ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19: ಧೂಮಪಾನಿಗಳಿಗೆ ಎಚ್ಚರಿಕೆ ನೀಡಿದ ಇಲಾಖೆ

|
Google Oneindia Kannada News

ನವದೆಹಲಿ, ಜುಲೈ 29: ಕೊರೊನಾವೈರಸ್ ಸಾಂಕ್ರಾಮಿಕ ಸೋಂಕಿನ ಶಂಕಿತ ವ್ಯಕ್ತಿಗಳು ಧೂಮಪಾನಿಗಳಾಗಿದ್ದರೆ ಅವರುಗಳ ಮೇಲೆ ಸೋಂಕು ಕ್ಷಿಪ್ರವಾಗಿ ಇನ್ನಷ್ಟು ಪರಿಣಾಮ ಬೀರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಸಿದೆ.

Recommended Video

ಕನ್ನಡಕ್ಕಾಗಿ ದನಿ ಎತ್ತುವ ಧೀಮಂತ ನಾಯಕ | Oneindia Kannada

ಧೂಮಪಾನಿಗಳಲ್ಲಿ ಕೈಯಿಂದ ತುಟಿಗೆ ಬಾಯಿಗೆ ವೈರಾಣು ಹಬ್ಬುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ, ಧೂಮಪಾನಿಗಳಿಗೆ ಶ್ವಾಸಕೋಶ ಮತ್ತು ಹೃದಯ ಸೋಂಕಿನ ಅಪಾಯದ ತೀವ್ರತೆಗಳು ಹೆಚ್ಚಿವೆ, ಇದರಿಂದ ಅವರುಗಳು ಉಸಿರಾಟದ ತೊಂದರೆಗಳಿಗೂ ಸಿಲುಕಲಿದ್ದಾರೆ. ಧೂಮಪಾನಿಗಳಿಗೆ ಮೊದಲೇ ಶ್ವಾಸಕೋಶಗಳು ಹಾನಿಗೊಳಗಾಗಿರುವುದರಿಂದ ಅವರಿಗೆ ಕೊರೋನಾ ಸೋಂಕು ತಗುಲಿದರೆ ಅದು ಅವರ ಮೇಲೆ ಇನ್ನಷ್ಟು ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಕೋವಿಡ್-19: ಧೂಮಪಾನಿಗಳಿಗೆ ಹೆಚ್ಚು ಅಪಾಯ-ಡಾ. ವಿಶಾಲ್ ರಾವ್ಕೋವಿಡ್-19: ಧೂಮಪಾನಿಗಳಿಗೆ ಹೆಚ್ಚು ಅಪಾಯ-ಡಾ. ವಿಶಾಲ್ ರಾವ್

ಅಲ್ಲದೆ ಪರೋಕ್ಷ ಧೂಮಪಾನವೂ ಕೂಡ ಶ್ವಾಸಕೋಶ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ಹೃದಯ ಮತ್ತು ಉಸಿರಾಟದ ಸೋಂಕಿಗೂ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಧೂಮಪಾನಿಗಳು ಧೂಮಪಾನ ಮಾಡದಂತವರ ಬಳಿ ಸೇರದಿರುವುದು ಅತಿ ಮುಖ್ಯ

COVID-19: Smokers likely to be more vulnerable as fingers touch lips, says Govt

ಧೂಮಪಾನ ಶ್ವಾಸಕೋಶದ ಕಾರ್ಯವನ್ನು ದುರ್ಬಲಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಧೂಮಪಾನಿಗಳಿಗೆ ಕೋವಿಡ್ ಸೋಂಕು ತಗುಲಿದರೆ ಅವರಲ್ಲಿ ಆರೋಗ್ಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿದ್ದು, ಅಂತವರು ಮರಣ ಹೊಂದುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಕೊರೊನಾ ವೈರಸ್ ಹರಡುತ್ತಿರೋ ಈ ಸಮಯದಲ್ಲಿ ಸಿಗರೇಟ್ ಸೇದುವುದು ಅಪಾಯ!ಕೊರೊನಾ ವೈರಸ್ ಹರಡುತ್ತಿರೋ ಈ ಸಮಯದಲ್ಲಿ ಸಿಗರೇಟ್ ಸೇದುವುದು ಅಪಾಯ!

ಸಿಗರೇಟ್, ಬೀಡಿಯಲ್ಲದೆ, ಹುಕ್ಕಾ, ಪೈಪ್ ಮುಂತಾದ ಯಾವುದೇ ರೀತಿ ಬಳಕೆ ಕೂಡಾ ವ್ಯಕ್ತಿಯಿಂದ ಸಮುದಾಯಕ್ಕೆ ಸೋಂಕು ಹರಡಿಸಬಹುದು ಎಂದು ಹೇಳಲಾಗಿದೆ.

COVID-19: Smokers likely to be more vulnerable as fingers touch lips, says Govt

ಧೂಮಪಾನ ಮಾಡದಿದ್ದರೆ ಶ್ವಾಸಕೋಶ, ಹೃದಯ ಮತ್ತು ದೇಹದ ಇತರೆ ಅಂಗಗಳಿಗೂ ಅನುಕೂಲವಾಗುತ್ತದೆ. ಸಾಂಕ್ರಮಿಕವಲ್ಲದ ರೋಗಗಳಾದ(NCDs) ಹೃದಯಸಂಬಂಧಿ ಸಮಸ್ಯೆ, ಕ್ಯಾನ್ಸರ್, ಶ್ವಾಸಕೋಶ ಕಾಯಿಲೆ,ಡಯಾಬಿಟಿಸ್ ಕೂಡಾ ಈ ಸಂದರ್ಭದಲ್ಲಿ ಮಾರಕವಾಗಿ ಪರಿಣಮಿಸುತ್ತವೆ. ದೇಶದಲ್ಲಿ ಶೇ 63ರಷ್ಟು ಮಂದಿ Non-communicable Diseases ಗೆ ತುತ್ತಾಗಿ ಮರಣ ಹೊಂದುತ್ತಿದ್ದಾರೆ. ಹೀಗಾಗಿ, ಧೂಮಪಾನಿಗಳಿಗೆ ಕೋವಿಡ್ ಸೋಂಕು ತಗುಲದೇ ಇದ್ದರೂ ಸಹ ಧೂಮಪಾನವನ್ನು ವರ್ಜಿಸಲು ಇದು ಸೂಕ್ತವಾದ ಸಮಯ ಎಂದು ಇಲಾಖೆ ಹೇಳಿದೆ.

English summary
Government has issued a guideline wherein it said smokers are likely to be more vulnerable to COVID-19 as fingers and possibly contaminated cigarettes are in contact with lips.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X