• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಐದು ರಾಜ್ಯಗಳಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ

|

ನವದೆಹಲಿ, ಸೆಪ್ಟೆಂಬರ್ 24: ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದ, ಐದು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.

ಕಳೆದ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಆಂಧ್ರಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶೇ.30ರಷ್ಟು ಕಡಿಮೆಯಾಗಿದೆ.

ದೆಹಲಿಯಲ್ಲಿ ಕೊರೊನಾ ಎರಡನೇ ಅಲೆ ಇದೀಗ ತಾರಕ್ಕೇರಿದೆ: ಕೇಜ್ರಿವಾಲ್

ಸೆಪ್ಟೆಂಬರ್ 10ರವರೆಗೆ ಆಂಧ್ರಪ್ರದೇಶದಲ್ಲಿ ನಿತ್ಯ 10 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿತ್ತು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.

ಮಹಾರಾಷ್ಟ್ರದಲ್ಲಿ 273497 ಸಕ್ರಿಯ ಪ್ರಕರಣಗಳಿವೆ, ಆಂಧ್ರಪ್ರದೇಶದಲ್ಲಿ 70,357, ತಮಿಳುನಾಡಿನಲ್ಲಿ 46249, ಕರ್ನಾಟಕದಲ್ಲಿ 9452, ಉತ್ತರ ಪ್ರದೇಶದಲ್ಲಿ 61698 ಸಕ್ರಿಯ ಪ್ರಕರಣಗಳಿವೆ.

ಆಂಧ್ರದಲ್ಲಿ 8 ಸಾವಿರಕ್ಕಿಂತ ಕೆಳಗಿಳಿದ ಕೊರೊನಾ ಸೋಂಕಿತರ ಸಂಖ್ಯೆ

ಆಂಧ್ರದಲ್ಲಿ 8 ಸಾವಿರಕ್ಕಿಂತ ಕೆಳಗಿಳಿದ ಕೊರೊನಾ ಸೋಂಕಿತರ ಸಂಖ್ಯೆ

ಆಂಧ್ರಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8 ಸಾವಿರಕ್ಕಿಂತ ಕಡಿಮೆ ಇದೆ, ಅಲ್ಲಿ ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಕಳೆದ ಕೆಲವು ದಿನಗಳಿಂದ ಗುಣಮುಖರಾಗುತ್ತಿರುವವರು ಸಂಖ್ಯೆಯೂ ಕೂಡ 10 ಸಾವಿರ ದಾಟಿದೆ.

ಮಹಾರಾಷ್ಟ್ರದಲ್ಲಿ ಶೇ.10ರಷ್ಟು ಪ್ರಕರಣಗಳು ಇಳಿಕೆ

ಮಹಾರಾಷ್ಟ್ರದಲ್ಲಿ ಶೇ.10ರಷ್ಟು ಪ್ರಕರಣಗಳು ಇಳಿಕೆ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶೇ.10ರಷ್ಟು ಇಳಿದಿದೆ. ಇದೀಗ ಕೊರೊನಾ ಸೋಂಕಿತರ ಸಂಖ್ಯೆ 2.75ರಷ್ಟಿದೆ. ಹಾಗೆಯೇ ತಮಿಳುನಾಡು, ಕರ್ನಾಟ, ಉತ್ತರಪ್ರದೇಶದಲ್ಲಿ ಕೂಡ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರತಿನಿತ್ಯ ದೇಶದಲ್ಲಿ 9.81 ಲಕ್ಷ ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಕಳೆದ ಒಂದು ವಾರದ ಹಿಂದೆ ನಿತ್ಯ 10.94ಲಕ್ಷ ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಬೇಕಿತ್ತು. ನಿತ್ಯ ಸರಾಸರಿ 90 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿದ್ದವು, ಸೆಪ್ಟೆಂಬರ್ 5 ರಂದು 90 ಸಾವಿರಕ್ಕೂ ಹೆಚ್ಚು ಪ್ರರಣಗಳು ಪತ್ತೆಯಾಗಿದ್ದವು, ಇದೀಗ ಕೊಂಚ ಕಡಿಮೆಯಾಗಿದೆ.

ತಮಿಳುನಾಡಿನಲ್ಲಿ ಒಟ್ಟು ಪ್ರಕರಣಗಳು ಎಷ್ಟಿವೆ?

ತಮಿಳುನಾಡಿನಲ್ಲಿ ಒಟ್ಟು ಪ್ರಕರಣಗಳು ಎಷ್ಟಿವೆ?

ತಮಿಳುನಾಡಿನಲ್ಲಿ ಒಟ್ಟು 557999 ಪ್ರಕರಣಗಳಿವೆ, 5325 ಹೊಸ ಪ್ರಕರಣಗಳು ಪತ್ತೆಯಾಗಿದೆ. ಒಟ್ಟು 502740 ಮಂದಿ ಗುಣಮುಖರಾಗಿದ್ದಾರೆ. 9010 ಮಂದಿ ಸಾವನ್ನಪ್ಪಿದ್ದಾರೆ.

ಕರ್ನಾಟಕದ ಕೊರೊನಾ ಸೋಂಕಿತರ ಸಂಖ್ಯೆ

ಕರ್ನಾಟಕದ ಕೊರೊನಾ ಸೋಂಕಿತರ ಸಂಖ್ಯೆ

ಕರ್ನಾಟಕದಲ್ಲಿ 540847 ಕೊರೊನಾ ಸೋಂಕಿತರಿದ್ದಾರೆ, 6997 ಹೊಸ ಪ್ರಕರಣಗಳು ದಾಖಲಾಗಿವೆ. 437,910 ಮಂದಿ ಚೇತರಿಸಿಕೊಂಡಿದ್ದಾರೆ.8285 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ.

English summary
consistent with the trend at the national level, the states with the five highest coronavirus caseloads in the country have also been showing a welcome decline in the number of active cases for the last few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X