ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳಿ ಮಕ್ಕಳಿಗೆ 'ಕೊರೊನಾ', 'ಕೋವಿಡ್' ಎಂದು ಹೆಸರಿಟ್ಟ ತಂದೆ ತಾಯಿ

|
Google Oneindia Kannada News

ರಾಯ್ಪುರ್, ಏಪ್ರಿಲ್ 04: ಕೊರೊನಾ ವೈರಸ್‌ ವಿರುದ್ಧ ವಿಶ್ವವೇ ಹೋರಾಟ ನಡೆಸುತ್ತಿದೆ. ಕೊರೊನಾ ಎಂದರೆ ಜನ ಭಯಪಡುತ್ತಿದ್ದಾರೆ. ಎಷ್ಟೋ ಜೀವವನ್ನು ಬಲಿ ಪಡೆಯುತ್ತಿರುವ ಕೊರೊನಾಗೆ ಜನ ಶಾಪ ಹಾಕುತ್ತಿದ್ದಾರೆ. ಆದರೆ, ಇಂತಹ ವಾತಾವರಣದಲ್ಲಿ ಅವಳಿ ಮಕ್ಕಳು ಕೊರೊನಾ ಹಾಗೂ ಕೋವಿಡ್ ಎಂದು ಹೆಸರು ಪಡೆದುಕೊಂಡಿದ್ದಾರೆ.

ಹೌದು.. ಛತ್ತೀಸ್‌ಘಡದಲ್ಲಿ ದಂಪತಿಯೊಬ್ಬರು ತಮ್ಮ ಅವಳಿ ಮಕ್ಕಳಿಗೆ ಕೊರೊನಾ ಹಾಗೂ ಕೋವಿಡ್ ಎಂದು ಹೆಸರು ಇಟ್ಟಿದ್ದಾರೆ. ಕೊರೊನಾ ಭೀತಿ, ಲಾಕ್ ಡೌನ್ ನಡುವೆ ಜನಿಸಿರುವ ತಮ್ಮ ಮಕ್ಕಳಿಗೆ ಅದೇ ಹೆಸರಿನ ನಾಮಕರಣ ಮಾಡಿದ್ದಾರೆ. ಈ ಮಕ್ಕಳ ಹೆಸರು ಈಗ ಆಕರ್ಷಣೆ ಕಾರಣವಾಗಿದೆ.

ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ

ಮಕ್ಕಳಿಗೆ ದೇವರ ಹೆಸರೋ, ಇಷ್ಟದ ನಟರ ಹೆಸರೋ, ಅಜ್ಜ, ಅಜ್ಜಿಯ ಹೆಸರೋ, ಸಾಧಕರ ಹೆಸರೋ ಅಥವಾ ಯಾವುದೋ ಒಂದು ಫ್ಯಾನ್ಸಿ ಹೆಸರೋ ಇಡುವ ಈ ಕಾಲದಲ್ಲಿ, ಈ ದಂಪತಿ ಮಕ್ಕಳಿಗೆ ವೈರಸ್‌ ಹೆಸರು ಇಟ್ಟಿದ್ದಾರೆ. ಯಾಕೆ ಮಕ್ಕಳಿಗೆ ಆ ಹೆಸರು ಎನ್ನುವುದಕ್ಕೆ ಕಾರಣವನ್ನೂ ಸಹ ದಂಪತಿಗಳು ನೀಡಿದ್ದಾರೆ.

ಗಂಡು ಮಗು ಕೋವಿಡ್, ಹೆಣ್ಣು ಮಗು ಕೊರೊನಾ

ಗಂಡು ಮಗು ಕೋವಿಡ್, ಹೆಣ್ಣು ಮಗು ಕೊರೊನಾ

ಈ ದಂಪತಿ ಮೂಲತಃ ಉತ್ತರ ಪ್ರದೇಶದವರು. ದೆಹಲಿಯ ಪುರಾಣಿ ಬಸ್ತಿ ಪ್ರದೇಶದಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಾರ್ಚ್ 27 ಮುಂಜಾನೆ ಛತ್ತೀಸ್‌ಘಡದ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಹುಟ್ಟಿದೆ. ಗಂಡು ಮಗುವಿಗೆ ಕೋವಿಡ್ ಎಂದು, ಹೆಣ್ಣು ಮಗುವಿಗೆ ಕೊರೊನಾ ಎಂದು ತಂದೆ, ತಾಯಿ ನಾಮಕರಣ ಮಾಡಿದ್ದಾರೆ.

