ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಪ್ರಕರಣ ಇಳಿಕೆ; ಸಾಮಾನ್ಯ ವರ್ಗದ ಪ್ಯಾಸೆಂಜರ್ ರೈಲು ಸೇವೆ ಪುನರಾರಂಭ

|
Google Oneindia Kannada News

ನವದೆಹಲಿ, ಫೆಬ್ರವರಿ 28: ಕಳೆದ ಎರಡು ವರ್ಷಗಳಿಂದ ಕೋವಿಡ್-19 ಪ್ರಕರಣಗಳು ಹೆಚ್ಚಾಗಿದ್ದರಿಂದ ಪ್ಯಾಸೆಂಜರ್ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ದೇಶಾದ್ಯಂತ ಕೋವಿಡ್ ಪ್ರಕರಣಗಳು ಸ್ಥಿರವಾದ ಇಳಿಕೆಯನ್ನು ತೋರಿಸುತ್ತಿರುವುದರಿಂದ, ಸಾಮಾನ್ಯ ವರ್ಗದ ಪ್ಯಾಸೆಂಜರ್ ರೈಲು ಸೇವೆಗಳನ್ನು ಪುನರಾರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

"ಈಗಾಗಲೇ ನಿಯಮಿತ ರೈಲು ಸಂಖ್ಯೆಗಳೊಂದಿಗೆ ಪುನಃಸ್ಥಾಪಿಸಲಾದ ರೈಲುಗಳಲ್ಲಿ, ಸಾಂಕ್ರಾಮಿಕ-ಪೂರ್ವ ಅವಧಿಯಲ್ಲಿ ಅನ್ವಯವಾಗುವಂತೆ ಎರಡನೇ ದರ್ಜೆಯ ರೈಲುಗಳನ್ನು ಕಾಯ್ದಿರಿಸಿದ ಅಥವಾ ಕಾಯ್ದಿರಿಸದ ಬೋಗಿಗಳು ಸೇರಲಿವೆ," ಎಂದು ರೈಲ್ವೆ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

IRCTC Tatkal Ticket App: ತತ್ಕಾಲ್‌ ಬುಕಿಂಗ್‌ಗಾಗಿ Confirm Ticket ಆಪ್‌: ಇಲ್ಲಿದೆ ಮಾಹಿತಿIRCTC Tatkal Ticket App: ತತ್ಕಾಲ್‌ ಬುಕಿಂಗ್‌ಗಾಗಿ Confirm Ticket ಆಪ್‌: ಇಲ್ಲಿದೆ ಮಾಹಿತಿ

ಇದರ ಹೊರತಾಗಿ, ಪ್ರಸ್ತುತ ರಜಾದಿನದ ವಿಶೇಷ ರೈಲುಗಳಾಗಿ ಓಡುತ್ತಿರುವ ವಿಶೇಷ ರೈಲುಗಳ ಎರಡನೇ ದರ್ಜೆಯ ಸೌಕರ್ಯಗಳನ್ನು ಸಹ ನಿಗದಿಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಸೇರಿಸಿದೆ.

Covid-19 Case Declines; Resume of the Passenger Train Service of General Class

ಸಾಮಾನ್ಯ ರೈಲುಗಳಲ್ಲಿ ಪ್ಯಾಸೆಂಜರ್ ಬೋಗಿಗಳನ್ನು ಕಾಯ್ದಿರಿಸಿದ ಅಥವಾ ಕಾಯ್ದಿರಿಸದ ಎಂದು ನಿಗದಿಪಡಿಸಲಾಗಿದೆ. ಏಕೆಂದರೆ ಇವುಗಳು ಸಾಂಕ್ರಾಮಿಕ ಪೂರ್ವ ಅವಧಿಯಲ್ಲಿ ಚಾಲ್ತಿಯಲ್ಲಿದ್ದವು ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಮತ್ತಷ್ಟು ವಿವರಿಸಿದ ರೈಲ್ವೆ ವಕ್ತಾರರು, "ಸಾಂಕ್ರಾಮಿಕ ಪೂರ್ವದ ಅವಧಿಯಲ್ಲಿ ರೈಲುಗಳು ನಾಲ್ಕು ಕಾಯ್ದಿರಿಸದ ಸಾಮಾನ್ಯ ಆಸನ ಕೋಚ್‌ಗಳನ್ನು ಹೊಂದಿದ್ದರೆ, ಆದರೆ ಈಗ 2S ಕಾಯ್ದಿರಿಸಿದ ವರ್ಗವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಮುಂಗಡ ಕಾಯ್ದಿರಿಸುವಿಕೆಯ ಅವಧಿಯಿಂದ (120 ದಿನಗಳಿಂದ) ಅಥವಾ ಕಾಯ್ದಿರಿಸದ ಕೋಚ್‌ಗಳಾಗಿ ಮರುಸ್ಥಾಪಿಸಲಾಗುತ್ತದೆ," ಎಂದು ಹೇಳಿದರು.

