ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 3ನೇ ಅಲೆ:ದೇಶದಲ್ಲಿ ಶೀಘ್ರ ಗರ್ಭಿಣಿಯರಿಗೂ ಕೊರೊನಾ ಲಸಿಕೆ!

|
Google Oneindia Kannada News

ನವದೆಹಲಿ, ಜೂನ್ 21: ಕೊರೊನಾ ಎರಡನೇ ಅಲೆ ಕಡಿಮೆಯಾಗುತ್ತಿದ್ದು, ಮೂರನೇ ಅಲೆಯ ಭೀತಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶೀಘ್ರ ಗರ್ಭಿಣಿಯರಿಗೂ ಕೊರೊನಾ ಲಸಿಕೆ ನೀಡುವ ಸಾಧ್ಯತೆ ಇದೆ.

ಈಗ ಹಾಲುಣಿಸುವ ಮಹಿಳೆಯರಿಗೂ ಕೊರೊನಾ ಲಸಿಕೆಗೆ ಅವಕಾಶ ನೀಡಲಾಗಿದೆ. ಆದರೆ ಸುರಕ್ಷತಾ ಮಾಹಿತಿಯ ಕೊರತೆಯಿಂದಾಗಿ ಗರ್ಭಿಣಿಯರಿಗೆ ಸರ್ಕಾರ ಲಸಿಕೆ ನೀಡಲು ಶಿಫಾರಸು ಮಾಡಿಲ್ಲ.

ತಜ್ಞರ ತಂಡ ಶಿಫಾರಸಿನ ನಂತರ ಕೇಂದ್ರ ಆರೋಗ್ಯ ಸಚಿವಾಲಯವು ಗರ್ಭಿಣಿಯರಿಗೆ ಶೀಘ್ರದಲ್ಲೇ ಕೋವಿಡ್ -19 ಲಸಿಕೆ ನೀಡಲು ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

 ಕೋವಿಡ್ 19: ಗರ್ಭಾವಸ್ಥೆ, ಪ್ರಸವಾನಂತರದಲ್ಲಿ ಸೋಂಕು ಪ್ರಮಾಣ ಹೆಚ್ಚಳ ಕೋವಿಡ್ 19: ಗರ್ಭಾವಸ್ಥೆ, ಪ್ರಸವಾನಂತರದಲ್ಲಿ ಸೋಂಕು ಪ್ರಮಾಣ ಹೆಚ್ಚಳ

ಕೊರೊನಾ ವೈರಸ್ ಬಾರದಂತೆ ಲಸಿಕೆ ಪಡೆದ ಗರ್ಭಿಣಿ ತಾಯಿಗೆ ಹುಟ್ಟಿದ ಮಗುವಿನಲ್ಲಿ ಪ್ರತಿಕಾಯ ಪತ್ತೆಯಾಗಿರುವ ಮೊದಲ ಪ್ರಕರಣ ಅಮೆರಿಕದಲ್ಲಿ ಮಾರ್ಚ್ ತಿಂಗಳಲ್ಲಿ ವರದಿಯಾಗಿತ್ತು.

ಅಚ್ಚರಿಯೆಂದರೆ ಈ ತಾಯಿ ಕೇವಲ ಮೊದಲ ಡೋಸ್ ಪಡೆದಿದ್ದಳು, ಆದರೆ ಆಕೆಗೆ ಹುಟ್ಟಿರುವ ಹೆಣ್ಣುಮಗುವಿನಲ್ಲೂ ಆಂಟಿಬಾಡಿ ಪತ್ತೆಯಾಗಿದೆ.

ತಾಯಿಯಿಂದ ಮಗುವಿನ ಹೊಕ್ಕಳಬಳ್ಳಿ ಮೂಲಕ ಕೊರೊನಾ ಪ್ರತಿಕಾಯಗಳು ವರ್ಗಾವಣೆಯಾಗುವ ಸಾಧ್ಯತೆ ತೀರಾ ಅಂದರೆ ತೀರಾ ಕಡಿಮೆ ಎಂದು ಇಲ್ಲಿಯವರೆಗೆ ತಜ್ಞರು ಹೇಳುತ್ತಿದ್ದರು.

