ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಂಕಿತರ ಕಣ್ಣೀರು ಕೂಡ ಕೊರೊನಾ ಸೋಂಕು ಹರಡಬಹುದು

|
Google Oneindia Kannada News

ನವದೆಹಲಿ, ಆಗಸ್ಟ್ 02: ಕೊರೊನಾ ಸೋಂಕು ಕಣ್ಣೀರಿನಿಂದಲೂ ಹರಡಬಹುದು ಎಂದು ವರದಿಯೊಂದು ಹೇಳಿದೆ.

ಹೌದು, ಇಷ್ಟು ದಿನ ಕೊರೊನಾ ಸೋಂಕು ಸೋಂಕಿತರ ಸೀನಿನ ಹನಿಗಳ ಮೂಲಕ, ಸೋಂಕಿತರ ಹತ್ತಿರವೇ ಕುಳಿತಿದ್ದಾಗ, ಲಾಲಾರಸ ಮೂಲಕ ಹೀಗೆ ಹಲವು ವಿಧಗಳಿಂದ ಸೋಂಕು ಹರಡುತ್ತದೆ ಎಂದು ಹೇಳಲಾಗಿತ್ತು.

ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್

ಆದರೆ ಇದೀಗ ಸೋಂಕಿತರ ಕಣ್ಣೀರಿನಿಂದಲೂ ಸೋಂಕು ಹರಡುತ್ತದೆ ಎಂದು ಹೇಳಲಾಗಿದೆ. ಈ ಅಧ್ಯಯನವನ್ನು ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆಸಲಾಗಿದೆ. ಕೊರೊನಾ ಸೋಂಕಿಗೆ ಗುರಿಯಾದ ಸುಮಾರು 120 ರೋಗಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಆದರೆ, ಕೊರೊನಾದ ಹೆಚ್ಚಿನ ಸೋಂಕು ಉಸಿರಾಟದ ಮೂಲಕ ಸಂಭವಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

 Covid 19 Can Be Transmitted From Tears Of Infected Patients: Study

ವರದಿಯ ಪ್ರಕಾರ, ಆರ್‌ಟಿ-ಪಿಸಿಆರ್‌ಗಾಗಿ ಕಣ್ಣೀರು ಪರೀಕ್ಷಿಸಿದ ಸುಮಾರು 17.5% ರೋಗಿಗಳು ಸಹ ಕೊರೊನಾ ಪಾಸಿಟಿವ್ ಆಗಿ ಹೊರಹೊಮ್ಮಿದ್ದಾರೆ. 11 ರೋಗಿಗಳು (9.16%) ಕಣ್ಣಿನ ಅಭಿವ್ಯಕ್ತಿಗಳನ್ನು ಹೊಂದಿದ್ದರು ಮತ್ತು 10 (8.33%) ನೇತ್ರ ದೂರುಗಳನ್ನು ಹೊಂದಿರಲಿಲ್ಲ. ಕೊರೊನಾ ವೈರಸ್ ವರದಿಯು ಸೋಂಕಿತ ರೋಗಿಗಳು ಕಾಂಜಂಕ್ಟಿವಲ್ ಸ್ರವಿಸುವಿಕೆಯಲ್ಲಿ ಸೋಂಕನ್ನು ನಿವಾರಿಸಬಹುದು ಎಂದು ಹೇಳುತ್ತದೆ.

ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಸುಮಾರು 120 ಕೊರೊನಾ ರೋಗಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಇವರಲ್ಲಿ 60 ರೋಗಿಗಳಲ್ಲಿ ವೈರಸ್, ಕಣ್ಣೀರಿನ ಮೂಲಕ ದೇಹದ ಇತರೆ ಭಾಗಗಳಿವೆ ಪ್ರವೇಶಿಸಿದೆ.

ಆದರೆ, ಉಳಿದ 60 ರೋಗಿಗಳಲ್ಲಿ ಈ ರೀತಿ ಸಂಭವಿಸಿಲ್ಲ. 41 ರೋಗಿಗಳಲ್ಲಿ ಅಧ್ಯಯನಕಾರರಿಗೆ ಕಂಜೆಕ್ಟಿವಲ್ ಹೈಪರ್ ಮಿಯಾ, 38 ರೋಗಿಗಳಲ್ಲಿ ಪ್ಹಾಲಿಕ್ಯೂಲರ್ ರಿಯಾಕ್ಷನ್, 35 ರೋಗಿಗಳಲ್ಲಿ ಕೊಮೊಸಿಸ್, 20 ರೋಗಿಗಳಲ್ಲಿ ಮ್ಯೂಕಾಯಿಡ್ ಡಿಸ್ಚಾರ್ಜ್ ಹಾಗೂ 11 ರೋಗಿಗಳಲ್ಲಿ ತುರಿಕೆ ಇರುವುದು ಪತ್ತೆಯಾಗಿದೆ.

ಅಕ್ಯೂಲರ್ ಲಕ್ಷಣಗಳಿರುವ ಸುಮಾರು ಶೇ.37 ರಷ್ಟು ರೋಗಿಗಳಲ್ಲಿ ಕೊವಿಡ್-19 ಸೋಂಕು ಪತ್ತೆಯಾಗಿದೆ. ಉಳಿದ ಶೇ.63 ರಷ್ಟು ರೋಗಿಗಳಲ್ಲಿ ಕೊವಿಡ್-19 ಗಂಭೀರ ಲಕ್ಷಣಗಳಿದ್ದವು.

