• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಚ್ಚಿದ ಬೇಡಿಕೆ: HCQ ಔಷಧ 55 ದೇಶಗಳಿಗೆ ರಫ್ತು ಮಾಡಿದ ಭಾರತ

|

ನವದೆಹಲಿ, ಏಪ್ರಿಲ್ 16: ಮಲೇರಿಯಾ ರೋಗಿಗಳಿಗೆ ಪ್ಲೇಕ್ವೆನಿಲ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಎಂಬ Anti-Malaria ಔಷಧವನ್ನು ಕೊವಿಡ್ 19 ರೋಗಿಗಳಿಗೂ ಬಳಸಲು ಅಮೆರಿಕ ಮುಂದಾಗಿದ್ದೇ ತಡ, ಆನೇಕ ರಾಷ್ಟ್ರಗಳಿಂದ ಈ ಔಷಧಿಗೆ ಬೇಡಿಕೆ ಬಂದಿದೆ. ಭಾರತದಿಂದ ಈಗ 55 ರಾಷ್ಟ್ರಗಳಿಗೆ HCQ ರಫ್ತಾಗುತ್ತಿದೆ.

ಇಲ್ಲಿ ತನಕ ಸುಮಾರು 35.82 ಲಕ್ಷ ಎಚ್ ಸಿಕ್ಯೂ ಗುಳಿಗೆಗಳನ್ನು ಯುಎಸ್ ಗೆ ರಫ್ತು ಮಾಡಲಾಗಿದೆ. ಇದಲ್ಲದೆ ಡ್ರಗ್ ತಯಾರಿಸಲು ಬೇಕಾದ ಎಪಿಐ ಅಥವಾ ಮೂಲ ಕಚ್ಚಾವಸ್ತುವನ್ನು 9 ಮೆಟ್ರಿಕ್ ಟನ್ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ. ವಾಣಿಜ್ಯ ಉದ್ದೇಶವಾಗಿ ಮಾರಾಟ, ಸಂಶೋಧನೆಗೆ ಬಳಕೆ, ಕಚ್ಚಾವಸ್ತು ಉಪಯೋಗ ಹೀಗೆ ಬೇರೆ ಬೇರೆ ವರ್ಗಗಳಲ್ಲಿ ಔಷಧವನ್ನು ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ.

ಕೊರೊನಾಗೆ ಬಳಸುತ್ತಿರುವ ಹೈಡ್ರಾಕ್ಸಿಕ್ಲೋರೊಕ್ವಿನ್ ಹಿಂದಿದೆ ಕುತೂಹಲಕಾರಿ ಇತಿಹಾಸ

ಮಲೇರಿಯಾ ಚಿಕಿತ್ಸೆಗೆ ನೀಡುವ ಹೈಡ್ರೋಕ್ಸಿಕ್ಲೋರೊಕ್ವಿನ್ ಔಷಧಿ ಬೇಕೇಬೇಕು ಎಂದು ಹಠ ಹಿಡಿದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಮದು ಮಾಡಿಕೊಂಡಿದ್ದಾರೆ. ಈ ಔಷಧಿ ತಯಾರಿಗೆ ಚೀನಾ ಮೂಲವಸ್ತು ಒದಗಿಸಿದರೆ, ಇದರ ಹೆಚ್ಚು ಉತ್ಪಾದನೆ ಭಾರತದಲ್ಲಾಗುತ್ತದೆ, ಈ ಔಷಧಿ ಬಳಕೆ ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಹೆಚ್ಚಾಗಿದೆ. HCQ ಹಾಗೂ ಅಜಿಥ್ರೋಮೈಸಿನ್ ಬಳಕೆಯಿಂದ ವೈದ್ಯಕೀಯ ಲೋಕದಲ್ಲಿ ಭಾರಿ ಬದಲಾವಣೆ ಸಾಧ್ಯ ಎಂದಿದ್ದರು. ಆದರೆ, ಇದಾದ ಬಳಿಕ ಭಾರತ ಈ ಡ್ರಗ್ ರಫ್ತು ಮಾಡುವುದನ್ನು ಬಂದ್ ಮಾಡಿತ್ತು.

ಪ್ಲೇಕ್ವೆನಿಲ್ ಬ್ರ್ಯಾಂಡ್

ಪ್ಲೇಕ್ವೆನಿಲ್ ಬ್ರ್ಯಾಂಡ್

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಮಲೇರಿಯಾ ಅಲ್ಲದೆ ರುಮಾಟಾಯಿಡ್ ಆರ್ಥೈಟಿಸ್ ಗೂ ಬಳಸಲಾಗುತ್ತದೆ. ಹೃದಯ, ಶ್ವಾಸಕೋಶ, ಜ್ವರ, ಮೈಕೈ ನೋವು, ಸ್ನಾಯು ಸೆಳೆತ ಎಲ್ಲಕ್ಕೂ ಈ ಔಷಧಿ ಬಳಸಬಹುದು ಎಂದು ಜಾನ್ಸ್ ಹಾಪ್ಕಿನ್ ವಿಶ್ವ ವಿದ್ಯಾಲಯ ವರದಿ ನೀಡಿದೆ. ಆದರೆ, ಕೋವಿಡ್19ಗೆ ಈ ಎರಡು ಲಸಿಕೆಯ ಜೋಡಿಗೆ ರಾಮಬಾಣ ಎಂಬುದು ಇನ್ನೂ ದೃಢಪಟ್ಟಿಲ್ಲ.

