ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು 120 ದಿನ ಬೇಕೇ ಬೇಕು!

|
Google Oneindia Kannada News

ನವದೆಹಲಿ, ಮೇ 28: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 133 ದಿನಗಳಲ್ಲಿ 2.86 ಕೋಟಿ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಇದರ ಮಧ್ಯೆ ಕೊವ್ಯಾಕ್ಸಿನ್ ಲಸಿಕೆ ಲಭ್ಯತೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಲಸಿಕೆ ಉತ್ಪಾದನಾ ಸಂಸ್ಥೆ ಭಾರತ್ ಬಯೋಟೆಕ್ ಸ್ಪಷ್ಟನೆ ನೀಡಿದೆ.

ಒಂದು ಬ್ಯಾಚ್ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಿ, ಪರೀಕ್ಷಿಸಿ, ಬಿಡುಗಡೆಗೊಳಿಸುವ ಪ್ರಕ್ರಿಯೆಯು ಕನಿಷ್ಠ 120 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ ಮಾರ್ಚ್ ತಿಂಗಳಿನಲ್ಲಿ ಒಂದು ಬ್ಯಾಚ್ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನಾ ಪ್ರಕ್ರಿಯೆ ಆರಂಭಿಸಿದರೆ ಅದು ಜೂನ್ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಕರ್ನಾಟಕದಲ್ಲಿ ಯಾರಿಗೂ ಸಿಗುವುದಿಲ್ಲ ಕೊವ್ಯಾಕ್ಸಿನ್ ಮೊದಲ ಡೋಸ್ ಲಸಿಕೆಕರ್ನಾಟಕದಲ್ಲಿ ಯಾರಿಗೂ ಸಿಗುವುದಿಲ್ಲ ಕೊವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ

ಕೇಂದ್ರ ಸರ್ಕಾರವು 2 ಕೋಟಿ ಕೊವ್ಯಾಕ್ಸಿನ್ ಲಸಿಕೆಗಾಗಿ ಬೇಡಿಕೆಯಿಟ್ಟಿದೆ. ಈಗಾಗಲೇ ರಾಜ್ಯಗಳಿಗೆ ಹಂಚಿಕೆ ಮಾಡಿರುವ 2,21,07,737 ಡೋಸ್ ಕೊರೊನಾವೈರಸ್ ಲಸಿಕೆಯಲ್ಲಿ ಶೇ.10ರಷ್ಟು ಮಾತ್ರ ಕೊವ್ಯಾಕ್ಸಿನ್ ಲಸಿಕೆಯಿದೆ.

Covaxin Vaccine Production Cycle Takes Minimum 120 Days: Bharat Biotech

ಮಾರ್ಗಸೂಚಿ ಅಡಿಯಲ್ಲಿ ಲಸಿಕೆ ಉತ್ಪಾದನೆ:

ಒಂದು ಬ್ಯಾಚ್ ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆ, ಪರೀಕ್ಷೆ ಮತ್ತು ಬಿಡುಗಡೆಯ ಪ್ರಕ್ರಿಯೆಗೆ ಕನಿಷ್ಠ 120 ದಿನ ಬೇಕಾಗುತ್ತದೆ. ಕಂಪನಿಯ ತಂತ್ರಜ್ಞಾನ, ಕೇಂದ್ರ ಪ್ರಾಧಿಕಾರದ ಮಾರ್ಗಸೂಚಿಗಳಿಗೆ ಅನುಮಗುಣವಾಗಿ ಲಸಿಕೆ ಉತ್ಪಾದಿಸುವುದಕ್ಕೆ ಸಮಯ ತಗಲುತ್ತದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ. ಕಂಪನಿಯು ಒಂದು ಬ್ಯಾಚ್ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯನ್ನು ಮಾರ್ಚ್ ತಿಂಗಳಿನಲ್ಲಿ ಒಂದು ಆರಂಭಿಸಿದರೆ ಅದು ಜೂನ್ ವೇಳೆಗೆ ಪೂರ್ಣಗೊಳ್ಳುತ್ತದೆ.

ದೇಶದ ಬೇರೆ ಕಂಪನಿಗಳಿಗೆ ಪರವಾನಗಿ:

ಭಾರತದಲ್ಲಿ ಕೊರೊನಾವೈರಸ್ ಲಸಿಕೆಗಳ ಕೊರತೆಯು ಒಂದು ದೊಡ್ಡ ಸಮಸ್ಯೆಯಾಗಿದೆ. ಇದರ ಮಧ್ಯೆ ಕೊವಾಕ್ಸಿನ್‌ನ ಕೊರತೆಯು ಇನ್ನಷ್ಟು ವಿಕೋಪಕ್ಕೆ ತೆಗೆದುಕೊಂಡು ಹೋಗುವ ಅಪಾಯವಿದೆ. ಈ ಹಿನ್ನೆಲೆ ಲಸಿಕೆಯ ಉತ್ಪಾದನೆ ಹೆಚ್ಚಿಸಲು ಇತರ ಕಂಪನಿಗಳಿಗೆ ಕಡ್ಡಾಯವಾಗಿ ಪರವಾನಗಿ ನೀಡುವಂತೆ ಕರೆ ನೀಡಲಾಗಿದೆ. ಆದಾಗ್ಯೂ, ಲಸಿಕೆಗಳ ತಯಾರಿಕೆ, ಪರೀಕ್ಷೆ, ಬಿಡುಗಡೆ ಮತ್ತು ವಿತರಣೆಯು ನೂರಾರು ಹಂತಗಳನ್ನು ಹೊಂದಿರುವ ಸಂಕೀರ್ಣ ಪ್ರಕ್ರಿಯೆ ಆಗಿದೆ. ಈ ಹಿನ್ನೆಲೆ ಮಾನವ ಸಂಪನ್ಮೂಲವನ್ನು ಹೆಚ್ಚಿಸುವ ಅಗತ್ಯವಿರುತ್ತದೆ ಎಂದು ಕಂಪನಿ ಒತ್ತಾಯಿಸಿತು.

English summary
Covaxin Vaccine Production Cycle Takes Minimum 120 Days: Bharat Biotech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X