ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗಳನ್ನು ಲಸಿಕೆ ಪಡೆಯದವರು ಎಂದು ವಿದೇಶಿ ವಿವಿ ಪರಿಗಣನೆ

|
Google Oneindia Kannada News

ನವದೆಹಲಿ, ಜೂನ್ 17: ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡವರನ್ನು ವಿದೇಶಿ ವಿಶ್ವವಿದ್ಯಾಲಯಗಳು ಲಸಿಕೆ ಹಾಕದವರು ಎಂದು ಪರಿಗಣಿಸುತ್ತಿರುವುದಾಗಿ ಎಬಿವಿಪಿ ತಿಳಿಸಿದೆ.

ಈ ಕುರಿತು ಎಬಿವಿಪಿ ಸಚಿವ ಹರ್ಷವರ್ಧನ್ ಅವರಿಗೆ ಪತ್ರ ಬರೆದಿದ್ದು, ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದ 18 ವರ್ಷಕ್ಕಿಂತ ಕೆಳಗಿನ ವಿದ್ಯಾರ್ಥಿಗಳು ಲಸಿಕಾ ಅಭಿಯಾನದಡಿ ಬರುವುದಿಲ್ಲ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳು ಕೊವಾಕ್ಸಿನ್ ಲಸಿಕೆ ಪಡೆದ ಭಾರತೀಯರನ್ನು ಲಸಿಕೆ ಹಾಕಿಸಿಕೊಳ್ಳದವರು ಎಂದು ಪರಿಗಣಿಸುತ್ತವೆ ಎಂದು ವಿವರಿಸಿದೆ.

DRDO ಔಷಧಿ: ಕೊರೊನಾವೈರಸ್ ಎಲ್ಲಾ ರೂಪಾಂತರ ವೈರಸ್ ವಿರುದ್ಧ ಒಂದೇ ಮದ್ದು!DRDO ಔಷಧಿ: ಕೊರೊನಾವೈರಸ್ ಎಲ್ಲಾ ರೂಪಾಂತರ ವೈರಸ್ ವಿರುದ್ಧ ಒಂದೇ ಮದ್ದು!

ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರ ಆತಂಕ ಪರಿಹರಿಸಲು ನಾವು ಶೀಘ್ರದಲ್ಲಿಯೇ ಹೇಳಿಕೆ ನೀಡುವಂತೆ ಸಚಿವರಿಗೆ ವಿನಂತಿಸಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಉಂಟಾಗಿರುವ ಬಿಕ್ಕಟ್ಟನ್ನು ಕೊನೆಗೊಳಿಸಲು ಪ್ರಯತ್ನಿಸಲು ನಾವು ಸರ್ಕಾರವನ್ನು ಕೋರಿದ್ದೇವೆ ಎಂದು ಹೇಳಿದರು.

Covaxin Recipient Students Being Considered As Unvaccinated By Foreign Varsities: ABVP Tells Vardhan

ಪರಿಸ್ಥಿತಿಯ ಅನಿಶ್ಚಿತತೆ ಮತ್ತು ಗಂಭೀರತೆಯನ್ನು ಗಮನಿಸಿದ ಎಬಿವಿಪಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಪರಿಹರಿಸಲು ವಿನಂತಿಸಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಸುಶ್ರಿ ನಿಧಿ ತ್ರಿಪಾಠಿ ತಿಳಿಸಿದ್ದಾರೆ.

ವಿದೇಶಿ ವಿಶ್ವವಿದ್ಯಾಲಯಗಳ ಇಂತಹ ಮನೋಧರ್ಮ ಭಾರತೀಯ ವಿದ್ಯಾರ್ಥಿಗಳಿಗೆ ತೀವ್ರ ಅನನುಕೂಲವಾಗಲಿದ್ದು ಅವರ ಶೈಕ್ಷಣಿಕ ವರ್ಷಕ್ಕೆ ನಷ್ಟವಾಗುತ್ತದೆ. ಅಮೆರಿಕ ಅಥವಾ ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಸ್ಯಾಟ್ ತೇರ್ಗಡೆ ಹೊಂದಿರುವ 18 ವರ್ಷಕ್ಕಿಂತ ಕೆಳಗಿನ ಹಲವು ವಿದ್ಯಾರ್ಥಿಗಳು ಲಸಿಕಾ ಯೋಜನೆಯಡಿ ಸೇರುವುದಿಲ್ಲ, ಇದರಿಂದ ಅವರ ಶೈಕ್ಷಣಿಕ ವರ್ಷ ನಷ್ಟವಾಗುತ್ತದೆ ಎಂದು ಹೇಳಿದ್ದಾರೆ.

English summary
The RSS-affiliated Akhil Bharatiya Vidyarthi Parishad (ABVP) has submitted a memorandum to Union Health Minister Harsh Vardhan drawing his attention to the fact that those students who have been inoculated with Covaxin are being treated as 'unvaccinated' by foreign universities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X