ಯಾವ ಯಾವ ದೇಶಕ್ಕೆ ರಫ್ತು

ಯಾವ ಯಾವ ದೇಶಕ್ಕೆ ರಫ್ತು

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ರಷ್ಯಾ, ಅಫ್ಘನಿಸ್ತಾನ, ಭೂತನ್, ಬಾಂಗ್ಲಾದೇಶ, ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾ, ಮ್ಯಾನ್ಮಾರ್, ಸೀಷೆಲ್ಸ್, ಒಮಾನ್, ಯುಎಇ, ದಕ್ಷಿಣ ಆಫ್ರಿಕಾ, ನೈಜೀರಿಯಾ, ಡೊಮಿನಿಕ್ ರಿಪಬ್ಲಿಕ್, ಉಗಾಂಡಾ, ಈಜಿಪ್ಟ್, ಅರ್ಮಾನಿಯಾ, ಸೆನೆಗಲ್, ಅಲ್ಜೀರಿಯಾ, ಜಮೈಕಾ, ಉಜ್ಬೇಕಿಸ್ತಾನ, ಕಜಕಸ್ತಾನ, ಉಕ್ರೇನ್, ನೆದರ್ಲೆಂಡ್, ಸ್ಲೊವೇನಿಯಾ, ಉರುಗ್ವೆ, ಈಕ್ವಾಡಾರ್ ಇನ್ನಿತರ ದೇಶಗಳು.

ಬೇಡಿಕೆ ಹೆಚ್ಚಳ: ಹೈಡ್ರೋಕ್ಸಿಕ್ಲೋರೊಕ್ವಿನ್ ಇನ್ನು 13 ದೇಶಗಳಿಗೆ ರಫ್ತು

ಶೇ 70ರಷ್ಟು ಭಾರತದಲ್ಲೇ ಉತ್ಪಾದನೆ

ಶೇ 70ರಷ್ಟು ಭಾರತದಲ್ಲೇ ಉತ್ಪಾದನೆ

ವಿಶ್ವದಲ್ಲಿ ಎಚ್ ಸಿ ಕ್ಯೂ ಉತ್ಪಾದನೆಯಲ್ಲಿ ಶೇ 70ರಷ್ಟು ಭಾರತದಲ್ಲೇ ತಯಾರಾಗುತ್ತದೆ. ಕಡಿಮೆ ಬೆಲೆಯ ಈ ಮಾತ್ರೆಗಳನ್ನು ಕ್ಯಾಡಿಲಾ, ಐಪಿಸಿಎ ಔಷಧ ಕಂಪನಿಗಳು ಉತ್ಪಾದಿಸಲು ಲೈಸನ್ಸ್ ಹೊಂದಿವೆ. ಅತ್ಯಂತ ಹಳೆಯ ಹಾಗೂ ವಿಶ್ವಾಸಾರ್ಹ ಔಷಧಗಳಲ್ಲಿ ಇದು ಒಂದು ಎಂದು ಭಾರತೀಯ ಫಾರ್ಮಾಸ್ಯೂಟಿಕಲ್ಸ್ ಅಲೈಯನ್ಸ್ (ಐಪಿಎ) ಹೇಳಿದೆ.

ಕೊರೊನಾಗೆ ಬಳಸಲು ಸಾಧ್ಯವೇ?

ಕೊರೊನಾಗೆ ಬಳಸಲು ಸಾಧ್ಯವೇ?

2ನೇ ಮಹಾಯುದ್ಧದ ಸಂದರ್ಭದಲ್ಲಿ ಮುಖ್ಯವಾಗಿ ಮಲೇರಿಯಾದಿಂದ ಮುಕ್ತಿ ಪಡೆಯಲು ಬಳಸಿದ ಈ ಸೂಪರ್ ಡ್ರಗ್ ಈಗ ಮತ್ತೆ ಸುದ್ದಿಯಲ್ಲಿದೆ. ಸಾಮಾನ್ಯವಾಗಿ ಹೈಡ್ರೋಕ್ಸಿಕ್ಲೋರೊಕ್ವೆನ್ ಜೊತೆಗೆ Anti biotic ಅಜಿಥ್ರೋಮೈಸಿನ್ ಸೇರಿಸಿ ಸರಿ ಪ್ರಮಾಣದಲ್ಲಿ ನೀಡುತ್ತಾ ಬಂದರೆ ಆರಂಭಿಕ ಹಂತದ ಕೊವಿಡ್ 19 ಸಾರ್ಸ್ CoV 2 ಇತ್ಯಾದಿ ಹೊಗಲಾಡಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಆದರೆ, ಕೋವಿಡ್19ಗೆ ಈ ಎರಡು ಲಸಿಕೆಯ ಜೋಡಿಗೆ ರಾಮಬಾಣ ಎಂಬುದು ಇನ್ನೂ ದೃಢಪಟ್ಟಿಲ್ಲ.

English summary
India has approved the supply of the anti-malarial drug hydroxychloroquine, either as commercial sales or as grants, to 55 countries as part of the efforts to fight the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more