ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್

|
Google Oneindia Kannada News

ನವದೆಹಲಿ, ಆಗಸ್ಟ್ 2: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಭೀತಿ ಹೆಚ್ಚಿಸಿರುವ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ವಿರುದ್ಧ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯು ಪರಿಣಾಮಕಾರಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧ್ಯಯನ ಹೇಳಿದೆ.

ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಸೂಕ್ಷ್ಮಾಣು ಪ್ರಯೋಗಾಲಯ ಸಂಸ್ಥೆಯ ಸಹಭಾಗಿತ್ವದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಸಂಶೋಧಿಸಿ ಉತ್ಪಾದಿಸಲಾಗುತ್ತಿದೆ.

ಕೊವ್ಯಾಕ್ಸಿನ್ ಲಸಿಕೆಯು ಕೊರೊನಾವೈರಸ್ ಸೋಂಕಿನ ವಿರುದ್ಧ ಶೇ.77.80ರಷ್ಟು ಪರಿಣಾಮಕಾರಿಯಾಗಿದ್ದು, ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಶೇ.65.20ರಷ್ಟು ರಕ್ಷಣೆಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆಯು ತಿಳಿಸಿದೆ.

COVAXIN effective against Delta Plus variant of Coronavirus, says ICMR study

ಕೊವ್ಯಾಕ್ಸಿನ್ ಲಸಿಕೆಯಿಂದ ಶೇ.0.12ರಷ್ಟು ಅಡ್ಡ ಪರಿಣಾಮ:

ಕೊರೊನಾವೈರಸ್ ಸೋಂಕಿತರು ಮತ್ತು ಸೋಂಕಿನಿಂದ ರಕ್ಷಣೆ ಒದಗಿಸುವಲ್ಲಿ ಕೊವ್ಯಾಕ್ಸಿನ್ ಲಸಿಕೆಯು ಶೇ.93.40ರಷ್ಟು ಪರಿಣಾಮಕಾರಿಯಾಗಿದೆ. ಶೇ.0.12ರಷ್ಟು ಜನರಲ್ಲಿ ಸಾಮಾನ್ಯ ರೀತಿ ಅಡ್ಡ ಪರಿಣಾಮಗಳು ಗೋಚರಿಸಿದ್ದು, ಕೇವಲ ಶೇ.0.05ರಷ್ಟು ಜನರಿಗೆ ಮಾತ್ರ ಗಂಭೀರ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ವಿಶ್ಲೇಷಕರು ಸ್ಪಷ್ಟಪಡಿಸಿದ್ದಾರೆ. ಕೊವಿಡ್-19 ಸೋಂಕಿನ ಲಕ್ಷಣಗಳಿಲ್ಲದವರಿಗೆ ಶೇ.63.60ರಷ್ಟು ಸುರಕ್ಷತೆ ನೀಡುವ ಸಾಮರ್ಥ್ಯ ಕೊವ್ಯಾಕ್ಸಿನ್ ಲಸಿಕೆಗೆ ಇದೆ.

ಸಿಹಿಸುದ್ದಿ: ಆನ್‌ಲೈನ್‌ನಲ್ಲಿ ಪರೀಕ್ಷೆ ನಿಮ್ಮ ಮನೆಯಲ್ಲೇ ನಿಮಗೆ ಚಿಕಿತ್ಸೆ! ಸಿಹಿಸುದ್ದಿ: ಆನ್‌ಲೈನ್‌ನಲ್ಲಿ ಪರೀಕ್ಷೆ ನಿಮ್ಮ ಮನೆಯಲ್ಲೇ ನಿಮಗೆ ಚಿಕಿತ್ಸೆ!

ಜುಲೈ 9ರಂದು ತುರ್ತು ಬಳಕೆಗೆ ಅನುಮತಿ ಕೋರಿ ದಾಖಲೆ ಸಲ್ಲಿಕೆ:

ಕಳೆದ ಜುಲೈ 9ರಂದು ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೋರಿ ವಿಶ್ವ ಆರೋಗ್ಯ ಸಂಸ್ಥೆಗೆ ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ರಾಜ್ಯಸಭೆಗೆ ಆರೋಗ್ಯ ಇಲಾಖೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ನೀಡುತ್ತಿರುವ ಲಸಿಕೆಗಳಿಗೆ ಇನ್ನೂ ಇತರೆ ರಾಷ್ಟ್ರಗಳಲ್ಲಿ ಅನುಮೋದನೆಯನ್ನು ನೀಡಿಲ್ಲವಲ್ಲ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.

ಸಪ್ಟೆಂಬರ್ ತಿಂಗಳಿನಲ್ಲಿ ಮಕ್ಕಳಿಗೂ ಕೊರೊನಾವೈರಸ್ ಲಸಿಕೆ:

ಕೊವ್ಯಾಕ್ಸಿನ್ ಲಸಿಕೆಯ ಎರಡು ಮತ್ತು ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ಮಕ್ಕಳು ಮತ್ತು ಯುವಕರ ಮೇಲೆ ನಡೆಸುವುದಕ್ಕೆ ಭಾರತದ ಔಷಧೀಯ ನಿಯಂತ್ರಣ ಪ್ರಾಧಿಕಾರ ಕಳೆದ ಮೇ 12ರಂದು ಭಾರತ್ ಬಯೋಟೆಕ್ ಸಂಸ್ಥೆಗೆ ಅನುಮೋದನೆ ನೀಡಿತ್ತು. ಜೂನ್ 7ರಿಂದ ನವದೆಹಲಿ ಏಮ್ಸ್ 2 ರಿಂದ 17 ವರ್ಷದ ಮಕ್ಕಳ ಮೇಲೆ ವೈದ್ಯಕೀಯ ಪ್ರಯೋಗವನ್ನು ಆರಂಭಿಸಿದೆ.

