ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ಲಭ್ಯವಾಗಲಿವೆ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು

|
Google Oneindia Kannada News

ನವದೆಹಲಿ, ಜನವರಿ 28: ಶೀಘ್ರದಲ್ಲಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲೂ ಕೋವ್ಯಾಕ್ಸಿನ್, ಕೋವಿಶೀಲ್ಡ್‌ ಕೊರೊನಾ ಲಸಿಕೆಗಳು ಲಭ್ಯವಾಗಲಿವೆ.

ಮುಂದಿನ ದಿನಗಳಲ್ಲಿ ಕೊರೊನಾ ವೈರಸ್ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳು ಆಸ್ಪತ್ರೆಗಳಲ್ಲಿ ಮತ್ತು ಕ್ಲಿನಿಕ್‌ಗಳಲ್ಲಿ ಖರೀದಿಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮೋದನೆ ನೀಡಿದೆ.

21 ಗಂಟೆ ಚರ್ಮ ಮತ್ತು ಪ್ಲಾಸ್ಟಿಕ್‌ನಲ್ಲಿ 8 ದಿನಕ್ಕಿಂತ ಹೆಚ್ಚು ಬದುಕುಳಿಯುವ ಓಮಿಕ್ರಾನ್: ಅಧ್ಯಯನ21 ಗಂಟೆ ಚರ್ಮ ಮತ್ತು ಪ್ಲಾಸ್ಟಿಕ್‌ನಲ್ಲಿ 8 ದಿನಕ್ಕಿಂತ ಹೆಚ್ಚು ಬದುಕುಳಿಯುವ ಓಮಿಕ್ರಾನ್: ಅಧ್ಯಯನ

ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮಗಳು-2019 ರ ಅಡಿಯಲ್ಲಿ ಕೋವಿಶೀಲ್ಡ್, ಕೋವಾಕ್ಸಿನ್ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಡಿಸಿಜಿಐ ಅನುಮತಿ ನೀಡಿದೆ.

Covaxin, Covishield Granted Market Approval In India But Conditions Apply

ಪ್ರಸ್ತುತ, ಕೋವ್ಯಾಕ್ಸಿನ್ ಪ್ರತಿ ಡೋಸ್ ಗೆ ರೂ. 1,200 ವೆಚ್ಚವಾಗುತ್ತದೆ ಆದರೆ ಕೋವಿಶೀಲ್ಡ್ ರೂ. 150 ಸೇವಾ ಶುಲ್ಕ ಸೇರಿದಂತೆ ಖಾಸಗಿ ಸೌಲಭ್ಯಗಳಲ್ಲಿ ರೂ. 780 ಆಗಿದೆ.

ಜನವರಿ 19 ರಂದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಕೋವಿಡ್-19 ಕುರಿತ ವಿಷಯ ತಜ್ಞರ ಸಮಿತಿಯು(ಎಸ್ಇಸಿ) ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ(ಎಸ್ಐಐ) ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಗೆ ಮುಕ್ತ ಮಾರುಕಟ್ಟೆ ಅನುಮೋದನೆಯನ್ನು ಬಳಸಲು ಶಿಫಾರಸು ಮಾಡಿದ ನಂತರ ಈ ಅನುಮೋದನೆ ಬಂದಿದೆ. ಜನವರಿ 3, 2021ರಂದು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್‌ಗೆ ತುರ್ತು ಬಳಕೆಯ ಅಧಿಕಾರ(ಇಯುಎ) ನೀಡಲಾಗಿದೆ.

ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳಿಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಷರತ್ತುಬದ್ಧ ಒಪ್ಪಿಗೆ ಸೂಚಿಸಿದ್ದು, ಮೆಡಿಕಲ್ ಸ್ಟೋರ್‌ಗಳಲ್ಲಿ ಲಸಿಕೆಗಳು ಲಭ್ಯವಿರುವುದಿಲ್ಲ.

ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ಈ ಲಸಿಕೆಗಳನ್ನು ಖರೀದಿಸಲು ಮತ್ತು ಅವುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ವ್ಯಾಕ್ಸಿನೇಷನ್ ಡೇಟಾವನ್ನು ಡಿಸಿಜಿಐಗೆ ಸಲ್ಲಿಸಬೇಕು ಮತ್ತು ಡೇಟಾವನ್ನು ಕೋವಿನ್ ಅಪ್ಲಿಕೇಶನ್‌ನಲ್ಲಿ ನವೀಕರಿಸಬೇಕಾಗುತ್ತದೆ.

ನಿಯಮಿತ ಮಾರುಕಟ್ಟೆ ಅನುಮೋದನೆ ಪಡೆದ ನಂತರ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಬೆಲೆಯನ್ನು ಪ್ರತಿ ಡೋಸ್ ಗೆ 275 ರೂ ಮತ್ತು ಹೆಚ್ಚುವರಿ ಸೇವಾ ಶುಲ್ಕ 150 ರೂ.ಗೆ ಮಿತಿಗೊಳಿಸಲಾಗುವುದು. ಲಸಿಕೆಗಳನ್ನು ಕೈಗೆಟುಕುವಂತೆ ಮಾಡಲು ಬೆಲೆಯನ್ನು ಮಿತಿಗೊಳಿಸಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) ಕಾರ್ಯ ನಿರ್ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವ್ಯಾಕ್ಸಿನ್‌ ತಯಾರಕಾ ಸಂಸ್ಥೆ ಭಾರತ್‌ ಬಯೋಟೆಕ್‌ ಮತ್ತು ಕೋವಿಶೀಲ್ಡ್‌ ತಯಾರಕಾ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ, ಕ್ಲಿನಿಕಲ್‌ ಪ್ರಯೋಗಕ್ಕೆ ಸಂಬಂಧಿಸಿದ ಡೇಟಾವನ್ನು ಭಾರತ ಔಷಧ ನಿಯಂತ್ರಕಕ್ಕೆ ಸಲ್ಲಿಸಿವೆ. ಕೋವಿಡ್-‌19 ವಿಷಯ ತಜ್ಞರ ಸಮಿತಿಯು ಜ.19 ರಂದು ಅನುಮೋದನೆಯನ್ನು ಶಿಫಾರಸು ಮಾಡಿದ ನಂತರ ಮಾರುಕಟ್ಟೆಗೆ ಮಾರಾಟಕ್ಕೆ ಅನುಮತಿಸಲಾಗಿದೆ.

ಕೋವಿಶೀಲ್ಡ್‌ಗೆ ನಿಯಮಿತ ಮಾರುಕಟ್ಟೆ ಅಧಿಕಾರವನ್ನು ಕೋರಿ ಅ.25 ರಂದು ಡಿಸಿಜಿಐಗೆ ಸೀರಮ್‌ ಇನ್‌ಸ್ಟಿಟ್ಯೂಟ್‌ ಅರ್ಜಿ ಸಲ್ಲಿಸಲಾಗಿತ್ತು. ಅಂತೆಯೇ ಕೋವ್ಯಾಕ್ಸಿನ್‌ಗೆ ನಿಯಮಿತ ಮಾರುಕಟ್ಟೆ ಅನುಮೋದನೆಗೆ ಭಾರತ್‌ ಬಯೋಟೆಕ್‌ ಅರ್ಜಿ ಸಲ್ಲಿಸಿತ್ತು.

ಭಾರತದಲ್ಲಿ ಈವರೆಗೆ ಕೋವಿಡ್‌ ಲಸಿಕೆ ಅಭಿಯಾನದಲ್ಲಿ 163.84 ಕೋಟಿ ಡೋಸ್‌ ನೀಡಲಾಗಿದೆ. ದೇಶದಲ್ಲಿ ಶೇ.72 ರಷ್ಟು ವಯಸ್ಕರು ಲಸಿಕೆಗಳ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. 15-18 ವಯಸ್ಸಿನ ಮಕ್ಕಳಲ್ಲಿ ಶೇ.52 ಮಂದಿ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ.

Recommended Video

Russia Ukraine ಸಂಘರ್ಷದಿಂದ ಭಾರತಕ್ಕಿರುವ ಅಪಾಯವೇನು? | Oneindia Kannada

English summary
India's drug regulator granted market approval for Covid-19 vaccines Covishield and Covaxin for use in the adult population subject to certain conditions on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X