ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ನಿಲ್ದಾಣ ಪ್ರಾಧಿಕಾರದ 18,000 ಸಿಬ್ಬಂದಿ ಕೊರೊನಾ ಲಸಿಕೆ ಪಡೆದಿಲ್ಲ

|
Google Oneindia Kannada News

ನವದೆಹಲಿ, ಏಪ್ರಿಲ್ 15: ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಲಕ್ಷಾಂತರ ಮಂದಿ ಕೊರೊನಾ ಲಸಿಕೆ ಪಡೆಯುತ್ತಿದ್ದಾರೆ. ಆದರೂ ಕೆಲವರಿಗೆ ಕೊರೊನಾ ಲಸಿಕೆ ಕುರಿತ ಭಯ ಹಾಗೂ ಗೊಂದಲಗಳು ಹೋಗಿಲ್ಲ.

ಎಎಇಯು ಪ್ರಧಾನ ಕಾರ್ಯದರ್ಶಿ ಬಲರಾಜ್ ಸಿಂಗ್ ಅಹ್ಲಾವತ್ ಅವರು ತಮ್ಮ ಉದ್ಯೋಗಿಗಳಿಗೆ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

2 ಗಂಟೆಗಿಂತ ಕಡಿಮೆ ಅವಧಿಯ ದೇಶಿ ವಿಮಾನ ಪ್ರಯಾಣದಲ್ಲಿ ಆಹಾರ ಪೂರೈಕೆ ಇಲ್ಲ2 ಗಂಟೆಗಿಂತ ಕಡಿಮೆ ಅವಧಿಯ ದೇಶಿ ವಿಮಾನ ಪ್ರಯಾಣದಲ್ಲಿ ಆಹಾರ ಪೂರೈಕೆ ಇಲ್ಲ

ಒಕ್ಕೂಟವು ದೇಶಾದ್ಯಂತ ಸುಮಾರು 18,000 ಉದ್ಯೋಗಿಗಳನ್ನು ಹೊಂದಿದೆ ಮತ್ತು ಸುಮಾರು 12,000 ಉದ್ಯೋಗಿಗಳು 45 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ, ಆದರೆ ಹೆಚ್ಚಿನ ಉದ್ಯೋಗಿಗಳು ಭಯ ಮತ್ತು ಗೊಂದಲದಲ್ಲಿದ್ದಾರೆ, ಲಸಿಕೆ ಪಡೆದರೆ ಅಡ್ಡಪರಿಣಾಮ ಬೀರುತ್ತದೆ ಮತ್ತು ಲಸಿಕೆ ಪಡೆದ ನಂತರವೂ ಕೊರೊನಾ ಪಾಸಿಟಿವ್ ಬಂದಿರುವ ಅನೇಕ ವರದಿಗಳಿವೆ. ಹೀಗಾಗಿ ಭಯ ಪಡುತ್ತಿದ್ದಾರೆ ಎಂದು ಎಎಇಯು ಪ್ರಧಾನ ಕಾರ್ಯದರ್ಶಿ ಎಎನ್‌ಐಗೆ ತಿಳಿಸಿದ್ದಾರೆ.

COVID-19: 18,000 AAI Employees Not Taking Vaccine Babs Due To Fear, Confusion

ಎಎಇಯು ಯೂನಿಯನ್ ನೌಕರರನ್ನು ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ನೇಮಕ ಮಾಡಲಾಗಿದೆ. ಆದರೆ ದುರದೃಷ್ಟವಶಾತ್ ಲಸಿಕೆ ಶಿಬಿರವನ್ನು ಸ್ಥಾಪಿಸಲು ನಮಗೆ ಸಾಧ್ಯವಾಗುತ್ತಿಲ್ಲ.

ಏಕೆಂದರೆ 100 ಉದ್ಯೋಗಿಗಳು ಸಹ ಲಸಿಕೆ ಪಡೆಯಲು ಸಿದ್ಧರಿಲ್ಲ ಎಂದು ಅವರು ಹೇಳಿದರು. ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುವಂತೆ ಸರ್ಕಾರದ ನಿರಂತರ ಮನವಿಯ ಹೊರತಾಗಿಯೂ, ಭಯ ಮತ್ತು ಗೊಂದಲದಿಂದಾಗಿ ಜನರು ಚುಚ್ಚುಮದ್ದನ್ನು ಪಡೆಯಲು ಮುಂದೆ ಬರುತ್ತಿಲ್ಲ. ವಿಮಾನ ನಿಲ್ದಾಣ ಪ್ರಾಧಿಕಾರ ನೌಕರರ ಒಕ್ಕೂಟದ(ಎಎಇಯು) 18,000 ಉದ್ಯೋಗಿಗಳ ಪರಿಸ್ಥಿತಿ ಸಹ ಹೀಗೆ ಆಗಿದೆ.

English summary
Despite the continuous appeal of the government to come forward and get vaccinated, people are not coming forward to get inoculated due to fear and confusion. Such is the case with the 18,000 employees of the Airport Authority Employees Union (AAEU).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X