ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ನಿಂದ ರಕ್ಷಿಸಿಕೊಳ್ಳಲು ಎಂಥಾ ಮಾಸ್ಕ್ ಗಳು ಉತ್ತಮ?

|
Google Oneindia Kannada News

ನವದೆಹಲಿ, ಜುಲೈ.21: ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಾಸ್ಕ್ ಗಳನ್ನು ಧರಿಸುವಂತೆ ಸಾಂಕ್ರಾಮಿಕ ರೋಗತಜ್ಞರು ಸಲಹೆ ನೀಡಿದ್ದಾರೆ. ಆದರೆ ಎಲ್ಲ ರೀತಿಯ ಮಾಸ್ಕ್ ಗಳಿಂದ ಕೊವಿಡ್-19 ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ ಎಂಬ ಬಗ್ಗೆ ಕೇಂದ್ರ ಸರ್ಕಾರ ತಿಳಿಸಿದೆ.

ಉಸಿರಾಟದ ಕವಾಟಗಳನ್ನು ಹೊಂದಿರುವ ಎನ್-95 ಮಾಸ್ಕ್ ಗಳನ್ನು ಬಳಸುವುದರಿಂದ ಕೊರೊನಾವೈರಸ್ ಸೋಂಕು ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

'ಮಾಸ್ಕ್ ಪಾಲಿಟಿಕ್ಸ್'ಗೆ ಅಮೆರಿಕನ್ನರು ಹೈರಾಣ..!'ಮಾಸ್ಕ್ ಪಾಲಿಟಿಕ್ಸ್'ಗೆ ಅಮೆರಿಕನ್ನರು ಹೈರಾಣ..!

ದೇಶದಲ್ಲಿ ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿದಂತೆ ಸಾರ್ವಜನಿಕರು ಎನ್-95 ಮಾಸ್ಕ್ ಗಳನ್ನು ಅದರಲ್ಲೂ ಉಸಿರಾಟದ ಕವಾಟವುಳ್ಳ ಮಾಸ್ಕ್ ಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ ಎನ್ನುವುದರ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಡೈರೆಕ್ಟರ್ ಜನರಲ್ ಆಫ್ ಹೆಲ್ತ್ ಸರ್ವಿಸ್ ಅವರು, ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಿನ್ಸಿಪಲ್ ಸೆಕ್ರಟರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯಾವ ರೀತಿ ಮಾಸ್ಕ್ ಗಳು ಹೆಚ್ಚು ಉಪಯುಕ್ತ?

ಯಾವ ರೀತಿ ಮಾಸ್ಕ್ ಗಳು ಹೆಚ್ಚು ಉಪಯುಕ್ತ?

ಕೊರೊನಾವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳುವುದಕ್ಕೆ ಯಾವ ರೀತಿಯ ಮಾಸ್ಕ್ ಗಳನ್ನು ಧರಿಸಬೇಕು ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಎಲ್ಲರೂ ಉಸಿರಾಟದ ಕವಾಟವುಳ್ಳ ಎನ್-95 ಮಾಸ್ಕ್ ಗಳನ್ನು ಧರಿಸುವುದು ಅಷ್ಟು ಸುರಕ್ಷಿತವಲ್ಲ. ಬದಲಿಗೆ ಮನೆಗಳಲ್ಲಿಯೇ ಬಟ್ಟೆಯಿಂದ ಸಿದ್ಧಪಡಿಸಿರುವ ಮಾಸ್ಕ್ ಗಳನ್ನು ಹೆಚ್ಚಾಗಿ ಧರಿಸುವುದು ಸೂಕ್ತ ಎಂದು ಡೈರೆಕ್ಟರ್ ಜನರಲ್ ಆಫ್ ಹೆಲ್ತ್ ಸರ್ವಿಸ್ ಶಿಫಾರಸ್ಸು ಮಾಡಿದೆ.

