ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19: 'ಫೆಲುಡಾ' ರ‍್ಯಾಪಿಡ್ ಆ್ಯಂಟಿಜನ್‌ ಪರೀಕ್ಷೆಗಿಂತಲೂ ಉತ್ತಮ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 29: ಫೆಲುಡಾ ಪರೀಕ್ಷೆ ರ‍್ಯಾಪಿಡ್ ಆ್ಯಂಟಿಜನ್‌ಪರೀಕ್ಷೆಗಿಂತಲೂ ಉತ್ತಮ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಹೆಮ್ಮೆ ಪಡುವಂತಹ, ವಿಶ್ವಕ್ಕೇ ಮಾದರಿಯಾಗುವ, ದೇಶಿಯವಾಗಿ ತಯಾರಿಸಲಾಗಿರುವ ಫೆಲುಡಾ ಕೊರೊನಾ ಟೆಸ್ಟಿಂಗ್ ವಿಧಾನಕ್ಕೆ ಭಾರತದ ಔಷಧ ನಿಯಂತ್ರಕ ಅನುಮೋದನೆ ನೀಡಿದೆ.

ಕೊವಿಡ್-19 ಗೆ ಕಾರಣವಾಗುವ SARS Cov-2 ವೈರಾಣುವನ್ನು ಪತ್ತೆ ಮಾಡುವುದಕ್ಕೆ ಈ ಪರೀಕ್ಷಾ ವಿಧಾನದಲ್ಲಿ ಸಿಆರ್ ಐಎಸ್ ಪಿ ಆರ್ (CRISPR) ಜೀನ್-ಎಡಿಟಿಂಗ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಆಸ್ಪತ್ರೆ ಪರಿಸರದಲ್ಲಿ ಕೊರೊನಾ ಸೋಂಕು ಎಷ್ಟು ಸಮಯ ಇರುತ್ತೆ?:ಒಂದು ಅಧ್ಯಯನ ಆಸ್ಪತ್ರೆ ಪರಿಸರದಲ್ಲಿ ಕೊರೊನಾ ಸೋಂಕು ಎಷ್ಟು ಸಮಯ ಇರುತ್ತೆ?:ಒಂದು ಅಧ್ಯಯನ

ಈ ಟೆಸ್ಟಿಂಗ್ ವಿಧಾನವನ್ನು ವಾಣಿಜ್ಯವಾಗಿ ಬಳಕೆ ಮಾಡುವುದಕ್ಕೆ ಔಷಧ ನಿಯಂತ್ರಕ ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಿದೆ.

ಐಜಿಐಬಿ ಹಾಗೂ ಟಾಟಾಗ್ರೂಪ್‌ನ ಸಾಧನೆ

ಐಜಿಐಬಿ ಹಾಗೂ ಟಾಟಾಗ್ರೂಪ್‌ನ ಸಾಧನೆ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಯ ಮಂಡಳಿಯ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ದೆಹಲಿ ಹಾಗೂ ಟಾಟಾ ಗ್ರೂಪ್ ನ ಫಲವಾಗಿ ಈ ಅದ್ಭುತ ಸಾಧನೆ ಹೊರಬಂದಿದ್ದು ಈ ವಿಧಾನಕ್ಕೆ ಫೆಲುಡಾ ಎಂದು ನಾಮಕರಣ ಮಾಡಲಾಗಿದೆ.

ವಿಶ್ವದ ಮೊದಲ ಡಯಾಗ್ನೋಸ್ಟಿಕ್ ಪರೀಕ್ಷೆ

ವಿಶ್ವದ ಮೊದಲ ಡಯಾಗ್ನೋಸ್ಟಿಕ್ ಪರೀಕ್ಷೆ

ಟಾಟಾ ಸಿಆರ್ ಐಎಸ್ ಪಿಆರ್ ಟೆಸ್ಟ್, ಕೋವಿಡ್-19 ನ್ನು ಪರೀಕ್ಷೆ ಮಾಡಲು ವಿಶೇಷವಾಗಿ ಅಳವಡಿಕೆ ಮಾಡಿಕೊಳ್ಳಲಾಗಿರುವ ಸಿಎಎಸ್9 ಪ್ರೊಟೀನ್ ನ್ನು ನಿಯೋಜನೆ ಮಾಡುತ್ತಿರುವ ವಿಶ್ವದ ಮೊದಲ ಡಯಾಗ್ನೋಸ್ಟಿಕ್ ಪರೀಕ್ಷೆ ಇದಾಗಿರುವುದಾಗಿ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದಾಗ ದೇವಜ್ಯೋತಿ ಚಕ್ರವರ್ತಿ ಹಾಗೂ ಸೌವಿಕ್ ಮೈತಿ ನೇತೃತ್ವದ ಐಜಿಐಬಿ ತಂಡ ಜೀನೋಮ್ ಆಧಾರಿತ ರೋಗ ಪತ್ತೆ ಟೂಲ್ ಗಾಗಿ ಕೆಲಸ ಮಾಡುತ್ತಿತ್ತು. 100 ದಿನಗಳಲ್ಲಿ ತಮ್ಮ ಪ್ರಯತ್ನದಲ್ಲಿ ಈ ತಂಡ ಯಶಸ್ವಿಯಾಗಿದ್ದು ಅದರ ಫಲಿತವೇ ಫೆಲುಡಾ ಎಂದು ಐಜಿಐಬಿ ನಿರ್ದೇಶಕ ಡಾಾನುರಾಗ್ ಅವರ್ಗಾಲ್ ತಿಳಿಸಿದ್ದಾರೆ.

