ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಇಂದಿನಿಂದ ಲಸಿಕಾ ಉತ್ಸವ; ಅರ್ಹರಿಗೆ ಕೋವಿಡ್ ಲಸಿಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 11; ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಭಾನುವಾರದಿಂದ 4 ದಿನಗಳ ಕಾಲ ದೇಶದಲ್ಲಿ 'ಲಸಿಕಾ ಉತ್ಸವ' ಆಯೋಜನೆ ಮಾಡಲಾಗಿದೆ.

ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸೂಚನೆಯಂತೆ 'ಲಸಿಕಾ ಉತ್ಸವ' ಏಪ್ರಿಲ್ 11 ರಿಂದ 14ರ ತನಕ ದೇಶದಲ್ಲಿ ನಡೆಯುತ್ತಿದೆ. ಅರ್ಹರೆಲ್ಲರಿಗೂ ಕೋವಿಡ್ ಲಸಿಕೆ ನೀಡುವ ಗುರಿಯನ್ನು ಉತ್ಸವ ಹೊಂದಿದೆ.

2 ದಿನದಲ್ಲೇ ಲಸಿಕೆ ಖಾಲಿ; 30 ಲಕ್ಷ ಲಸಿಕೆ ಕೊಡಿ ಎಂದ ಮುಖ್ಯಮಂತ್ರಿ! 2 ದಿನದಲ್ಲೇ ಲಸಿಕೆ ಖಾಲಿ; 30 ಲಕ್ಷ ಲಸಿಕೆ ಕೊಡಿ ಎಂದ ಮುಖ್ಯಮಂತ್ರಿ!

ಉತ್ತರ ಪ್ರದೇಶ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳು 'ಲಸಿಕೆ ಉತ್ಸವ'ದಲ್ಲಿ ಅರ್ಹರಿಗೆ ಲಸಿಕೆ ಹಾಕಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ಉತ್ತರ ಪ್ರದೇಶದಲ್ಲಿ 6000 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ.

Weekend Lockdown: ಮಹಾರಾಷ್ಟ್ರದಲ್ಲಿ 3 ದಿನ ಖಾಸಗಿ ಲಸಿಕೆ ಕೇಂದ್ರಗಳಿಗೆ ಬೀಗ! Weekend Lockdown: ಮಹಾರಾಷ್ಟ್ರದಲ್ಲಿ 3 ದಿನ ಖಾಸಗಿ ಲಸಿಕೆ ಕೇಂದ್ರಗಳಿಗೆ ಬೀಗ!

COVID 19 Four Days Tika Utsav In Country From April 11

"ಲಸಿಕೆ ಪಡೆಯಲು ಜನರು ಸ್ವಯಂ ಪ್ರೇರಿತವಾಗಿ ಮುಂದೆ ಬರಬೇಕು" ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆ ನೀಡಿದ್ದಾರೆ. ನಾಲ್ಕು ದಿನಗಳ ಅವಧಿಯಲ್ಲಿ ಸುಮಾರು 4 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿಯನ್ನು ರಾಜ್ಯ ಹೊಂದಿದೆ.

 ಬೆಂಗಳೂರು ದಕ್ಷಿಣದಲ್ಲಿ ಏ.11ರಿಂದ 14ವರೆಗೆ ಲಸಿಕೆ ಉತ್ಸವ: ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣದಲ್ಲಿ ಏ.11ರಿಂದ 14ವರೆಗೆ ಲಸಿಕೆ ಉತ್ಸವ: ತೇಜಸ್ವಿ ಸೂರ್ಯ

"ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಅರ್ಹರು ಲಸಿಕೆಯನ್ನು ಪಡೆಯಬೇಕು" ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ.

ಕೋವಿಡ್ ಲಸಿಕೆ ಕೊರತೆ ಇರುವುದಾಗಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪ್ರಶ್ನೆಯನ್ನು ಎತ್ತಿದ್ದಾರೆ. "ರಾಜ್ಯದಲ್ಲಿ 5 ದಿನಕ್ಕೆ ಆಗುವಷ್ಟು ಲಸಿಕೆ ಮಾತ್ರ ಉಳಿದಿದೆ" ಎಂದು ಪಂಜಾಬ್ ಮುಖ್ಯಮಂತ್ರಿಗಳು ಹೇಳಿದ್ದಾರೆ. ದೆಹಲಿಯಲ್ಲಿ 10 ದಿನಕ್ಕೆ ಆಗುವಷ್ಟು, ಜಾರ್ಖಂಡ್‌ನಲ್ಲಿ 2 ದಿನಕ್ಕೆ ಆಗುವಷ್ಟು ಲಸಿಕೆ ಮಾತ್ರ ಉಳಿದಿದೆ.

ಭಾರತದಲ್ಲಿ ಕೋವಿಡ್ ಲಸಿಕಾ ಅಭಿಯಾನ ಆರಂಭವಾದ ಬಳಿಕ 10 ಕೋಟಿ ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಭಾರತ 85 ದಿನದಲ್ಲಿಯೇ 100 ಮಿಲಿಯನ್ ಮಾರ್ಕ್ ಮುಟ್ಟಿದ್ದರೆ ಅಮೆರಿಕ 89 ದಿನಗಳನ್ನು ತೆಗೆದುಕೊಂಡಿತು. ಚೀನಾ 102 ದಿನದಲ್ಲಿ 10 ಕೋಟಿ ಜನರಿಗೆ ಲಸಿಕೆ ಹಾಕಿದೆ.

ಭಾರತದಲ್ಲಿ ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ಹೆಚ್ಚಾಗುತ್ತಿವೆ. ಮರಾಷ್ಟ್ರ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯ ಪ್ರದೇಶ ಮತ್ತು ಕೇರಳ ರಾಜ್ಯಗಳಿಂದ ಶೇ 60.62ರಷ್ಟು ಹೊಸ ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

English summary
Tika Utsav or vaccine festival is being organised in India from today. The mass vaccination programme which will be conducted from April 11 to 14, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X