ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪ್ರಕರಣ ಹೆಚ್ಚಳ: 6 ರಾಜ್ಯಗಳಿಗೆ ಕೇಂದ್ರ ತಂಡ ಭೇಟಿ

|
Google Oneindia Kannada News

ನವದೆಹಲಿ, ಜುಲೈ 02: ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿದೆ. ಆದರೆ ಆರು ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ.

ಈ ಕುರಿತು ಅಧ್ಯಯನ ನಡೆಸಲು ಕೇಂದ್ರ ತಂಡ ಆರು ರಾಜ್ಯಗಳಿಗೆ ಭೇಟಿ ನೀಡಿದೆ. ಕೇರಳ, ಅರುಣಾಚಲಪ್ರದೇಶ, ತ್ರಿಪುರಾ, ಒಡಿಶಾ, ಛತ್ತೀಸ್‌ಗಢ ಹಾಗೂ ಮಣಿಪುರವನ್ನು ಕೇಂದ್ರ ತಂಡ ತಲುಪಿದೆ.

ಕೊರೊನಾ ಸೋಂಕು; ದೇಶದಲ್ಲಿ ಏರಿಕೆಯಾಗಿದೆ ಚೇತರಿಕೆ ಪ್ರಮಾಣಕೊರೊನಾ ಸೋಂಕು; ದೇಶದಲ್ಲಿ ಏರಿಕೆಯಾಗಿದೆ ಚೇತರಿಕೆ ಪ್ರಮಾಣ

ಆಯಾ ರಾಜ್ಯಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಮೊದಲಿನಿಂದಲೂ ಈ ತಂಡಗಳು ಅಧ್ಯಯನ ನಡೆಸುತ್ತಿವೆ. ಅಲ್ಲಿರುವ ಕೆಲವು ತಪ್ಪು ತಿಳಿವಳಿಕೆಯನ್ನು ಹೊಡೆದೋಡಿಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 ಎರಡು ಸದಸ್ಯರ ತಂಡ

ಎರಡು ಸದಸ್ಯರ ತಂಡ

ಎರಡು ಸದಸ್ಯರ ಉನ್ನತ ಮಟ್ಟದ ತಂಡವನ್ನು ರಚಿಸಲಾಗಿದೆ, ಅದರಲ್ಲಿ ಕ್ಲಿನಿಶಿಯನ್ ಹಾಗೂ ಪಬ್ಲಿಕ್ ಹೆಲ್ತ್ ಎಕ್ಸ್‌ಪರ್ಟ್‌ಗಳಿರಲಿದ್ದಾರೆ.

 ರಾಜ್ಯಗಳಿಗೆ ಭೇಟಿ ನೀಡುವ ತಜ್ಞರ ವಿವರ

ರಾಜ್ಯಗಳಿಗೆ ಭೇಟಿ ನೀಡುವ ತಜ್ಞರ ವಿವರ

ಮಣಿಪುರಕ್ಕೆ ಇಎಂಆರ್ ನಿರ್ದೇಶಕ ಡಾ. ಎಲ್ ಸ್ವಸ್ತಿಚರಣ್, ಅರುಣಾಚಲಪ್ರದೇಶಕ್ಕೆ ಎಐಐಎಚ್ ಆಂಡ್ ಪಿಎಚ್ ಪ್ರಾಧ್ಯಾಪಕ ಡಾ. ಸಂಜಯ್ ಸಾಧುಕಾನ್, ತ್ರಿಪುರಾಗೆ ಡಾ. ಆರ್‌ಎನ್ ಸಿನ್ಹಾ, ಕೇರಳಕ್ಕೆ ಡಾ. ರುಚಿ ಜೈನ್, ಒಡಿಶಾಗೆ ಡಾ. ಎ ಡ್ಯಾನ್, ಛತ್ತೀಸ್‌ಗಢಕ್ಕೆ ಡಾ. ದಿಬಾಕರ್ ಸಾಹು ತೆರಳಲಿದ್ದಾರೆ.

 ಈ ಲಸಿಕೆ ಡೆಲ್ಟಾ ರೂಪಾಂತರಿ ವಿರುದ್ಧ ಪರಿಣಾಮಕಾರಿ

ಈ ಲಸಿಕೆ ಡೆಲ್ಟಾ ರೂಪಾಂತರಿ ವಿರುದ್ಧ ಪರಿಣಾಮಕಾರಿ

ಜಾನ್ಸನ್ ಆಂಡ್ ಜಾನ್ಸನ್ ಸಂಸ್ಥೆಯ ಕೋವಿಡ್ ಲಸಿಕೆ ಡೆಲ್ಟಾ ರೂಪಾಂತರಗಳ ವಿರುದ್ಧ ಪ್ರಬಲ ಪರಿಣಾಮಕಾರಿಯಾಗಿದ್ದು, ಕನಿಷ್ಠ 8 ತಿಂಗಳ ಕಾಲ ವೈರಸ್ ಪ್ರಭಾವದಿಂದ ರಕ್ಷಣೆ ನೀಡುತ್ತದೆ ಎಂದು ಹೇಳಲಾಗಿದೆ.

ಜಾನ್ಸನ್ ಆಂಡ್ ಜಾನ್ಸನ್ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯು ಹೆಚ್ಚು ಸಾಂಕ್ರಾಮಿಕವಾಗಿರುವ 'ಡೆಲ್ಟಾ'ಕೊರೊನಾ ರೂಪಾಂತರ ತಳಿ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ ಲಸಿಕೆ ಪಡೆದು 8 ತಿಂಗಳ ಬಳಿಕವೂ ಇದು ಡೆಲ್ಟಾ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಗಳಲ್ಲಿ ಸಾಬೀತಾಗಿರುವುದಾಗಿ ಅದು ಹೇಳಿದೆ. ಈ ವರದಿಯು, ಅಮೆರಿಕದಲ್ಲಿ ಈ ಲಸಿಕೆ ಪಡೆದಿರುವ 1.1 ಕೋಟಿ ಜನರಿಗೆ ಧೈರ್ಯ ನೀಡಿದ್ದು, ಪ್ರಬಲ ಫಲಿತಾಂಶ ನೀಡಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

 ಕೊರೊನಾ ನಿರ್ವಹಣೆ ಬಗ್ಗೆ ಮಾಹಿತಿ

ಕೊರೊನಾ ನಿರ್ವಹಣೆ ಬಗ್ಗೆ ಮಾಹಿತಿ

ತಂಡವು ರಾಜ್ಯದಲ್ಲಿ ಯಾವ ರೀತಿಯಾಗಿ ಕೊರೊನಾ ಸೋಂಕು ನಿರ್ವಹಣೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯಲಿದೆ, ಹಾಸಿಗೆಗಳ ವ್ಯವಸ್ಥೆ, ಲಸಿಕೆ ನೀಡಿಕೆ, ಆಂಬ್ಯುಲೆನ್ಸ್ ವ್ಯವಸ್ಥೆ, ವೈದ್ಯಕೀಯ ಆಮ್ಲಜನಕ, ವೆಂಟಿಲೇಟರ್‌ಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಗಮನಹರಿಸಲಿದ್ದಾರೆ.

English summary
The central government has sent six high-level multi-disciplinary public health teams to six states reporting a high number of COVID-19 cases. The teams will assist the states of Kerala, Arunachal Pradesh, Tripura, Odisha, Chhattisgarh and Manipur in COVID-19 control and containment measures, the Health Ministry said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X