ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ರೋಗಿಗಳಿಗೆ ಮಧುಮೇಹವಿಲ್ಲದಿದ್ದರೂ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಕೊರೊನಾ ಸೋಂಕು ಮಧುಮೇಹವಿಲ್ಲದ ರೋಗಿಗಳ ರಕ್ತದಲ್ಲೂ ಸಕ್ಕರೆ ಅಂಶವನ್ನು ಹೆಚ್ಚಿಸುತ್ತಿದೆ.

ಹೀಗಾಗಿ ದೇಹವು ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಕಷ್ಟವಾಗುತ್ತಿದೆ. ಒಂದೊಮ್ಮೆ ಮಧುಮೇಹ ರೋಗಿಗಳಿಗೆ ಕೊರೊನಾ ಸೋಂಕು ಬಂದರೆ, ಅದು ತೀವ್ರವಾಗುವುದರ ಜತೆಗೆ ಬೇರೆ ಬೇರೆ ರೋಗಗಳಿಗೂ ತಿರುಗುವ ಸಾಧ್ಯತೆ ಇದೆ.

ಸಾಮಾನ್ಯ ನೆಗಡಿಯಿದ್ದರೂ ಕೊವಿಡ್ ಪರೀಕ್ಷೆ ಮಾಡಿಸಿ: ವೈದ್ಯರ ಸಲಹೆಸಾಮಾನ್ಯ ನೆಗಡಿಯಿದ್ದರೂ ಕೊವಿಡ್ ಪರೀಕ್ಷೆ ಮಾಡಿಸಿ: ವೈದ್ಯರ ಸಲಹೆ

ಮಧುಮೇಹ ರೋಗಿಗಳಿಗೆ ಕೊರೊನಾ ಸೋಂಕು ತಗುಲಿದರೆ ಬೇಗ ಗುಣಮುಖರಾಗಲು ಸಾಧ್ಯವಿಲ್ಲ. ಈ ಕೊರೊನಾ ಸೋಂಕು ಕೂಡ ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುವುದರಿಂದ ರೋಗ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಅತಿಯಾದ ಬ್ಲಡ್ ಶುಗರ್‌ನಿಂದಾಗುವ ಪರಿಣಾಮವೇನು?

ಅತಿಯಾದ ಬ್ಲಡ್ ಶುಗರ್‌ನಿಂದಾಗುವ ಪರಿಣಾಮವೇನು?

ಮಧುಮೇಹವಿಲ್ಲದ ರೋಗಿಗಳ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದರಿಂದ ಟೈಪ್ 1, ಟೈಪ್ 2 ಮಧುಮೇಹಕ್ಕೆ ತುತ್ತಾಗುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದ ನರಹಾನಿ, ದೃಷ್ಟಿದೋಷ, ಮೂತ್ರಕೋಶ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ.

ಮಧುಮೇಹ ರೋಗಿಗಳಿಗೆ ಕೊರೊನಾ ಬಂದರೆ

ಮಧುಮೇಹ ರೋಗಿಗಳಿಗೆ ಕೊರೊನಾ ಬಂದರೆ

ಈಗಾಗಲೇ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಕೊರೊನಾ ಸೋಂಕು ತಗುಲಿದರೆ, ಬದುಕುಳಿಯುವುದೇ ಕಷ್ಟ ಏಕೆಂದರೆ ಈಗಾಗಲೇ ರಕ್ತದಲ್ಲಿ ಸಕ್ಕರೆ ಅಂಶವಿರುತ್ತದೆ, ಸೋಂಕಿನಿಂದಾಗಿ ಮತ್ತಷ್ಟು ಸಕ್ಕರೆ ಅಂಶ ರಕ್ತದಲ್ಲಿ ಹೆಚ್ಚಾಗಲಿದೆ. ಇದರಿಂದ ತೀವ್ರ ತರಹದ ತೊಂದರೆಗೆ ಒಳಗಾಗಲಿದ್ದಾರೆ.

ಫಾವಿಪಿರಾವಿರ್ ಲಸಿಕೆಯಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಳ?

ಫಾವಿಪಿರಾವಿರ್ ಲಸಿಕೆಯಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಳ?

ಫಾವಿಪಿರಾವಿರ್ ಆಂಟಿವೈರಲ್ ಲಸಿಕೆಯಿಂದ ಕೊರೊನಾ ಸೋಂಕಿತರ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಲಿದೆ ಎಂದು ಕೆಲವು ಸಂಶೋಧಕರು ಹೇಳಿದ್ದಾರೆ. ವೈರಲ್ ಇನ್ಫೆಕ್ಷನ್‌ಗಳು ರಕ್ತದಲ್ಲಿ ಸಕ್ಕರೆ ಅಂಶವನ್ನ ಹೆಚ್ಚಿಸುತ್ತವೆ. ಫಾವಿಪಿರಾವಿರ್‌ ಅನ್ನು ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ತುರ್ತು ಪರಸ್ಥಿತಿಯಲ್ಲಿ ಬಳಕೆ ಮಾಡಲು ಅನುಮತಿ ನೀಡಿದೆ.

Recommended Video

ಗೃಹ ಸಚಿವ Basavaraj Bommaiಗೆ ಕೋವಿಡ್ ಸೋಂಕು | Oneindia Kannada
ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿರುವವರು ಏನು ಮಾಡಬೇಕು

ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿರುವವರು ಏನು ಮಾಡಬೇಕು

ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿರುವವರು ಅಥವಾ ಮಧುಮೇಹವಿರುವವರು ನಿತ್ಯ ಎರಡು ಬಾರಿ ಗ್ಲೂಕೋಸ್ ಮೀಟರ್‌ನಲ್ಲಿ ಪರೀಕ್ಷೆ ಮಾಡಬೇಕು.
-ಶುಗರ್ ಲೆವೆಲ್ 130 ಅಥವಾ 170ಕ್ಕಿಂತ ಹೆಚ್ಚಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು
-ಕೆಲವು ರೋಗಿಗಳು ಇನ್ಸುಲಿನ್ ತೆಗೆದುಕೊಳ್ಳುವ ಅನಿವಾರ್ಯತೆ ಇರುತ್ತದೆ.
-ಶುಗರ್ ಜ್ಯೂಸ್, ಸೋಡಾವನ್ನು ಕುಡಿಯಬಾರದು, ನೀರನ್ನು ಹೆಚ್ಚು ಕುಡಿಯಬೇಕು
-ವ್ಯಾಯಾಮ ಇನ್ನಿತರೆ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಬೇಕು
-ಪ್ರತಿ ನಿತ್ಯ ಒಳ್ಳೆಯ ನಿದ್ದೆ ಮಾಡಬೇಕು
-ವೈದ್ಯರು ನೀಡಿರುವ ಔಷಧವನ್ನು ಸೇವಿಸಬೇಕು.

English summary
Any infection, including the COVID-19 disease, will raise the blood sugar levels. This is the normal response of the body to help the body cope with the infection. However, sometimes this normal response gets out of proportion, thereby increasing the blood sugar levels excessively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X