• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ದೇಶದೊಳಗಿರುವ 'ಪಾಕಿಸ್ತಾನಿ'ಗಳನ್ನು ಮೊದಲು ಹೊರಗಟ್ಟಬೇಕಿದೆ

By ಬಾಲರಾಜ್ ತಂತ್ರಿ
|

ಶತ್ರುಗಳನ್ನಾದರು ನಂಬಬಹುದು, ಮಿತ್ರರಂತೆ ನಟಿಸುವವರನ್ನು ನಂಬಬಾರದು ಎನ್ನುವ ಮಾತಿದೆ. ದೇಶದೊಳಗಿದ್ದು, ಇಲ್ಲಿನ ಎಲ್ಲಾ ಸವಲತ್ತುಗಳನ್ನು ಅನುಭವಿಸಿ, ಮಾತೃಭೂಮಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಮೋಸ ಮಾಡುವ 'ನಮ್ಮೊಳಗಿನ ಪಾಕಿಸ್ತಾನಿ' ಗಳಿಂದಲೇ, ಭಯೋತ್ಪಾದನೆ ಮತ್ತು ಕಾಶ್ಮೀರ ವಿವಾದ ಇನ್ನೂ ಜೀವಂತವಾಗಿರುವುದು.

ಎರಡು ವರ್ಷಗಳ ಹಿಂದಿನ ಘಟನೆಯನ್ನು ಒಮ್ಮೆ ನೆನಪಿಸಿಕೊಳ್ಳೋಣ. ಕಾಶ್ಮೀರದ ಯುವಕನೊಬ್ಬನನ್ನು ಸೇನೆಯ ಜೀಪಿಗೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಿದ್ದ ಮೇಜರ್‌ ಗೊಗೋಯ್‌ ಅವರ ವಿರುದ್ದ ಯಾವ ಮಟ್ಟಿನ ಆಕ್ರೋಶ ವ್ಯಕ್ತವಾಗಿತ್ತು. ಸೆಕ್ಯೂಲರ್ ಸೋಗಿನಲ್ಲಿ ಮಾನವಹಕ್ಕುಗಳ ಹೋರಾಟಗಾರರು ಅಂದು ಯಾವ ಯುವಕನ ಪರವಾಗಿ ನಿಂತಿದ್ದರೋ, ಅವನು ದೇಶ ಕಟ್ಟುವ ಕೆಲಸವನ್ನು ಮಾಡಿರಲಿಲ್ಲ. ದೇಶ ಕಾಯುವ ಸೈನಿಕರ ಮೇಲೆ ಕಲ್ಲೆಸೆಯುವ ದೇಶದ್ರೋಹಿಯಾಗಿದ್ದ.

ಸೇನೆಯ ಮೇಲೆ ಕಲ್ಲು ತೂರಾಟಗಾರರ ಹಡೆಮುರಿ ಕಟ್ಟಲು, ಕಲ್ಲು ತೂರಾಟಗಾರರ ನಾಯಕನನ್ನು ಸೇನಾ ವಾಹನಕ್ಕೆ ಗುರಾಣಿಯಾಗಿ ಕಟ್ಟಿದ ಪ್ರಕರಣ ಸಂಬಂಧ ಸಂತ್ರಸ್ತ ವ್ಯಕ್ತಿಗೆ 10 ಲಕ್ಷ ಪರಿಹಾರ ನೀಡಬೇಕು ಎಂದು ಕಾಶ್ಮೀರ ಮಾನವ ಹಕ್ಕು ಆಯೋಗದ ಸಮಿತಿ ತೀರ್ಪು ನೀಡಿತ್ತು. ಮೇಜರ್ ಗೋಗೋಯ್ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಸೇನಾ ಮುಖ್ಯಸ್ಥರನ್ನು ಕಮ್ಯೂನಿಸ್ಟರು ತರಾಟೆಗೆ ತೆಗೆದುಕೊಂಡಿದ್ದರು.

ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ ನವಜೋತ್ ಸಿಂಗ್ ಸಿದ್ದು, ವ್ಯಾಪಕ ಆಕ್ರೋಶ

ಅಂದು ಆ ಯುವಕನ ಮೇಲೆ ಮಾನವೀಯತೆಯ ಡೋಂಗಿ ತೋರಿದ ಆತ್ಮವಂಚಕ ವಿಚಾರವಾದಿಗಳಿಗೆ, ಮಾನವಹಕ್ಕು ಹೋರಾಟಗಾರರಿಗೆ ಕಾಶ್ಮೀರ ಪಂಡಿತರನ್ನು ನಿರ್ದಾಕ್ಷಿಣ್ಯವಾಗಿ ಅವರದೇ ನೆಲದಿಂದ ಹೊರಹಾಕಿದಾಗ ಅವರ ಮೇಲೆ ಮಾನವೀಯತೆ ಕಾಣಲಿಲ್ಲ. ವಿಶೇಷ ಸ್ಥಾನಮಾನದ ಹೆಸರಿನಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿದ್ದ ದೇಶ ವಿರೋಧಿ ಕೆಲಸಗಳು ಇವರ ಕಣ್ಣಿಗೆ ಬಿದ್ದಿಲ್ಲ. ಬದಲಾಗಿ, ಬಾಂಗ್ಲಾದಿಂದ ಅಕ್ರಮವಾಗಿ ದೇಶಕ್ಕೆ ಬಂದ ವಲಸಿಗರ ಮೇಲೆ ಇವರುಗಳು ಮಾನವೀಯತೆ ಕಂಡರು.

