ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಒಂದೇ ದಿನ 23 ಜನ ಕೊರೊನಾಕ್ಕೆ ಬಲಿ: ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ

|
Google Oneindia Kannada News

ದೇಶದಲ್ಲಿ ಕೊರೊನಾ ಬಳಿಕ ಹಲವಾರು ರೂಪಾಂತರ ವೈರಸ್‌ಗಳು ಮುನ್ನೆಲೆಗೆ ಬಂದರೂ ಕೊರೊನಾದಷ್ಟು ಜನರಲ್ಲಿ ಬೆದರಿಕೆಯನ್ನು ಹುಟ್ಟಿಸಿಲ್ಲ. ಯಾಕೆಂದರೆ ಕೊರೊನಾ ಮಹಾಮಾರಿ ಜನರ ಜೀವ, ಜೀವನ ಹಾಗೂ ನೆಮ್ಮದಿ ಜೊತೆಗೆ ಆಟವಾಡಿಬಿಟ್ಟಿದೆ. ಅದೆಷ್ಟೋ ಜನ ಮಹಾಮಾರಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳು ಅನಾಥರಾಗಿದ್ದಾರೆ. ಸಂಬಂಧಿಕರನ್ನು ಕಳೆದುಕೊಂಡ ಕುಟುಂಬಗಳು ಅವರ ನೆನಪಿನಲ್ಲಿ ಕಣ್ಣೀರಿನಲ್ಲಿ ಕೈ ತೊಳಿಯುತ್ತಿವೆ. ಕೊರೊನಾ ಹೆಸರು ಕೇಳಿದರೆ ಸಾಕು ಇಂತಹ ಸನ್ನಿವೇಶಗಳು ನಮ್ಮ ಕಣ್ಣು ಮುಂದೆ ಹಾದು ಹೋಗುತ್ತವೆ. ಈ ಆತಂಕದಿಂದ ದೂರವಾಗಬೇಕು, ಸಹಜ ಜೀವನದತ್ತ ಗಮನಹರಿಸಬೇಕು ಅಂದುಕೊಳ್ಳುವ ಹೊತ್ತಿಗೆ ಮತ್ತೆ ಕೊರೊನಾ ಬೇತಾಳದಂತೆ ಹಿಂಬಾಲಿಸುತ್ತಿದೆ. ದೇಶದಲ್ಲಿ ಮತ್ತೆ ಕೊರೊನಾ ಹೆಚ್ಚಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 17,070 ಹೊಸ ಕೊರೊನವೈರಸ್ ಪ್ರಕರಣಗಳು ದಾಖಲಾಗಿವೆ. ಜೊತೆಗೆ ಸೋಂಕಿನಿಂದಾಗಿ 23 ಸಾವುಗಳು ಸಂಭವಿಸಿವೆ. ಶುಕ್ರವಾರ (ಜುಲೈ 1) ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 14,413 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಚೇತರಿಕೆ ದರ ಸುಮಾರು 98.55 ಪ್ರತಿಶತದಷ್ಟಿದ್ದರೆ ಒಟ್ಟು ಚೇತರಿಕೆಯ ಸಂಖ್ಯೆ 4,28,36,906 ಕ್ಕೆ ತಲುಪಿದೆ.

ನಿನ್ನೆ 1,04,555 ಸಕ್ರಿಯ ಪ್ರಕರಣಗಳು ದಾಖಲಾಗಿದ್ದರೆ ಭಾರತದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳು 1,07,189 ಕ್ಕೆ ಏರಿಕೆಯಾಗಿವೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳಿಂದ ಮಾಹಿತಿ ಲಭ್ಯವಾಗಿದೆ.

ICMR ಪರೀಕ್ಷೆ

24 ಗಂಟೆಗಳ ಅವಧಿಯಲ್ಲಿ 2,634 ಸಕ್ರಿಯ COVID-19 ಪ್ರಕರಣಗಳು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಡೇಟಾ ಪ್ರಕಾರ ಫೆಬ್ರವರಿ 28 ರಂದು ಕೋವಿಡ್ ಸಕ್ರಿಯ ಪ್ರಕರಣಗಳು 1,02,601 ರಷ್ಟಿದೆ. ಮಾರ್ಚ್ 1 ರಂದು 92,472 ಕ್ಕೆ ಕುಸಿದಿದೆ. ಭಾರತದಲ್ಲಿ ಮಾರ್ಚ್ 2020 ರಲ್ಲಿ COVID ಸಾಂಕ್ರಾಮಿಕ ರೋಗದಿಂದ ಮೊದಲ ಸಾವು ವರದಿಯಾಗಿತ್ತು. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,25,139 ರಷ್ಟು ಹೆಚ್ಚಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಜೂನ್ 30 ರವರೆಗೆ ಕೊರೊನಾಕ್ಕೆ ಸಂಬಂಧಿಸಿದಂತೆ 86,28,77,639 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಗುರುವಾರ 5,02,150 ಮಾದರಿಗಳನ್ನು ಪರೀಕ್ಷಿಸಲಾಗಿದೆ.

