ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಿರ್ವಹಣೆ ಸಮೀಕ್ಷೆ: ಪ್ರಧಾನಿ ಮೋದಿ ಜನಪ್ರಿಯತೆ ಆಕಾಶಕ್ಕೋ, ಪಾತಾಳಕ್ಕೋ?

|
Google Oneindia Kannada News

ಮಹಾಮಾರಿ ಕೊರೊನಾಗೆ ದೇಶಾದ್ಯಂತ ಇದುವರೆಗೆ 1,120 ಮಂದಿ ಸಾವನ್ನಪ್ಪಿದ್ದಾರೆ. ಈ ವೈರಾಣು ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್ ಮಾಡುವುದು ಸೇರಿದಂತೆ, ಆರಂಭದಲ್ಲಿ ಮೋದಿ ಸರಕಾರ, ಕ್ರಿಯಾಶೀಲವಾಗಿ ಕೆಲಸ ಮಾಡಿಲ್ಲ ಎನ್ನುವ ಆಪಾದನೆಯ ನಂತರ, ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಮೋದಿ ಸರಕಾರ, ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿರುವುದಂತೂ ಹೌದು.

ಮೋದಿ ಟ್ವಿಟ್ಟರ್ ಖಾತೆ ಫಾಲೋ ಮಾಡಿ, ಅನ್ ಫಾಲೋ ಮಾಡಿದ ವೈಟ್ ಹೌಸ್: ಕಾರಣ ಬಹಿರಂಗ ಮೋದಿ ಟ್ವಿಟ್ಟರ್ ಖಾತೆ ಫಾಲೋ ಮಾಡಿ, ಅನ್ ಫಾಲೋ ಮಾಡಿದ ವೈಟ್ ಹೌಸ್: ಕಾರಣ ಬಹಿರಂಗ

ಒಟ್ಟಾರೆಯಾಗಿ, ಕೊರೊನಾ ವಿಚಾರದಲ್ಲಿ ಮೋದಿ ಸರಕಾರ ಹೇಗೆ ಕೆಲಸ ಮಾಡುತ್ತಿದೆ. ಅವರ ಕಾರ್ಯವೈಖರಿ ಸಾರ್ವಜನಿಕರಿಗೆ ತೃಪ್ತಿ ತಂದಿದೆಯಾ ಎನ್ನುವ ವಿಚಾರದಲ್ಲಿ ಅಮೆರಿಕ ಮೂಲದ ಸಂಸ್ಥೆಯೊಂದು ಇತ್ತೀಚೆಗೆ ಸರ್ವೇ ನಡೆಸಿತ್ತು.

ನೇತಾ ಮತ್ತು ಸಿವೋಟರ್, ಮೋದಿ ಸರಕಾರದ ಕಾರ್ಯ ನಿರ್ವಹಣೆಯ ಬಗ್ಗೆಯೂ ಸಮೀಕ್ಷೆ ನಡೆಸಿತ್ತು. ಮಾರ್ನಿಂಗ್ ಕನ್ಸಲ್ಟ್ ಎನ್ನುವ ಸಂಸ್ಥೆಯ ಸಮೀಕ್ಷಾ ಫಲಿತಾಂಶ ಹೀಗಿದೆ:

ನನ್ನ ಸಿಎಂ ಹುದ್ದೆ ಉಳಿಸಲು ನಿಮ್ಮಿಂದ ಮಾತ್ರ ಸಾಧ್ಯ: ಮೋದಿಗೆ ಮಹಾ ಸಿಎಂ ಉದ್ಧವ್ ಠಾಕ್ರೆ ಮನವಿ ನನ್ನ ಸಿಎಂ ಹುದ್ದೆ ಉಳಿಸಲು ನಿಮ್ಮಿಂದ ಮಾತ್ರ ಸಾಧ್ಯ: ಮೋದಿಗೆ ಮಹಾ ಸಿಎಂ ಉದ್ಧವ್ ಠಾಕ್ರೆ ಮನವಿ

ನೇತಾ ಆಪ್ ಏಪ್ರಿಲ್ ಎರಡನೇ ವಾರದಲ್ಲಿ ನಡೆಸಿದ ಸಮೀಕ್ಷೆ

ನೇತಾ ಆಪ್ ಏಪ್ರಿಲ್ ಎರಡನೇ ವಾರದಲ್ಲಿ ನಡೆಸಿದ ಸಮೀಕ್ಷೆ

ನೇತಾ ಆಪ್ , ಏಪ್ರಿಲ್ ಎರಡನೇ ವಾರದಲ್ಲಿ ಸಮೀಕ್ಷೆ ನಡೆಸಿ, ಏಪ್ರಿಲ್ ಹದಿನಾಲ್ಕಕ್ಕೆ ವರದಿಯನ್ನು ಪ್ರಕಟಿಸಿತ್ತು. ಸುಮಾರು ಐವತ್ತು ಸಾವಿರ ಜನ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಶೇ. 71ರಷ್ಟು ಜನ, ಮೋದಿ ಸರಕಾರದ ನಿರ್ವಹಣೆ ತೃಪ್ತಿ ತಂದಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಐಎಎನ್ಎಸ್ ಮತ್ತು ಸಿವೋಟರ್ ಜಂಟಿಯಾಗಿ ಸಮೀಕ್ಷೆ

