ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ರವರೆಗೂ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ಸಿಗುವುದೇ ಅನುಮಾನ!

|
Google Oneindia Kannada News

ಹೈದ್ರಾಬಾದ್, ಜೂನ್ 24: ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಸಂಶೋಧಿಸಿ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಗೆ ಮುಂದಿನ ವರ್ಷದವರೆಗೂ ಸಂಪೂರ್ಣ ಅನುಮೋದನೆ ಸಿಗುವುದೇ ಅನುಮಾನ ಎನ್ನಲಾಗುತ್ತಿದೆ.

ಭಾರತೀಯ ಕೇಂದ್ರ ಔಷಧೀಯ ಪ್ರಾಧಿಕಾರದ ಅಧಿಕಾರಿಗಳು ಭಾರತ್ ಬಯೋಟೆಕ್ ಸಂಸ್ಥೆಯು ಕೊವ್ಯಾಕ್ಸಿನ್ ಲಸಿಕೆ ಮೇಲೆ ನಡೆಸಿದ ಮೂರನೇ ಹಂತದ ವೈದ್ಯಕೀಯ ಪ್ರಯೋಗದ ದತ್ತಾಂಶವನ್ನು ಪರಿಶೀಲಿಸಿ ಅನುಮತಿ ನೀಡಿದ್ದಾರೆ. ಆದರೆ ಭಾರತದ ಔಷಧೀಯ ನಿಯಂತ್ರಣ ಪ್ರಾಧಿಕಾರದಿಂದ ಸಂಪೂರ್ಣ ಅನುಮೋದನೆಗೆ ಮುಂದಿನ ವರ್ಷದವರೆಗೂ ಕಾಯಬೇಕು ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ವಿಶೇಷ ಸೂಚನೆ: ಭಾರತದಲ್ಲಿ 2 ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆವಿಶೇಷ ಸೂಚನೆ: ಭಾರತದಲ್ಲಿ 2 ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆ

ಕೊವ್ಯಾಕ್ಸಿನ್ ಲಸಿಕೆ ಮೇಲಿನ ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳು ಇನ್ನೂ ಪರಿಪೂರ್ಣವಾಗಿಲ್ಲ. ಭಾರತ್ ಬಯೋಟೆಕ್ ಈ ಕುರಿತು ಅಧ್ಯಯನವನ್ನು ಮುಂದುವರಿಸಬೇಕಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಕೊವ್ಯಾಕ್ಸಿನ್ ಲಸಿಕೆಗೆ ಪೂರ್ಣ ಪರವಾನಗಿ ಯಾವಾಗ?

ಕೊವ್ಯಾಕ್ಸಿನ್ ಲಸಿಕೆಗೆ ಪೂರ್ಣ ಪರವಾನಗಿ ಯಾವಾಗ?

"ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯು ಎಷ್ಟು ಪ್ರಮಾಣದಲ್ಲಿ ಸುರಕ್ಷಿತವಾಗಿದೆ ಎಂಬುದನ್ನು ಸಾಬೀತುಪಡಿಸಿಲ್ಲ. ಶಿಷ್ಟಾಚಾರದ ಪ್ರಕಾರ ಲಸಿಕೆಯ ಅವಧಿ ಬಗ್ಗೆ ದತ್ತಾಂಶದಲ್ಲಿ ಯಾವುದೇ ರೀತಿಯ ಉಲ್ಲೇಖಗಳಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ದತ್ತಾಂಶವನ್ನು ಸಲ್ಲಿಸುವವರೆಗೂ ಪೂರ್ಣಪ್ರಮಾಣದ ಪರವಾನಗಿ ನೀಡುವುದಕ್ಕೆ ಸಾಧ್ಯವಿಲ್ಲ," ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಅಂತಿಮ ಹಂತದ ಪ್ರಯೋಗದಲ್ಲಿ ಭಾಗವಹಿಸುವವರನ್ನು ನೇಮಿಸಿದ ಒಂದು ವರ್ಷದ ನಂತರದಲ್ಲಿ ಸಾಮಾನ್ಯವಾಗಿ ಪೂರ್ಣ ಪರವಾನಗಿ ನೀಡಲಾಗುತ್ತದೆ," ಎಂದು ಮತ್ತೊಬ್ಬ ಅಧಿಕಾರಿ ವಿವರಿಸಿದ್ದಾರೆ.

