ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಗ್ನೇಶ್ ಮೆವಾನಿ ಪ್ರಕರಣ: ಪೊಲೀಸರಿಗೆ ಕೋರ್ಟ್ ತರಾಟೆ

|
Google Oneindia Kannada News

ಗುವಾಹಟಿ, ಏ. 30: ಗುಜರಾತ್ ಶಾಸಕ ಹಾಗೂ ಸಾಮಾಜಿಕ ಕಾರ್ಯಕರ್ತ ಜಿಗ್ನೇಶ್ ಮೇವಾನಿ ವಿರುದ್ಧ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದರೆನ್ನಲಾದ ಪೊಲೀಸರ ವಿರುದ್ಧ ಅಸ್ಸಾಮ್‌ನ ನ್ಯಾಯಾಲಯವೊಂದು ಆಕ್ರೋಶ ವ್ಯಕ್ತಪಡಿಸಿದೆ. ಮಹಿಳಾ ಪೊಲೀಸ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಜಿಗ್ನೇಶ್ ಮೆವಾನಿಗೆ ಜಾಮೀನು ನೀಡಿ ಆದೇಶ ಹೊರಡಿಸುವ ವೇಳೆ ಅಸ್ಸಾಮ್‌ನ ಬಾರಪೇಟ ಕೋರ್ಟ್‌ನ ನ್ಯಾಯಾಧೀಶರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರು ದುರದ್ದೇಶಪೂರ್ವಕವಾಗ ಈ ಪ್ರಕರಣ ಸೃಷ್ಟಿ ಮಾಡಿದ್ದಾರೆಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು.

"ಬಹಳ ಕಷ್ಟಪಟ್ಟು ನಾವು ಗಳಿಸಿದ ಪ್ರಜಾತಂತ್ರ ವ್ಯವಸ್ಥೆಯನ್ನ ಪೊಲೀಸ್ ಸರಕಾರವಾಗಿ ಬದಲಿಸುತ್ತಿರಲಾಗುತ್ತಿರುವುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ" ಎಂದು ನ್ಯಾಯಾಧೀಶರಾದ ಅಪರೇಶ್ ಚಕ್ರವರ್ತಿ ತಮ್ಮ ಆದೇಶದಲ್ಲಿ ತಿಳಿಸಿದರು.

ಪಟಿಯಾಲ ಹಿಂಸಾಚಾರ: ಇಂಟರ್ನೆಟ್ ಸೇವೆ ಸ್ಥಗಿತ, 144 ಸೆಕ್ಷನ್ ಜಾರಿಪಟಿಯಾಲ ಹಿಂಸಾಚಾರ: ಇಂಟರ್ನೆಟ್ ಸೇವೆ ಸ್ಥಗಿತ, 144 ಸೆಕ್ಷನ್ ಜಾರಿ

ಅನೇಕ ಸಾಮಾಜಿಕ ಮತ್ತು ದಲಿತ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಶಾಸಕ ಜಿಗ್ನೇಶ್ ಮೆವಾನಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದರೆಂಬ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿತ್ತು. ಅಸ್ಸಾಮ್ ಪೊಲೀಸರು ಇದೇ ಏಪ್ರಿಲ್ 20ರಂದು ಬಂಧಿಸಿದರು. ಮೇ 25ರಂದು ಈ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಗುತ್ತಿದ್ದಂತೆಯೇ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಹೊಸ ಪ್ರಕರಣ ದಾಖಲಾಗಿ ಅದೇ ದಿನ ಅವರನ್ನ ಮತ್ತೆ ಬಂಧನದಲ್ಲಿ ಮುಂದುವರಿಸಲಾಯಿತು. ಇದೀಗ ಪೊಲೀಸರಿಂದ ಈ ಹೊಸ ಪ್ರಕರಣವನ್ನು ಬೇಕಂತಲೇ ಸೃಷ್ಟಿಸಲಾಗಿತ್ತು ಎಂಬುದು ಸಾಬೀತಾಗಿದೆ.