ಐಎಎನ್ಎಸ್ ಮತ್ತು ಸಿವೋಟರ್ ಜಂಟಿಯಾಗಿ ಸಮೀಕ್ಷೆ

ಐಎಎನ್ಎಸ್ ಮತ್ತು ಸಿವೋಟರ್ ಜಂಟಿಯಾಗಿ ಸಮೀಕ್ಷೆಯೊಂದನ್ನು ನಡೆಸಿತ್ತು. ಮಾರ್ಚ್ 16ರಿಂದ ಏಪ್ರಿಲ್ 21ರ ಅವಧಿಯಲ್ಲಿ ನಡೆಸಿದ ಸಮೀಕ್ಷೆ ಇದಾಗಿತ್ತು. ಲಾಕ್ ಡೌನ್ ಘೋಷಣೆ ಮಾಡಿದ ಆರಂಭದಲ್ಲಿ ಎಷ್ಟು ಜನರು ಮೋದಿ ಸರಕಾರದ ನಿರ್ವಹಣೆಯ ಬಗ್ಗೆ ತೃಪ್ತಿ ಹೊಂದಿದ್ದರೋ, ಅದು ಏಪ್ರಿಲ್ 21ರ ವೇಳೆ ಶೇ. 15ರಷ್ಟು ಜಾಸ್ತಿಯಾಗಿತ್ತು. ಇನ್ನೊಂದು, ಸಮೀಕ್ಷೆಯ ಪ್ರಕಾರ ಶೇ. 93.5 ಜನ ಮೋದಿ ಸರಕಾರದ ಕೊರೊನಾ ನಿರ್ವಹಣೆಯ ಖುಷಿ ಪಟ್ಟಿದ್ದಾರೆಂದು ಸಮೀಕ್ಷೆಯಲ್ಲಿ ವರದಿ ಬಂದಿತ್ತು.

ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್

ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್

ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯ ಪ್ರಕಾರ, ಕೊರೊನಾ ನಿರ್ವಹಣೆಯ ನಂತರ ಪ್ರಧಾನಿ ಮೋದಿಯ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಅವರು ಸಮರ್ಥ ಪ್ರಧಾನಿ ಮತ್ತು ಅವರ ಕಾರ್ಯವೈಖರಿ ಶೇ. 83 ಜನರಿಗೆ ತೃಪ್ತಿ ತಂದಿದೆ. ಭಾರತದ ಆರ್ಥಿಕತೆ (ಕೊರೊನಾ ವಕ್ಕರಿಸುವ ಮುನ್ನ) ತೊಂದರೆಯಲ್ಲಿದ್ದರೂ, ಮೋದಿಯ ವರ್ಚಸ್ಸು ಕಮ್ಮಿಯಾಗಿಲ್ಲ.

ಮೋದಿ ಈ ಸಮಯವನ್ನು ಬಳಸಿಕೊಂಡು, ವರ್ಚಸ್ಸನ್ನೂ ವೃದ್ದಿಸಿಕೊಳ್ಳಲಿದ್ದಾರೆ

ಮೋದಿ ಈ ಸಮಯವನ್ನು ಬಳಸಿಕೊಂಡು, ವರ್ಚಸ್ಸನ್ನೂ ವೃದ್ದಿಸಿಕೊಳ್ಳಲಿದ್ದಾರೆ

ಜನವರಿ ಮೊದಲ ವಾರದಲ್ಲಿ ಈ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಮೋದಿಯ ಜನಪ್ರಿಯತೆ ಶೇ.76ರಷ್ಟಿತ್ತು. ಅದು ಈಗ, ಶೇ. 83ಕ್ಕೆ ಏರಿದೆ. "ಅತಿದೊಡ್ಡ ಪ್ರಜಾಪ್ರಭುತ್ವ ದೇಶ, ಪಕ್ಷದ ಬೆಂಬಲ, ಸರಕಾರೀ ಮೆಷನರಿಗಳ ಸಹಾಯದೊಂದಿಗೆ, ಮೋದಿ ಈ ಸಮಯವನ್ನು ಸಮರ್ಥವಾಗಿ ಬಳಸಿಕೊಂಡು, ಸ್ವಯಂ ವರ್ಚಸ್ಸನ್ನೂ ವೃದ್ದಿಸಿಕೊಳ್ಳಲಿದ್ದಾರೆ"ಎಂದು ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯ ನಿರ್ದೇಶಕ ಮಿಲಾನ್ ವೈಷ್ಣವ್ ಹೇಳಿದ್ದಾರೆ.

English summary
PM Modi's Popularity Soars For Being Front And Centre Of COVID-19 Effort,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X