"ಭಾರತದಲ್ಲಿ ಮುಂಬರುವ ಸಪ್ಟೆಂಬರ್ ತಿಂಗಳಿನಿಂದ 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುವುದು," ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಕೊರೊನಾವೈರಸ್ ಟಾಸ್ಕ್ ಫೋರ್ಸ್ ತಂಡದಲ್ಲಿ ಪ್ರಮುಖರು ಎನಿಸಿರುವ ಖ್ಯಾತ ಶ್ವಾಸಕೋಶಶಾಸ್ತ್ರಜ್ಞ ಡಾ.ರಂದೀಪ್ ಗುಲೇರಿಯಾ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತ್ ಬಯೋಟೆಕ್ ಮಕ್ಕಳ ಮೇಲೆ ನಡೆಸುತ್ತಿರುವ ವೈದ್ಯಕೀಯ ಪ್ರಯೋಗದ ಅಧಿಕೃತ ದತ್ತಾಂಶ ಸಪ್ಟೆಂಬರ್ ತಿಂಗಳ ಹೊತ್ತಿಗೆ ಹೊರ ಬರಲಿದೆ. ಅದೇ ತಿಂಗಳು ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ವಿತರಣೆಗೆ ಅನುಮೋದನೆ ಪಡೆದುಕೊಂಡು ಲಸಿಕೆ ವಿತರಣೆ ಕಾರ್ಯ ಆರಂಭಿಸಲಾಗುವುದು," ಎಂದಿದ್ದಾರೆ.

ಸೆರೋ-ಸಮೀಕ್ಷೆಯಲ್ಲಿ ತಿಳಿದು ಬಂದ ಅಂಶವೇನು?

"ಮಕ್ಕಳಲ್ಲಿ ಪ್ರತಿಕಾಯ ಶಕ್ತಿ ವೃದ್ಧಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಸೆರೋ-ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಅಲ್ಲದೇ, ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವಂತಾ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ, ಎಂದು ಡಾ. ರಂದೀಪ್ ಗುಲೇರಿಯಾ ಸ್ಪಷ್ಟಪಡಿಸಿದ್ದಾರೆ. "ಮಕ್ಕಳನ್ನು ವೈದ್ಯಕೀಯ ಪ್ರಯೋಗದಲ್ಲಿ ಬಳಸಿಕೊಂಡ ಸಂದರ್ಭದಲ್ಲಿ ಅವರಲ್ಲೂ ಪ್ರತಿಕಾಯ ಶಕ್ತಿ ವೃದ್ಧಿಸುವುದನ್ನು ಕಂಡುಕೊಳ್ಳಲಾಗಿದೆ," ಎಂದು ರಂದೀಪ್ ಗುಲೇರಿಯಾ ಸಲಹೆ ನೀಡಿದ್ದಾರೆ.

ವೈದ್ಯಕೀಯ ಪ್ರಯೋಗದ ಅಂಕಿ-ಅಂಶ ಸಲ್ಲಿಸುವ ಷರತ್ತು

ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ 2-17 ವರ್ಷದವರಿಗೆ ಸುರಕ್ಷಿತವೇ ಎಂಬ ಬಗ್ಗೆ ವಿಸ್ತೃತ ಚರ್ಚೆಯ ಬಳಿಕ ವೈದ್ಯಕೀಯ ಪ್ರಯೋಗಕ್ಕೆ ಷರತ್ತುಬದ್ಧ ಅನುಮೋದನೆ ನೀಡಲಾಗಿದೆ. 2ನೇ ಹಂತದ ವೈದ್ಯಕೀಯ ಪ್ರಯೋಗ ಹಾಗೂ ಅದರ ಫಲಿಶಾಂತಕ್ಕೆ ಸಬಂಧಿಸಿದ ದತ್ತಾಂಶವನ್ನು ಸಲ್ಲಿಸಿದ ನಂತರ ಡಿಎಸ್ಎಂಬಿ ಶಿಫಾರಸ್ಸಿನ ಮೇಲೆ 3ನೇ ಹಂತದ ಪ್ರಯೋಗಕ್ಕೆ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದೆ. ಕಳೆದ ಫೆಬ್ರವರಿ 24ರಂದು ವಿಷಯ ತಜ್ಞರ ಸಮಿತಿಯು ಈ ಬಗ್ಗೆ ಮೊದಲೇ ಚರ್ಚೆ ನಡೆಸಿದ್ದು, ಪರಿಷ್ಕೃತ ವೈದ್ಯಕೀಯ ಪ್ರಯೋಗದ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಸದ್ಯ ದೇಶದಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲು ಐಸಿಎಂಆರ್ ಅನುಮೋದನೆ ನೀಡಿದೆ.

English summary
COVAXIN effective against Delta Plus variant of Coronavirus, says Indian Council of Medical Research study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X