ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಂತರ ಸೋಂಕಿಗೂ ನಮ್ಮ ಲಸಿಕೆ ಪರಿಣಾಮಕಾರಿ; ಭಾರತ್ ಬಯೋಟೆಕ್

|
Google Oneindia Kannada News

ನವದೆಹಲಿ, ಜನವರಿ 27: ಮೂಲ ಕೊರೊನಾ ಸೋಂಕಿಗಿಂತ 70% ಹೆಚ್ಚು ವೇಗವಾಗಿ ಹರಡಬಲ್ಲ ಬ್ರಿಟನ್ ಮೂಲದ ಕೊರೊನಾ ರೂಪಾಂತರ ಸೋಂಕಿಗೂ ತಮ್ಮ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ ಎಂದು ಲಸಿಕೆ ಉತ್ಪಾದನಾ ಸಂಸ್ಥೆ ಭಾರತ್ ಬಯೋಟೆಕ್ ಹೇಳಿಕೊಂಡಿದೆ.

"ಹೊಸ ರೂಪಾಂತರ ಸೋಂಕಿನ ವಿರುದ್ಧವೂ ಲಸಿಕೆ ಪರಿಣಾಮಕಾರಿಯಾಗಿ ಹೋರಾಡಲಿದೆ. ಇದು ಪರೀಕ್ಷೆಯಿಂದ ಸಾಬೀತಾಗಿದೆ. ಸೋಂಕು ಇನ್ನಷ್ಟು ರೂಪಾಂತರ ಪಡೆಯುವುದನ್ನು ಲಸಿಕೆಯಿಂದ ತಪ್ಪಿಸಬಹುದಾಗಿದೆ" ಎಂದು ಭಾರತ್ ಬಯೋಟೆಕ್ ಇಂದು ಟ್ವೀಟ್ ಮಾಡಿದೆ. ಈ ಕುರಿತು ನಡೆಸಿರುವ ಸಂಶೋಧನೆಯ ಕೊಂಡಿಯನ್ನು ಅದರೊಂದಿಗೆ ಸೇರಿಸಿದೆ. ಈ ವರದಿಯನ್ನು ಪರಿಶೀಲನೆ ನಡೆಸಬೇಕಿದೆ.

ಕೋವ್ಯಾಕ್ಸಿನ್ ಲಸಿಕೆಯ ಕೊನೆಯ ಹಂತದ ಪರಿಣಾಮ ಅರಿಯಲು ಕೆಲವು ವಾರಗಳು ಬೇಕುಕೋವ್ಯಾಕ್ಸಿನ್ ಲಸಿಕೆಯ ಕೊನೆಯ ಹಂತದ ಪರಿಣಾಮ ಅರಿಯಲು ಕೆಲವು ವಾರಗಳು ಬೇಕು

ಇದುವರೆಗೂ ಭಾರತದಲ್ಲಿ 150 ಮಂದಿಯಲ್ಲಿ ಬ್ರಿಟನ್ ರೂಪಾಂತರ ಸೋಂಕು ಪತ್ತೆಯಾಗಿದೆ. ಸದ್ಯಕ್ಕೆ ಇರುವ ಲಸಿಕೆಗಳು ಈ ರೂಪಾಂತರ ಸೋಂಕಿನ ಮೇಲೆ ಪರಿಣಾಮಕಾರಿ ಹೌದೋ ಅಲ್ಲವೋ ಎಂಬ ಕುರಿತು ಚರ್ಚೆಗಳು ಸಾಗಿವೆ. ಇದೀಗ ಭಾರತ್ ಬಯೋಟೆಕ್ ತಮ್ಮ ಲಸಿಕೆ ಪರಿಣಾಮಕಾರಿ ಎಂದು ಹೇಳಿಕೊಂಡಿದೆ.

Covaxin Is Effective Against UK Covid Strain Said Bharat Biotech

ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಪ್ರಾಯೋಗಿಕ ಹಂತದಲ್ಲಿರುವ ಈ ಲಸಿಕೆಯ ಬಳಕೆಗೆ ಭಾರತದಲ್ಲಿ ಅನುಮತಿ ನೀಡುವುದಕ್ಕೆ ವಿರೋಧವೂ ವ್ಯಕ್ತವಾಗಿದ್ದು, ಲಸಿಕೆ ತೆಗೆದುಕೊಳ್ಳಲು ಕೆಲವು ಆರೋಗ್ಯ ಕಾರ್ಯಕರ್ತರು ಹಿಂದೇಟು ಹಾಕುತ್ತಿದ್ದಾರೆ.

English summary
Bharat Biotech tweeted that its coronavirus vaccine Covaxin has been found effective against the UK variant of the virus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X