ನೆನಪಿಗೆಗಾಗಿ ಆ ಹೆಸರು

ನೆನಪಿಗೆಗಾಗಿ ಆ ಹೆಸರು

ವೈರಸ್‌ ಹೆಸರು ಮಕ್ಕಳಿಗೆ ಇಟ್ಟಾಗ ಎಲ್ಲರಿಗೂ ಯಾಕೆ ಎನ್ನುವ ಪ್ರಶ್ನೆ ಬರುತ್ತದೆ. ಮಕ್ಕಳಿಗೆ ಹೆಸರಿಟ್ಟಿರುವ ದಂಪತಿ ನಿಮ್ಮ ಇಂತಹ ಪ್ರಶ್ನೆಗೂ ಉತ್ತರ ನೀಡಿದ್ದಾರೆ. ಕೊರೊನಾ ಸಮಯದಲ್ಲಿ ಹುಟ್ಟಿದ ಮಕ್ಕಳು ಎಂಬ ಕಾರಣಕ್ಕೆ ಆ ನೆನಪಿಗಾಗಿ ಈ ಹೆಸರನ್ನು ಇಡಲಾಗಿದೆಯಂತೆ. ತಂದೆ ಮೊದಲು ಕೊರೊನಾ, ಕೋವಿಡ್ ಹೆಸರು ಸೂಚಿಸಿದ್ದು, ತಾಯಿ ಕೂಡ ಅದಕ್ಕೆ ಒಪ್ಪಿಕೊಂಡಿದ್ದಾರೆ.

ಕೊರೊನಾ ಮುಕ್ತ ಹೋಮ್ ಡೆಲಿವರಿ:ಹೇಗೆ ಸಾಧ್ಯ?ಕೊರೊನಾ ಮುಕ್ತ ಹೋಮ್ ಡೆಲಿವರಿ:ಹೇಗೆ ಸಾಧ್ಯ?

ಹೆರಿಗೆ ಸಮಯದಲ್ಲಿ ಆದ ತೊಂದರೆಗಳು

ಹೆರಿಗೆ ಸಮಯದಲ್ಲಿ ಆದ ತೊಂದರೆಗಳು

ಮಾರ್ಚ್ 27 ರಂದು ಭಾರತದಲ್ಲಿ ಲಾಕ್‌ಡೌನ್ ಜಾರಿಗೆ ಬಂದಿತ್ತು. ಈ ವೇಳೆ ದಂಪತಿಗೆ ಆಸ್ಪತ್ರೆಗೆ ಹೋಗಲು ತುಂಬ ಕಷ್ಟವಾಗಿತಂತೆ. ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿದ್ವಿ. ಆದರೆ, ಅದು ಬರುವುದು ಕೂಡ ತಡ ಆಯಿತು. ಲಾಕ್‌ಡೌನ್ ಇದ್ದ ಕಾರಣ ಆಂಬುಲೆನ್ಸ್ ಗಳನ್ನು ತಪಾಸಣೆ ಮಾಡಿ ಪೊಲೀಸರು ಬಿಡುತ್ತಿದ್ದರು. ಈ ಕಷ್ಟಗಳನ್ನೆಲ್ಲ ಎದುರಿಸಿ ಆಸ್ಪತ್ರೆ ಸೇರಿದೆವು ಎಂದು ದಂಪತಿ ಹೇಳಿಕೊಂಡಿದ್ದಾರೆ.

ಆಸ್ಪತ್ರೆಯವರು ಹಾಗೆ ಕರೆದರು

ಆಸ್ಪತ್ರೆಯವರು ಹಾಗೆ ಕರೆದರು

ಹೆರಿಗೆ ಸಮಯದಲ್ಲಿ ಆದ ಕಷ್ಟಗಳು, ಕೊರೊನಾ ಜನರಿಗೆ ಸ್ವಚ್ಛತೆ ಬಗ್ಗೆ ಮಾಡಿರುವ ಪಾಠ, ಅದು ಬೆಳೆಸಿರುವ ಒಳ್ಳೆಯ ಅಭ್ಯಾಸಗಳು, ಎಲ್ಲವೂ ಮಕ್ಕಳಿಗೆ ಕೊರೊನಾ ಹಾಗೂ ಕೋವಿಡ್ ಎಂದು ಹೆಸರು ಇಡಲು ಕಾರಣವಾಗಿದೆಯಂತೆ. ಹೆಸರು ಇಡುವ ಮುನ್ನವೇ ಆಸ್ಪತ್ರೆಯವರು ಕೂಡ ಕೊರೊನಾ, ಕೋವಿಡ್ ಎಂದೇ ಕರೆದು ತಮಾಷೆ ಮಾಡುತ್ತಿದ್ದರಂತೆ. ಸದ್ಯ, ತಾಯಿ, ಮಕ್ಕಳು ಆರೋಗ್ಯವಾಗಿದ್ದು, ಡಿಸ್ಜಾರ್ಜ್ ಮಾಡಲಾಗಿದೆ.

English summary
A couple in Chhattisgarh named newborn twins as Corona and Covid for a memories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X