Court slams Assam Police for planting case against Jignesh Mevani

"ಮ್ಯಾಜಿಸ್ಟ್ರೇಟ್ ಮುಂದೆ ಮಹಿಳೆ ನೀಡಿದ ಹೇಳಿಕೆಯೇ ಬೇರೆ, ಎಫ್‌ಐಆರ್‌ನಲ್ಲಿ ಬರೆದಿರುವುದೇ ಬೇರೆ. ಇದನ್ನ ಗಮನಿಸದರೆ ಆರೋಪಿ ಜಿಗ್ನೇಶ್ ಮೆವಾನಿ ಅವರನ್ನು ದೀರ್ಘ ಅವಧಿಯವರೆಗೆ ಬಂಧನದಲ್ಲಿಟ್ಟುಕೊಳ್ಳಲು ದಿಢೀರ್ ಪ್ರಕರಣವನ್ನ ಸೃಷ್ಟಿಸಲಾಗಿರುವುದು ಕಂಡುಬಂದಿದೆ" ಎಂದು ಈ ಸೆಷೆನ್ಸ್ ಕೋರ್ಟ್ ಹೇಳಿದೆ.

"ಇಂಥ ಸುಳ್ಳು ಎಫ್‌ಐಆರ್‌ಗಳನ್ನ ದಾಖಲಿಸುವುದನ್ನು ತಪ್ಪಿಸಲು ಮತ್ತು ಪೊಲೀಸರ ವಿಶ್ವಾಸಾರ್ಹತೆ ಹೆಚ್ಚಿಸಲು ಅಸ್ಸಾಮ್ ಪೊಲೀಸ್ ಇಲಾಖೆಯಲ್ಲಿ ಸುಧಾರಣೆಗಳಾಗುವ ಅಗತ್ಯತೆ ಇದೆ. ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯೂ ಬಾಡಿ ಕ್ಯಾಮೆರಾಗಳನ್ನ ಧರಿಸಬೇಕು. ಆರೋಪಿಗಳನ್ನ ಬಂಧಿಸುವಾಗ ಪೊಲೀಸ್ ವಾಹನಗಳಲ್ಲಿ ಸಿಸಿಟಿವಿ ಇರಬೇಕು ಎಂಬಿತ್ಯಾದಿ ಕಾನೂನುಗಳನ್ನ ರೂಪಿಸಬೇಕು. ಈ ನಿಟ್ಟಿನಲ್ಲಿ ಗುವಾಹಟಿ ಹೈಕೋರ್ಟ್ ಅಸ್ಸಾಮ್ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ಪೊಲೀಸ್ ವ್ಯವಸ್ಥೆ ಸುಧಾರಣೆ ಆಗದಿದ್ದರೆ ನಮ್ಮದು ಪೊಲೀಸ್ ರಾಜ್ಯವಾಗುತ್ತದೆ" ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.

ಕೆಪಿಸಿಸಿ ಕಾರ್ಮಿಕ ಸಮಿತಿ ಅಧ್ಯಕ್ಷ ಎಸ್‌.ಎಸ್‌. ಪ್ರಕಾಶಂ ನಿಧನಕೆಪಿಸಿಸಿ ಕಾರ್ಮಿಕ ಸಮಿತಿ ಅಧ್ಯಕ್ಷ ಎಸ್‌.ಎಸ್‌. ಪ್ರಕಾಶಂ ನಿಧನ

ಪೊಲೀಸರ ಅಧಿಕಾರ ದುರುಪಯೋಗ ಘಟನೆಗಳು ಹೆಚ್ಚು ಇದ್ದು ಗುವಾಹಟಿ ಉಚ್ಚ ನ್ಯಾಯಾಲಯವು ಸ್ವಯಂ ಆಗಿ ಪ್ರಕರಣ ಪರಿಗಣಿಸಬೇಕೆಂದು ಬಾರಪೆಟಾ ಸೆಷನ್ಸ್ ಕೋರ್ಟ್ ಇದೇ ವೇಳೆ ಮನವಿ ಮಾಡಿದೆ.

