• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವಾರಿಯರ್ಸ್‌ಗಳ 50 ಲಕ್ಷದ ವಿಮಾ ಯೋಜನೆ ವಿಸ್ತರಿಸಿದ ಕೇಂದ್ರ

|

ನವದೆಹಲಿ,ಏಪ್ರಿಲ್ 21: ಕೊರೊನಾ ವಾರಿಯರ್ಸ್‌ಗಳ 50 ಲಕ್ಷದ ವಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಒಂದು ವರ್ಷಗಳಿಗೆ ವಿಸ್ತರಿಸಿದೆ.

ಕಳೆದ ತಿಂಗಳು ಅವಧಿ ಮುಗಿದಿದ್ದು ಮಧ್ಯಂತರ ವ್ಯವಸ್ಥೆಯಾಗಿ ಏಪ್ರಿಲ್ 24ರವರೆಗೆ ವಿಸ್ತರಿಸಲಾಗಿದ್ದ ಕೋವಿಡ್ ವಾರಿಯರ್ಸ್ ಗಳ 50 ಲಕ್ಷ ರೂ. ವಿಮಾ ರಕ್ಷಣೆಯನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ.

ಸಾಂಕ್ರಾಮಿಕ ರೋಗದ ಬೃಹತ್ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಕನಿಷ್ಠ 6 ತಿಂಗಳವರೆಗೆ ವಿಸ್ತರಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘವು ಆರೋಗ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಮನವಿ ಮಾಡಿತ್ತು.

ಕಳೆದ ವರ್ಷ ಕೋವಿಡ್ 19 ಪರಿಹಾರ ಪ್ಯಾಕೇಜ್‌ನ ಭಾಗವಾಗಿ ಘೋಷಿಸಿದ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್‌ನಡಿ ಮಾರ್ಚ್ 24ರಂದು ಮುಕ್ತಾಯಗೊಂಡಿತ್ತು.

ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!

ಇದೀಗ ಈ ಪ್ಯಾಕೇಜ್ ಅನ್ನು ಮುಂದುವರೆಸಿದ್ದು ಸುಮಾರು 22 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತಾ ಬಲ ನೀಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ನ್ಯೂ ಇಂಡಿಯಾ ಅಶ್ಯೂರೆನ್ಸ್‌ನೊಂದಿಗಿನ ಒಪ್ಪಂದದ ನಂತರ ಇತ್ತೀಚಿನ ವಿಸ್ತರಣೆಯು ಮುಂದಿನ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಇಲ್ಲಿಯವರೆಗೂ 287 ಕ್ಲೈಮ್‌ಗಳನ್ನು ಈ ಯೋಜನೆಯಡಿ ಇತ್ಯರ್ಥಪಡಿಸಲಾಗಿದೆ.

English summary
After facing flak, the Centre on Tuesday extended the Rs 50 lakh insurance scheme for healthcare workers who die on Covid-19 duty by one year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X