಿಷಯಗಳ ಬಗ್ಗೆಯೂ ಮಾತನಾಡಿದ ಮೋದಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಾಗ ನಾವು ಇತರ ಸವಾಲುಗಳ ಬಗ್ಗೆ ಮರೆಯಬಾರದು. ಆ ಕಡೆಯೂ ಗಮನ ಹರಿಸಬೇಕು ಎಂದು ಹೇಳಿದರು.

ಇಲ್ಲಿಯೇ ಲಸಿಕೆ ಕೊರತೆ ಇರುವಾಗ ಪಾಕ್‌ಗೆ ಪೂರೈಸಿದ್ದೇಕೆ? - ಕಾಂಗ್ರೆಸ್‌ ಶಾಸಕ ಖಾದರ್‌ ಪ್ರಶ್ನೆಇಲ್ಲಿಯೇ ಲಸಿಕೆ ಕೊರತೆ ಇರುವಾಗ ಪಾಕ್‌ಗೆ ಪೂರೈಸಿದ್ದೇಕೆ? - ಕಾಂಗ್ರೆಸ್‌ ಶಾಸಕ ಖಾದರ್‌ ಪ್ರಶ್ನೆ

ವರ್ಚುವಲ್ ಕಾರ್ಯಕ್ರಮದಲ್ಲಿ ನೇಪಾಳ ಮತ್ತು ಶ್ರೀಲಂಕಾದ ಪ್ರಧಾನ ಮಂತ್ರಿಗಳು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಜರಾಗಿದ್ದರು. ಪ್ರಧಾನಿ ಮೋದಿ, ನಾವು ಮಾನವೀಯತೆಯನ್ನು ನಂಬುವವವರು, ನಾವೆಲ್ಲರೂ ಒಗ್ಗೂಡಿ ಭಯೋತ್ಪಾದನೆಯನ್ನು ಸೋಲಿಸಬೇಕು ಎಂದು ಕರೆ ನೀಡಿದರು.

COVID-19 vaccine absolutely important to defeat pandemic says PM Narendra Modi

ಗೌತಮ ಬುದ್ಧನ ಜೀವನವು ಶಾಂತಿ, ಸಾಮರಸ್ಯ ಮತ್ತು ಸಹಬಾಳ್ವೆಯ ಕುರಿತಾಗಿದೆ. ವಿಶ್ವದಾದ್ಯಂತ ದ್ವೇಷ, ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುವುವ ಶಕ್ತಿಗಳು ಇನ್ನೂ ಇದೆ. ಇಂತಹ ಶಕ್ತಿಗಳು ಪ್ರಜಾಪ್ರಭುತ್ವ ತತ್ವಗಳನ್ನು ನಂಬುವುದಿಲ್ಲ ಎಂದರು.

ಲಸಿಕೆ ಕೊರತೆ; ಜಾಗತಿಕ ಟೆಂಡರ್ ಮೊರೆ ಹೋದ ರಾಜ್ಯಗಳುಲಸಿಕೆ ಕೊರತೆ; ಜಾಗತಿಕ ಟೆಂಡರ್ ಮೊರೆ ಹೋದ ರಾಜ್ಯಗಳು

ಇನ್ನು ಈ ವೇಳೆ ಹವಾಮಾನ ಬದಲಾವಣೆಯ ವಿಷಯವನ್ನು ಉಲ್ಲೇಖಿಸಿದ ಮೋದಿ, ಪ್ರಸ್ತುತ ಪೀಳಿಗೆಯ ಅಜಾಗರೂಕ ಜೀವನಶೈಲಿ ಭವಿಷ್ಯದ ಪೀಳಿಗೆಗೆ ಅಪಾಯವನ್ನುಂಟುಮಾಡುತ್ತಿದೆ. ಬುದ್ಧ ಅತ್ಯುನ್ನತವಾದ ಜೀವನ ವಿಧಾನಕ್ಕೆ ಒತ್ತು ನೀಡಿದ್ದಾರೆ ಎಂದು ಹೇಳಿದರು.

(ಒನ್ಇಂಡಿಯಾ ಸುದ್ದಿ)

English summary
Prime minister Narendra Modi greeted the nation on the occasion of Buddha Purnima says COVID-19 vaccine absolutely important to defeat pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X