ಆದರೆ ಅಮೆರಿಕದಲ್ಲಿ ಈ ಕುರಿತು ನಡೆದ ಅಧ್ಯಯನದಲ್ಲಿ ಪಾಲ್ಗೊಂಡ ಗರ್ಭಿಣಿ 36ನೇ ವಾರದಲ್ಲಿ ಮೊದಲ ಡೋಸ್ ಲಸಿಕೆ ಪಡೆದು, 3 ವಾರದ ಬಳಿಕ ಮಗುವಿಗೆ ಜನ್ಮ ನೀಡಿದ್ದರು. ಮಗುವಿನಲ್ಲಿ ಪ್ರತಿಕಾಯ ಪತ್ತೆಯಾಗಿದೆ. ನಂತರ ಪೂರ್ವ ನಿಗದಿಯಾದಂತೆ 28 ದಿನಗಳ ಬಳಿಕ ಎರಡನೇ ಡೋಸ್ ಪಡೆದಿದ್ದಾರೆ.

 ಸ್ಪಷ್ಟ ಮಾರ್ಗಸೂಚಿ ಪ್ರಕಟ

ಸ್ಪಷ್ಟ ಮಾರ್ಗಸೂಚಿ ಪ್ರಕಟ

ರೋಗನಿರೋಧಕ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ನೀಡುವ ಶಿಫಾರಸು ಅನುಸರಿಸಿ ಗರ್ಭಿಣಿಯರಿಗೆ ಕೋವಿಡ್ ವ್ಯಾಕ್ಸಿನೇಷನ್ ಅನುಮತಿಸುವ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಕೋವ್ಯಾಕ್ಸಿನ್ ಶಿಫಾರಸು ಮಾಡಬಹುದು

ಕೋವ್ಯಾಕ್ಸಿನ್ ಶಿಫಾರಸು ಮಾಡಬಹುದು

ತಜ್ಞರ ತಂಡಗಳು ಸೂಚಿಸಿದಂತೆ, ಲಸಿಕೆಗಳು ಸಾಂಪ್ರದಾಯಿಕವಾಗಿ ಗರ್ಭಿಣಿಯರಿಗೆ ಸುರಕ್ಷಿತವೆಂದು ಕಂಡುಬಂದಿರುವುದರಿಂದ ತಜ್ಞರ ತಂಡ ಕೋವಿಶೀಲ್ಡ್ ಬದಲಿಗೆ ಕೋವ್ಯಾಕ್ಸಿನ್ ಅನ್ನು ಶಿಫಾರಸು ಮಾಡಬಹುದು ಎಂದು ಆರೋಗ್ಯ ಸಚಿವಾಲಯದ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

 ಸಭೆಯಲ್ಲಿ ಚರ್ಚೆ

ಸಭೆಯಲ್ಲಿ ಚರ್ಚೆ

ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಸೋಂಕಿನಿಂದ ಉಂಟಾಗುವ ಅಪಾಯಗಳು, ವ್ಯಾಕ್ಸಿನೇಷನ್‌ನ ಪ್ರಯೋಜನಗಳ ಕುರಿತಾದ ಮಾಹಿತಿಯೊಂದಿಗೆ ಕೋವಿಡ್ 19 ಲಸಿಕೆಗಳನ್ನು ನೀಡಬೇಕೆಂದು ಎನ್‌ಟಿಎಜಿಐ ಮೇ 28ರ ಸಭೆಯಲ್ಲಿ ಹೇಳಿತ್ತು.

 ಅಪಾಯದ ಬಗ್ಗೆ ಚಿಂತನೆ

ಅಪಾಯದ ಬಗ್ಗೆ ಚಿಂತನೆ

ಗರ್ಭಧಾರಣೆಯ ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಕೊರೊನಾದಿಂದಾಗುವ ಅಪಾಯದ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ ಗರ್ಭಿಣಿಯರಿಗೆ ಲಸಿಕೆ ಆಯ್ಕೆ ಮಾಡುವ ಆಯ್ಕೆಯನ್ನು ನೀಡುವುದರ ಬಗ್ಗೆ ತಿರ್ಮಾನಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

English summary
The Union health ministry is likely to allow COVID-19 vaccination for pregnant women soon following recommendation by the expert groups, multiple government officials told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X