ಡೆಲ್ಟಾ ರೂಪಾಂತರ ಕರೋನಾದ ಇದುವರೆಗಿನ ಮಾರಕ ರೂಪವಾಗಿದೆ. ಆದರೆ ಕೊವಾಕ್ಸಿನ್ ಲಸಿಕೆ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿದೆ ಎನ್ನುವ ಅಂಶ ಇದೀಗ ಐಸಿಎಂಆರ್ ಅಧ್ಯಯನದಲ್ಲಿ ತಿಳಿದುಬಂದಿದೆ. ಡೆಲ್ಟಾ ರೂಪಾಂತರಗಳಲ್ಲಿ ಕೋವಾಕ್ಸಿನ್ 77% ವರೆಗೆ ಪರಿಣಾಮಕಾರಿಯಾಗಿದೆ. ಈ ಅಧ್ಯಯನದ ಪ್ರಕಾರ, ಕೊವಾಕ್ಸಿನ್ ಪಡೆದಿದ್ದರೆ, ನೀವು ಡೆಲ್ಟಾ ರೂಪಾಂತರದಿಂದ ರಕ್ಷಣೆ ಪಡೆಯಬಹುದು. ಲಸಿಕೆ ಹಾಕಿದ ಜನರನ್ನು ಅಧ್ಯಯನಕ್ಕೆ ಒಳಪಡಿಸುವುದರ ಮೂಲಕ, ಡೆಲ್ಟಾ ಸೋಂಕಿನ

ವಿರುದ್ಧ ಈ ಲಸಿಕೆ ಎಷ್ಟು ಪರಿಣಾಮಕಾರಿ ಎನ್ನುವುದನ್ನು ಕಂಡುಹಿಡಿಯಲಾಯಿತು. ಡೆಲ್ಟಾ ರೂಪಾಂತರದ ವಿರುದ್ಧ ಕೋವಾಕ್ಸಿನ್ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಯಲು, 25 ಸಾವಿರದ 798 ಜನರ ಮೇಲೆ ಅಧ್ಯಯನ ನಡೆಸಲಾಯಿತು. ಕೊರೊನಾದಿಂದ ಬಳಲುತ್ತಿರುವ ಜನರಲ್ಲಿ ಈ ಲಸಿಕೆ 63.6% ಪರಿಣಾಮಕಾರಿ ಎಂದು ಕಂಡುಬಂದಿದೆ.

ಪ್ರಸ್ತುತ ಭಾರತದಲ್ಲಿ ವರದಿಯಾಗುತ್ತಿರುವ ಒಟ್ಟು ಕೊರೊನಾ ಪ್ರಕರಣಗಳಲ್ಲಿ 90 ಪ್ರತಿಶತ ಡೆಲ್ಟಾ ರೂಪಾಂತರ ಎನ್ನಲಾಗಿದೆ. ಇನ್ನು ಬ್ರಿಟನ್ ಮತ್ತು ಅಮೆರಿಕದಲ್ಲಿ, ಡೆಲ್ಟಾ ರೂಪಾಂತರವು ಅತ್ಯಂತ ವೇಗವಾಗಿ ಹರಡುತ್ತಿದೆ. ಇದು ಇತರ ಮೂರು ರೂಪಾಂತರಗಳಾದ ಆಲ್ಫಾ, ಬೀಟಾ, ಗಾಮಾಗಿಂತ ಹೆಚ್ಚು ಅಪಾಯಕಾರಿ ಎನ್ನಲಾಗಿದೆ.

ಡೆಲ್ಟಾದ ನಾಲ್ಕು ರೂಪಾಂತರಗಳಿವೆ. ಡೆಲ್ಟಾ AY.1, AY.2 ಮತ್ತು AY.3. ಏಪ್ರಿಲ್ 2021 ರಲ್ಲಿ ಭಾರತದಲ್ಲಿ ಮೊದಲ ಡೆಲ್ಟಾ ಕೇಸ್ ಪತ್ತೆಯಾಯಿತು. ಈಗ ಡೆಲ್ಟಾ ಯುರೋಪ್, ಏಷ್ಯಾ ಮತ್ತು ಅಮೆರಿಕದಲ್ಲಿ ತಾಂಡವವಾಡುತ್ತಿದೆ. ಆದರೂ, ಲಸಿಕೆಯ ಎರಡೂ ಡೋಸ್ ಗಳ ನಂತರ, ಡೆಲ್ಟಾ ರೂಪಾಂತರದ ವಿರುದ್ಧ ಹೆಚ್ಚಿನ ರಕ್ಷಣೆ ಪಡೆಯಬಹುದು ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.

ಕೋವಾಕ್ಸಿನ್ ಅನ್ನು ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಈಗ ಈ ಮಕ್ಕಳ ಮೇಲೆಯೂ ಈ ಲಸಿಕೆಯ ಟ್ರಯಲ್ ನಡೆಯುತ್ತಿದೆ. ಸೆಪ್ಟೆಂಬರ್ ವೇಳೆಗೆ, ಈ ಟ್ರಯಲ್ ಪೂರ್ಣಗೊಳ್ಳು ವ ನಿರೀಕ್ಷೆ ಇದೆ.

English summary
Tears Of Patients With and Without ocular manifestations can be potential source of Covid 19 infection, suggests a study by government medical college , Amritsar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X