ಫೆಲುಡಾ ವಿಶೇಷತೆಯೇನು?

ಫೆಲುಡಾ ವಿಶೇಷತೆಯೇನು?

-ಅತ್ಯಂತ ಕಡಿಮೆ ಬೆಲೆ ಈಗಿನ ಅಂದಾಜಿನ ಪ್ರಕಾರ 600 ರೂಪಾಯಿಗಳಿಗೆ ಪರೀಕ್ಷೆ ಮುಕ್ತಾಯಗೊಳ್ಳಲಿದೆ.
-ಗರ್ಭಧಾರಣೆಯನ್ನು ತ್ವರಿತವಾಗಿ ದೃಢಪಡಿಸುವ ಟೆಸ್ಟ್ ಮಾದರಿಯಲ್ಲಿ ಈ ಫೆಲುಡಾ ಕಾರ್ಯನಿರ್ವಹಿಸಲಿದೆ. ಅರ್ಥಾತ್ ಕಾಗದದ ಪಟ್ಟಿ ಬಣ್ಣ ಬದಲಾಯಿಸುವ ಮೂಲಕ ಕೊರೋನಾ ವೈರಸ್ ಇದೆಯೇ ಇಲ್ಲವೇ ಎಂಬುದನ್ನು ದೃಢೀಕರಿಸುತ್ತದೆ.
-ಜಾಗತಿಕ ಆರೋಗ್ಯ ಸೇವೆ ಹಾಗೂ ವಿಜ್ಞಾನ ಸಂಶೋಧನಾ ಜಗತ್ತಿಗೆ ಭಾರತ ಕೊಡುಗೆ ನೀಡಬಲ್ಲದು.
-ಅತ್ಯದ್ಭುತ ಸಂಶೋಧನಾ ಮತ್ತು ಅಭಿವೃದ್ಧಿಯ ಪ್ರತಿಭೆಗಳು ದೇಶದಲ್ಲಿರುವುದನ್ನು ಫೆಲುಡಾ ಪ್ರತಿಬಿಂಬಿಸುತ್ತಿದೆ.
-ಮುಂದಿನ ದಿನಗಳಲ್ಲಿ ಇದನ್ನು ಬೇರೆ ರೋಗಕಾರಕಗಳನ್ನು ಪತ್ತೆ ಮಾಡುವುದಕ್ಕೂ ಸಹ ಪುನರ್ವಿನ್ಯಾಸಗೊಳಿಸಬಹುದಾಗಿದೆ.
-ಫೆಲುಡಾವನ್ನು ಮೇಡ್ ಇನ್ ಇಂಡಿಯಾ ಉತ್ಪನ್ನವಾಗಿಸಲು ಸಿಎಸ್ಐಆರ್-ಐಜಿಐಬಿ ಹಾಗೂ ಐಸಿಎಂಆರ್ ನೊಂದಿಗೆ ಟಾಟಾ ಗ್ರೂಪ್ ಸಹಕರಿಸಿದೆ.

2 ಗಂಟೆಗಳಲ್ಲಿ ಫಲಿತಾಂಶ

2 ಗಂಟೆಗಳಲ್ಲಿ ಫಲಿತಾಂಶ

ಫೆಲುಡಾ ಮೂಲಕ ಅತ್ಯಂತ ನಿಖರವಾಗಿ ಕೋವಿಡ್-19 ಪರೀಕ್ಷೆಯನ್ನು ಮಾಡಬಹುದಾಗಿದ್ದು ಕೇವಲ 2 ಗಂಟೆಗಳಲ್ಲಿ ಫಲಿತಾಂಶವೂ ದೊರೆಯಲಿದೆ.

English summary
More accurate than a rapid antigen test and almost as quick, India's CRISPR 'Feluda' COVID-19 test that changes colour on detection of the SARS-CoV-2 virus could be a cheaper, faster and simpler alternative to an RT-PCR diagnosis, say scientists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X