ರೈಲ್ವೆ ಅಲರ್ಟ್: ಮಾರ್ಚ್‌ನಲ್ಲಿ ಬೆಂಗಳೂರು ರೈಲುಗಳು ಭಾಗಶಃ, ಸಂಪೂರ್ಣ ರದ್ದುರೈಲ್ವೆ ಅಲರ್ಟ್: ಮಾರ್ಚ್‌ನಲ್ಲಿ ಬೆಂಗಳೂರು ರೈಲುಗಳು ಭಾಗಶಃ, ಸಂಪೂರ್ಣ ರದ್ದು

"ಆದಾಗ್ಯೂ, ಒಂದು ರೈಲಿನಲ್ಲಿ ಕೆಲವು GSCZ ಅಥವಾ ಅದೇ ರೀತಿಯ ಕೋಚ್‌ಗಳು ಕೋವಿಡ್ ಪೂರ್ವದಲ್ಲಿ ಕಾಯ್ದಿರಿಸಿದ ಎರಡನೇ ಸಿಟ್ಟಿಂಗ್ ಕೋಚ್‌ಗಳಾಗಿ (2S ವರ್ಗ) ಓಡುತ್ತಿದ್ದರೆ, ಇವುಗಳು ಈಗಲೂ ಆ ರೈಲುಗಳಲ್ಲಿ ಕಾಯ್ದಿರಿಸಿದ ಸಿಟ್ಟಿಂಗ್ ಕೋಚ್‌ಗಳಾಗಿ ಮುಂದುವರಿಯುತ್ತವೆ,'' ಎಂದು ವಕ್ತಾರರು ಸೇರಿಸಿದ್ದಾರೆ.

Covid-19 Case Declines; Resume of the Passenger Train Service of General Class

ರಜಾದಿನದ ವಿಶೇಷ ಅಥವಾ ಇತರ ವಿಶೇಷ ರೈಲುಗಳಲ್ಲಿ, ಸಾಂಕ್ರಾಮಿಕ ಪೂರ್ವ ಅವಧಿಯಲ್ಲಿ ಚಾಲ್ತಿಯಲ್ಲಿರುವಂತೆ ಸಾಮಾನ್ಯ ಕೋಚ್‌ಗಳನ್ನು ಕಾಯ್ದಿರಿಸಿದ ಅಥವಾ ಕಾಯ್ದಿರಿಸದ ಬೋಗಿಗಳಾಗಿ ವಿಂಗಡಿಸಲಾಗಿದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕ ಸಮಯದಲ್ಲಿ ರೈಲುಗಳಲ್ಲಿ ಜನಸಂದಣಿಯನ್ನು ತಡೆಗಟ್ಟಲು ಮತ್ತು ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ರೈಲ್ವೆಯು ಸಂಪೂರ್ಣ ಕಾಯ್ದಿರಿಸಿದ "ವಿಶೇಷ ರೈಲುಗಳನ್ನು' ಓಡಿಸುತ್ತಿತ್ತು. ಕಡಿಮೆ ಅಂತರದಲ್ಲಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರು ಹೆಚ್ಚಾಗಿ ಬಳಸುವ ಸಾಮಾನ್ಯ ಎರಡನೇ ದರ್ಜೆಯ ಕೋಚ್‌ಗಳನ್ನು ಸಹ ಕಾಯ್ದಿರಿಸಿದ ಕೋಚ್‌ಗಳಾಗಿ ಮಾಡಲಾಗಿದೆ.

English summary
The Railway Department has decided to resume passenger train services in the general Class as the Covid cases across the country are showing a steady decline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X