ಡಿಸಿಜಿಐಗೆ 3ನೇ ಹಂತದ ವೈದ್ಯಕೀಯ ಪ್ರಯೋಗದ ವರದಿ

ಡಿಸಿಜಿಐಗೆ 3ನೇ ಹಂತದ ವೈದ್ಯಕೀಯ ಪ್ರಯೋಗದ ವರದಿ

ಭಾರತ್ ಬಯೋಟೆಕ್ ಸಂಸ್ಥೆಯು ಕೊವ್ಯಾಕ್ಸಿನ್ ಲಸಿಕೆಗೆ ಸಂಬಂಧಿಸಿದಂತೆ ನಡೆಸಿದ 3ನೇ ಹಂತದ ವೈದ್ಯಕೀಯ ಪ್ರಯೋಗ ದತ್ತಾಂಶವನ್ನು ವಾರಾಂತ್ಯದ ವೇಳೆಗೆ ಭಾರತೀಯ ಔಷಧೀಯ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಲಿದೆ. ಇದಕ್ಕೂ ಮೊದಲು ಮಂಗಳವಾರ ಕೇಂದ್ರ ಔಷಧೀಯ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ಕೊವಿಡ್-19 ತಜ್ಞರ ಸಮಿತಿಯ ಅಧಿಕಾರಿಗಳು ಭಾರತ್ ಬಯೋಟೆಕ್ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದರು. ಕೊವ್ಯಾಕ್ಸಿನ್ ಕುರಿತು ವರದಿಗೆ ಅನುಮತಿ ನೀಡಿದ್ದು, ಕೇಂದ್ರ ಔಷಧೀಯ ನಿಯಂತ್ರಣ ಪ್ರಾಧಿಕಾರಕ್ಕೆ ಈ ವರದಿಯನ್ನು ಕಳುಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಡಿಸಿಜಿಐಗೆ 3ನೇ ಹಂತದ ವೈದ್ಯಕೀಯ ವರದಿ ಸಲ್ಲಿಸಲು ಭಾರತ್ ಬಯೋಟೆಕ್ ಸಿದ್ಧಡಿಸಿಜಿಐಗೆ 3ನೇ ಹಂತದ ವೈದ್ಯಕೀಯ ವರದಿ ಸಲ್ಲಿಸಲು ಭಾರತ್ ಬಯೋಟೆಕ್ ಸಿದ್ಧ

ಕೊವ್ಯಾಕ್ಸಿನ್ ಲಸಿಕೆಯು ಶೇ.77.80ರಷ್ಟು ಸುರಕ್ಷಿತ ಎಂದ ಸಂಸ್ಥೆ

ಕೊವ್ಯಾಕ್ಸಿನ್ ಲಸಿಕೆಯು ಶೇ.77.80ರಷ್ಟು ಸುರಕ್ಷಿತ ಎಂದ ಸಂಸ್ಥೆ

ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಸಲ್ಲಿಸಿರುವ 3ನೇ ವೈದ್ಯಕೀಯ ಪ್ರಯೋಗದ ವರದಿಯ ಪ್ರಕಾರ, ಕೊವ್ಯಾಕ್ಸಿನ್ ಲಸಿಕೆಯ ಬಗ್ಗೆ ನಡೆಸಿದ 25.800 ವಿಷಯಗಳ ಅಂಕಿ-ಅಂಶಗಳ ಆಧಾರದ ಮೇಲೆ ಲಸಿಕೆಯು ಶೇ.77.80ರಷ್ಟು ಸುರಕ್ಷಿತವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆಯು ಲಸಿಕೆ ಪರಿಣಾಮಕಾರತ್ವದ ಬಗ್ಗೆ ಉಲ್ಲೇಖಿಸಿತ್ತು. ಎರಡೂ ಡೋಸ್ ಲಸಿಕೆ ಪಡೆದ ನಂತರ ಕೊವಿಡ್-19 ಸೋಂಕು ತಗುಲದ ವ್ಯಕ್ತಿಯಲ್ಲಿ ಶೇ.81ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಾಗಿದೆ ಎಂದು ಹೇಳಿತ್ತು. ಜನವರಿ ತಿಂಗಳಿನಲ್ಲಿ ಕೊವ್ಯಾಕ್ಸಿನ್ ಲಸಿಕೆಯ ಮೊದಲ ಮತ್ತು ಎರಡನೇ ಹಂತದ ವೈದ್ಯಕೀಯ ಪ್ರಯೋಗಗಳ ದತ್ತಾಂಶವನ್ನು ಗಮನದಲ್ಲಿ ಇಟ್ಟುಕೊಂಡು ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧೀಯ ಪ್ರಾಧಿಕಾರ ಅನುಮೋದನೆ ನೀಡಿತ್ತು.

ಜಗತ್ತಿನ ತುರ್ತು ಬಳಕೆ ಲಸಿಕೆಗಳ ಪಟ್ಟಿಗೆ ಕೊವ್ಯಾಕ್ಸಿನ್

ಜಗತ್ತಿನ ತುರ್ತು ಬಳಕೆ ಲಸಿಕೆಗಳ ಪಟ್ಟಿಗೆ ಕೊವ್ಯಾಕ್ಸಿನ್

ಜೂನ್ 23ರ ಬುಧವಾರ ವಿಶ್ವ ಆರೋಗ್ಯ ಸಂಸ್ಥೆ ಜೊತೆ ವರದಿ ಸಲ್ಲಿಕೆಗೂ ಪೂರ್ವದಲ್ಲಿ ನಡೆದ ಸಭೆಯಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಅಂತಾರಾಷ್ಟ್ರೀಯ ತುರ್ತು ಬಳಕೆ ಲಸಿಕೆಗಳ ಪಟ್ಟಿಗೆ ಸೇರಿಸುವಂತೆ ಭಾರತ್ ಬಯೋಟೆಕ್ ಪ್ರಸ್ತಾಪಿಸಿತು. ಜಾಗತಿಕ ಮಟ್ಟದಲ್ಲಿ ಅನುಮೋದನೆ ಪಡೆಯುವ ದೃಷ್ಟಿಯಿಂದ ಈಗಾಗಲೇ ಸಂಸ್ಥೆ ನಡೆಸಿರುವ ವೈದ್ಯಕೀಯ ಪ್ರಯೋಗ ಮತ್ತು ಅಧ್ಯಯನದ ಕುರಿತಾದ ಶೇ.90ರಷ್ಟು ದತ್ತಾಂಶಗಳನ್ನು ಒಳಗೊಂಡ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಲಾಗಿದೆ.

English summary
Bharat Biotech's Covaxin Vaccine Unlikely to get full approval by DCGI till 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X