ಎನ್-95 ಮಾಸ್ಕ್ ಗಳ ಅನುಚಿತ ಬಳಕೆ ಕುರಿತು ಎಚ್ಚರ

ಎನ್-95 ಮಾಸ್ಕ್ ಗಳ ಅನುಚಿತ ಬಳಕೆ ಕುರಿತು ಎಚ್ಚರ

ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳಿಗೆ ಉಸಿರಾಟಕಾರಕ ಎನ್-95 ಮಾಸ್ಕ್ ಗಳು ವಿರುದ್ಧವಾಗಿವೆ. ಈ ಮಾಸ್ಕ್ ಗಳ ಅನುಚಿತ ಬಳಕೆಯನ್ನು ಗಮನದಲ್ಲಿ ಇಟ್ಟುಕೊಂಡು, ಮೂಗು, ಬಾಯಿ ಮುಚ್ಚುವಂತಾ ಸಾಮಾನ್ಯ ಮಾಸ್ಕ್ ಗಳನ್ನು ಬಳಸುವುದೇ ಹೆಚ್ಚು ಉಪಯುಕ್ತ ಎಂದು ತಿಳಿಸುವುದಕ್ಕೆ ಬಯಸುತ್ತೇನೆ ಎಂದು ಡಿಜಿಎಚ್ಎಸ್ ನ ರಾಜೀವ್ ಗಾರ್ಗ್ ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಮಾಸ್ಕ್ ಬಳಕೆ ಬಗ್ಗೆ ಮಾರ್ಗಸೂಚಿ

ಕೇಂದ್ರ ಸರ್ಕಾರದಿಂದ ಮಾಸ್ಕ್ ಬಳಕೆ ಬಗ್ಗೆ ಮಾರ್ಗಸೂಚಿ

ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಕೇಂದ್ರ ಸರ್ಕಾರವು ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಖ ಮತ್ತು ಬಾಯಿ ಮುಚ್ಚುವಂತಾ ಮಾಸ್ಕ್ ಗಳನ್ನು ಮನೆಯಲ್ಲೇ ತಯಾರಿಸಬೇಕು. ಮನೆಗಳಿಂದ ಹೊರ ಬರುವ ಸಂದರ್ಭಗಳಲ್ಲಿ ಹೀಗೆ ಸಿದ್ಧಪಡಿಸಿದ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಹೀಗೆ ತಯಾರಿಸಿದ ಮಾಸ್ಕ್ ಗಳನ್ನು ಮುಖಕ್ಕೆ ಧರಿಸಿದಾಗ ಯಾವುದೇ ರೀತಿ ಗ್ಯಾಪ್ ಇರುವುದಿಲ್ಲ. ಆದರೆ ಖರೀದಿಸಿದ ಮಾಸ್ಕ್ ಗಳು ಮುಖವನ್ನು ಸರಿಯಾಗಿ ಮುಚ್ಚಿಕೊಳ್ಳುವುದಿಲ್ಲ ಎಂದು ಹೇಳಲಾಗಿತ್ತು.

ಮಾಸ್ಕ್ ಗಳನ್ನು ಪ್ರತಿದಿನ ತೊಳೆದುಕೊಂಡು ಧರಿಸುವುದು

ಮಾಸ್ಕ್ ಗಳನ್ನು ಪ್ರತಿದಿನ ತೊಳೆದುಕೊಂಡು ಧರಿಸುವುದು

ಮನೆಗಳಲ್ಲಿ ಕಾಟನ್ ಬಟ್ಟೆಯನ್ನು ಬಳಸಿಕೊಂಡು ಮಾಸ್ಕ್ ಗಳನ್ನು ತಯಾರಿಸಬೇಕು. ಪ್ರತಿದಿನ ಮಾಸ್ಕ್ ಗಳನ್ನು ಬಳಸಿದ ನಂತರದಲ್ಲಿ ಅವುಗಳನ್ನು ತೊಳೆದುಕೊಂಡು ಮರುಬಳಕೆ ಮಾಡುವಂತೆ ಸಲಹೆಯನ್ನು ನೀಡಲಾಗಿತ್ತು. ಮಾಸ್ಕ್ ಗೆ ಬಳಸುವ ಬಟ್ಟೆಯ ಬಣ್ಣವು ಅಪ್ರಸ್ತುತವಾಗಿರುತ್ತದೆ. ಆದರೆ ಮಾಸ್ಕ್ ಧರಿಸುವ ಮೊದಲು ಅದನ್ನು ಐದು ನಿಮಿಷಗಳ ಕಾಲ ಉಪ್ಪು ಬೆರೆಸಿದ ಕುದಿಯುವ ನೀರಿನಲ್ಲಿ ಚೆನ್ನಾಗಿ ತೊಳೆದು ಒಣಗಿಸುವುದು ಸೂಕ್ತ. ಮುಖ್ಯವಾಗಿ ಒಬ್ಬರ ಬಳಸಿದ ಮಾಸ್ಕ್ ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅದೇ ರೀತಿ ಬೇರೊಬ್ಬರು ಬಳಸಿರುವ ಮಾಸ್ಕ್ ಗಳನ್ನು ಬಳಸುವುದು ಸೂಕ್ತವಲ್ಲ ಎಂದು ತಿಳಿಸಲಾಗಿದೆ.

English summary
Covid-19: Centre Government Warns Against Use Of N95 Masks With Valved Respirators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X