3,640 ಹೊಸ ಕೇಸ್ ದಾಖಲು

3,640 ಹೊಸ ಕೇಸ್ ದಾಖಲು

ಮಹಾರಾಷ್ಟ್ರದಲ್ಲಿ ಗುರುವಾರ 3,640 ಹೊಸ ಕೋವಿಡ್ -19 ಪ್ರಕರಣಗಳು ಮತ್ತು ಮೂರು ಸಾವುಗಳು ವರದಿಯಾಗಿವೆ ಎಂದು ರಾಜ್ಯದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ. ರಾಜ್ಯದಲ್ಲಿ 3,957 ಕೋವಿಡ್-19 ಪ್ರಕರಣಗಳು ಮತ್ತು ಏಳು ಸಾವುನೋವುಗಳು ದಾಖಲಾಗಿದ್ದು ರಾಜ್ಯದ ಕೊರೋನವೈರಸ್ ಸಂಖ್ಯೆ ಬುಧವಾರದಿಂದ ಇಳಿಮುಖವಾಗಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 4,432 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 24,490 ಕ್ಕೆ ಏರಿಕೆಯಾಗಿದೆ ಎಂದು ಡೇಟಾ ತೋರಿಸಿದೆ.

ಮುಂಬೈ ಗುರುವಾರ 1,265 ಹೊಸ ಕೊರೊನವೈರಸ್ ಪ್ರಕರಣಗಳನ್ನು ದಾಖಲಿಸಿದೆ. ಇದು ಹಿಂದಿನ ದಿನಕ್ಕಿಂತ ಸುಮಾರು 16 ಶೇಕಡಾ ಕಡಿಮೆಯಾಗಿದೆ. ಆದರೆ ಇನ್ನೂ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ನಗರ ನಾಗರಿಕ ಸಂಸ್ಥೆ ತಿಳಿಸಿದೆ. ನಗರದಲ್ಲಿ ಒಟ್ಟಾರೆ COVID-19 ಸಂಖ್ಯೆ 11,12,492 ಕ್ಕೆ ಏರಿಕೆಯಾಗಿದೆ. ಆದರೆ ಸಾವಿನ ಸಂಖ್ಯೆ 19,610 ಕ್ಕೆ ತಲುಪಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಬುಲೆಟಿನ್‌ನಲ್ಲಿ ತಿಳಿಸಿದೆ.

865 ಹೊಸ ಕೇಸ್ ದಾಖಲು

865 ಹೊಸ ಕೇಸ್ ದಾಖಲು

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 865 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಈ ಸಮಯದಲ್ಲಿ, 1,276 ರೋಗಿಗಳು ಗುಣಮುಖರಾಗಿದ್ದಾರೆ. ಆದರೆ ಕೊರೋನಾದಿಂದ ಒಂದೇ ಒಂದು ಸಾವು ವರದಿಯಾಗಿಲ್ಲ. ಜೂನ್ 20 ರಂದು ದೆಹಲಿಯಲ್ಲಿ 1,060 ಕೋವಿಡ್ ಪ್ರಕರಣಗಳು ದಾಖಲಾಗಿದ್ದರೆ, ಧನಾತ್ಮಕ ಪ್ರಮಾಣವು ಶೇಕಡಾ 10.09 ರಷ್ಟಿತ್ತು. ಜನವರಿ 24 ರಿಂದ ರಾಜಧಾನಿಯಲ್ಲಿ ದಾಖಲಾದ ಅತಿ ಹೆಚ್ಚು ಪಾಸಿಟಿವಿಟಿ ದರ ಇದಾಗಿದ್ದು, ಪರೀಕ್ಷಿಸಿದ ಶೇಕಡಾ 11.8 ರಷ್ಟು ಜನರು ಕೋವಿಡ್ ಪಾಸಿಟಿವ್ ಎಂದು ತಿಳಿದುಬಂದಿದೆ.

ದೆಹಲಿಯು ಒಮಿಕ್ರಾನ್‌ನ BA.4 ಮತ್ತು BA.5 ರೂಪಾಂತರಗಳ ಕೆಲವು ಪ್ರಕರಣಗಳನ್ನು ಸಹ ವರದಿ ಮಾಡಿದೆ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಎಲ್ಲೆಲ್ಲಿ ಎಷ್ಟು ಸಕ್ರಿಯ ಪ್ರಕರಣಗಳು ದಾಖಲು?

ಎಲ್ಲೆಲ್ಲಿ ಎಷ್ಟು ಸಕ್ರಿಯ ಪ್ರಕರಣಗಳು ದಾಖಲು?

ದಕ್ಷಿಣ ಕೊರಿಯಾದ ಗಡಿಯ ಬಳಿ ದೇಶದ ಮೊದಲ COVID ಪ್ರಕರಣ ದಾಖಲಾಗಿದೆ ಎಂದು ಉತ್ತರ ಕೊರಿಯಾ ಶುಕ್ರವಾರ ಹೇಳಿಕೊಂಡಿದೆ. ಆಂಧ್ರಪ್ರದೇಶದಲ್ಲಿ 755, ಬಿಹಾರದಲ್ಲಿ 934, ಛತ್ತಿಸ್‌ಗಢದಲ್ಲಿ 861, ಗುಜರಾತ್‌ನಲ್ಲಿ 2914, ಹರಿಯಾಣದಲ್ಲಿ 2655, ಕರ್ನಾಟಕದಲ್ಲಿ 5707, ಕೇರಳದಲ್ಲಿ 28860, ಪಂಜಾಬ್‌ನಲ್ಲಿ 1079 ಸಕ್ರಿಯ ಪ್ರಕರಣಗಳು ಈವರೆಗೆ ದಾಖಲಾಗಿವೆ.

Recommended Video

July 1 ರಿಂದ‌ ಪ್ಲಾಸ್ಟಿಕ್ ಬ್ಯಾನ್: ಯಾವ್ಯಾವ ಪ್ಲಾಸ್ಟಿಕ್‌ ವಸ್ತುಗಳಿಗೆ‌ ನಿಷೇಧ? | *India | OneIndia Kannada

English summary
Covid-19: India has reported 17,070 new cases and 23 deaths in the last 24 hours, while the number of active cases has risen to 1,07,189.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X