ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್ ಲಸಿಕೆ ಪ್ರಭಾವದ ಕುರಿತು ಭಾರತ್ ಬಯೋಟೆಕ್ ವರದಿ ಸಲ್ಲಿಕೆ

|
Google Oneindia Kannada News

ನವದೆಹಲಿ, ಜೂನ್ 22: ದೇಶದಲ್ಲಿ ಉತ್ಪಾದನೆಯಾಗುತ್ತಿರುವ, ಭಾರತ್ ಬಯೋಟೆಕ್ ಸಂಸ್ಥೆಯ ಕೊರೊನಾ ಲಸಿಕೆ "ಕೋವ್ಯಾಕ್ಸಿನ್" ದಕ್ಷತೆ ಬಗ್ಗೆ ಮೊದಲಿನಿಂದಲೂ ಕೆಲವು ಆಕ್ಷೇಪಗಳು ಕೇಳಿಬಂದಿವೆ.

ಮೂರನೇ ಹಂತದ ಪ್ರಯೋಗದ ವರದಿಯಿಲ್ಲದೇ ದೇಶದಲ್ಲಿ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿದ್ದು ಮೊದಲು ಆಕ್ಷೇಪಕ್ಕೆ ಕಾರಣವಾಗಿತ್ತು. ಆರಂಭಿಕ ಹಂತದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಕಾರ್ಯಕರ್ತರು ಹಿಂದೇಟು ಹಾಕಿದ ಸಂಗತಿಗಳೂ ನಡೆದಿದ್ದವು.

ನಮಗೆಲ್ಲಾ ಕೊರೊನಾ ಲಸಿಕೆಯ ನಮಗೆಲ್ಲಾ ಕೊರೊನಾ ಲಸಿಕೆಯ "ಬೂಸ್ಟರ್ ಶಾಟ್" ಅವಶ್ಯಕತೆಯಿದೆಯೇ? WHO ವಿಜ್ಞಾನಿ ವಿವರಣೆ...

ಈಚೆಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೋವ್ಯಾಕ್ಸಿನ್ ಲಸಿಕೆಯ ರಫ್ತಿಗೆ ಅನುಮೋದನೆ ಅರ್ಜಿ ತಿರಸ್ಕರಿಸಿ ಹೆಚ್ಚಿನ ದತ್ತಾಂಶಗಳನ್ನು ನೀಡುವಂತೆ ಕೇಳಿತ್ತು.

Covaxin Shows 77 Percent Efficacy in Phase 3 Trials Says Bharat Biotech

ಇದೀಗ ಮಂಗಳವಾರ ಮೂರನೇ ಹಂತದ ವೈದ್ಯಕೀಯ ಪ್ರಯೋಗದ ವರದಿಯನ್ನು ಭಾರತ್ ಬಯೋಟೆಕ್ ಸಂಸ್ಥೆ ಪ್ರಸ್ತುತಪಡಿಸಿದೆ. ಈ ವರದಿಯಲ್ಲಿ ಕೊರೊನಾ ಸೋಂಕಿನ ವಿರುದ್ಧ ಕೋವ್ಯಾಕ್ಸಿನ್ ಲಸಿಕೆಯು 77.8% ಪರಿಣಾಮಕಾರಿ ಎಂಬುದನ್ನು ಉಲ್ಲೇಖಿಸಿದೆ.

ವಿಷಯ ಪರಿಣತ ಸಮಿತಿಯು ಭಾರತ್ ಬಯೋಟೆಕ್ ಲಸಿಕೆಯ ಮಾಹಿತಿಗಳನ್ನು ಪರಿಶೀಲನೆ ನಡೆಸಿದೆ. ಮುಂದೆ ಭಾರತೀಯ ಔಷಧ ನಿಯಂತ್ರಕ ಸಂಸ್ಥೆ ಡಿಸಿಜಿಐಗೆ ಈ ವರದಿ ಸಲ್ಲಿಸಲಿದೆ.

ವರದಿಯಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯು, ಕೋವ್ಯಾಕ್ಸಿನ್ ಲಸಿಕೆ ಸೋಂಕಿನ ವಿರುದ್ಧ 77.8% ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿರುವ ಮಾಹಿತಿ ಒದಗಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಜೂನ್ 23ರಂದು ಕೋವ್ಯಾಕ್ಸಿನ್ ಲಸಿಕೆಯ ಪೂರ್ವ ಸಲ್ಲಿಕೆ ಸಭೆ ಹಮ್ಮಿಕೊಂಡಿದ್ದು, ಈ ವರದಿ, ಲಸಿಕೆಗೆ ಅನುಮೋದನೆ ಸಿಗುವಲ್ಲಿ ಸಹಾಯ ಮಾಡುವ ನಿರೀಕ್ಷೆಯಿದೆ.

ಭಾರತದಲ್ಲಿ ಸದ್ಯಕ್ಕೆ ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಹಾಗೂ ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದೆ. ಸ್ಫುಟ್ನಿಕ್ ವಿ ಲಸಿಕೆ ನೀಡಲು ತಯಾರಿ ನಡೆಯುತ್ತಿದೆ.

English summary
Covaxin shows 77% efficacy in Phase 3 trials, Bharat Biotech informs govt panel, data under review
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X