Court slams Assam Police for planting case against Jignesh Mevani

ಬಿಜೆಪಿಯದ್ದು ಹೇಡಿತನ ಎಂದು ಮೆವಾನಿ ಕಿಡಿ:
ತನ್ನ ವಿರುದ್ಧ ಒಬ್ಬ ಮಹಿಳೆಯನ್ನ ಬಳಸಿದ ಬಿಜೆಪಿಯದ್ದು ಹೇಡಿತನದ ಕೆಲಸ ಎಂದು ಆರೋಪಿ ಜಿಗ್ನೇಶ್ ಮೆವಾನಿ ಕಿಡಿಕಾರಿದ್ದಾರೆ. "ನನ್ನನ್ನು ಬಂಧಿಸುವುದು ಸರಳ ವಿಷಯವಾಗಿರಲಿಲ್ಲ. ಪ್ರಧಾನಿ ಕಚೇರಿಯಲ್ಲಿರುವ ರಾಜಕೀಯ ನಾಯಕರ ಸೂಚನೆ ಮೇರೆಗೆ ಈ ಕೆಲಸ ಮಾಡಲಾಗಿದೆ" ಎಂದು ಜಿಗ್ನೇಶ್ ಹೇಳಿದರೆಂದು ಎನ್‌ಡಿಟಿವಿ ವರದಿ ಮಾಡಿದೆ.

ಮಹಿಳಾ ಪೊಲೀಸ್ ಮೇಲೆ ಹಲ್ಲೆ ಎಸಗಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಜಿಗ್ನೇಶ್, "...ಈ ಎರಡನೇ ಕೇಸ್‌ನಲ್ಲಿ ಒಬ್ಬ ಮಹಿಳೆಯನ್ನ ಬಳಸಿಕೊಂಡು ಸುಳ್ಳು ಕಥೆಗಳನ್ನ ಸೃಷ್ಟಿಸಿ ಪ್ರಕರಣ ದಾಖಲು ಮಾಡಲಾಗಿದೆ. ಒಬ್ಬ ಮಹಿಳೆಯನ್ನ ನನ್ನ ವಿರುದ್ಧ ಛೂ ಬಿಡುವಷ್ಟು ಹೇಡಿಯಾಗಿದೆ ಸರಕಾರ... ಈ ವರ್ಷ ನಡೆಯಲಿರುವ ಗುಜರಾತ್ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈ ಕೆಲಸ ಮಾಡುತ್ತಿದೆ" ಎಂದು ಲೇವಡಿ ಮಾಡಿದರು.

ಜಿಗ್ನೇಶ್ ಮೆವಾನಿ ಅವರು ದಲಿತ ವರ್ಗಕ್ಕೆ ಸೇರಿದ್ದು ಕಮ್ಯುನಿಸ್ಟ್ ಮತ್ತು ಪ್ರಗತಿಪರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಗೌರಿ ಲಂಕೇಶ್ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ವಿದ್ಯಾರ್ಥಿ ಹೋರಾಟಗಾರರಾಗಿದ್ದ ಕನ್ಹಯ್ಯ ಕುಮಾರ್, ಶೆಹ್ಲಾ ರಷೀದ್, ಉಮರ್ ಖಾಲಿದ್ ಅವರೊಂದಿಗೂ ಮೇವಾನಿ ಆಪ್ತ ಸಂಬಂಧ ಇದೆ. ಜಿಗ್ನೇಶ್ ಬಂಧನವಾದಾಗ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಕನ್ಹಯ್ಯ ಕುಮಾರ್ ಈ ಪ್ರತಿಭಟನೆಗಳ ನೇತೃತ್ವ ವಹಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
A court in Assam has severely criticised the state police for trying to implicate Gujarat MLA Jignesh Mevani in a "manufactured case" of assault on a woman constable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X