ಬಾರಾಮುಲ್ಲಾ ನಗರ 'ಭಯೋತ್ಪಾದನಾ ಮುಕ್ತ' ಜಿಲ್ಲೆ

ಬಾರಾಮುಲ್ಲಾ ನಗರ 'ಭಯೋತ್ಪಾದನಾ ಮುಕ್ತ' ಜಿಲ್ಲೆ

ಕಳೆದ ಜನವರಿ ತಿಂಗಳಲ್ಲಿ ಬಾರಾಮುಲ್ಲಾ ನಗರವನ್ನು 'ಭಯೋತ್ಪಾದನಾ ಮುಕ್ತ' ಜಿಲ್ಲೆಯನ್ನಾಗಿ ಘೋಷಿಸಲಾಯಿತೋ, ಅಲ್ಲಿನ ಯುವಕರನ್ನು ಶಿಕ್ಷಣದತ್ತ ಒಲವು ತೋರುವ ಕೆಲಸಕ್ಕೂ ಜಿಲ್ಲಾಡಳಿತಕ್ಕೂ ಮುಂದಾಗಿತ್ತು. ಇದು, ಅಲ್ಲಿನ ಪ್ರತ್ಯೇಕತಾವಾದಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ, ಯುವಕರನ್ನು ಮತ್ತೆ ಬ್ರೈನ್ ವಾಷ್ ಮಾಡುವ ಕೆಲಸ ಶುರುವಾಯಿತು. ಲಷ್ಕರ್, ಜೈಶ್ ಉಗ್ರ ಸಂಘಟನೆ, ಮುಂದಿನ ಉಗ್ರದಾಳಿಗಳಿಗೆ ಸ್ಥಳೀಯರನ್ನೇ ಬಳಸಿಕೊಳ್ಳುವ ಆತಂಕಕಾರಿ ವಿಷಯವೂ ಬಹಿರಂಗವಾಗಿದೆ.

ಸೈನಿಕರ ಮೇಲಿನ ದಾಳಿಯಲ್ಲಿ ರಾಜಕೀಯ ಹುಡುಕಿದ ಕಾಂಗ್ರೆಸ್

ಸೈಯದ್ ಗಿಲಾನಿ, ಉಮರ್ ಫಾರೂಕ್, ಯಾಸಿನ್ ಮಲಿಕ್

ಸೈಯದ್ ಗಿಲಾನಿ, ಉಮರ್ ಫಾರೂಕ್, ಯಾಸಿನ್ ಮಲಿಕ್

ಸೈಯದ್ ಗಿಲಾನಿ, ಉಮರ್ ಫಾರೂಕ್, ಯಾಸಿನ್ ಮಲಿಕ್ ಮುಂತಾದ ಪ್ರತ್ಯೇಕತಾವಾದಿಗಳ ಉಗ್ರವಾದವನ್ನು ಬೆಂಬಲಿಸುವ ಮತೀಯ ಮೂಲಭೂತವಾದಿತನ, ಇವರನ್ನು ಬೆಂಬಲಿಸುವ ಆತ್ಮವಂಚಕ ರಾಜಕಾರಣಿಗಳು, ವಿಚಾರವಾದಿಗಳಿಂದಲೇ, ಭಯೋತ್ಪಾದನೆ ಇನ್ನೂ ಹತೋಟಿಗೆ ಬರುತ್ತಿಲ್ಲ ಅಥವಾ ಬರುವುದೂ ಇವರಿಗೆ ಬೇಕಾಗಿಲ್ಲ.

ಫಾರೂಕ್ ಅಬ್ದುಲ್ಲಾ, ಮಾಧ್ಯಮದರ ಮೇಲೆಯೇ ಗರಂ ಆದರು

ಫಾರೂಕ್ ಅಬ್ದುಲ್ಲಾ, ಮಾಧ್ಯಮದರ ಮೇಲೆಯೇ ಗರಂ ಆದರು

ಮೊನ್ನೆಯ ಪುಲ್ವಾಮಾ ಘಟನೆಯನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಉಗ್ರಕೃತ್ಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಹೆಸರು ತಂದಿದ್ದಕ್ಕೆ ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಮಾಧ್ಯಮದರ ಮೇಲೆಯೇ ಗರಂ ಆದರು. ಇನ್ನು ಕಾಂಗ್ರೆಸ್ಸಿಗೆ ನವಜೋತ್ ಸಿದ್ದು, ಪಾಕಿಸ್ತಾನವನ್ನು ದೂಷಿಸುವುದು ತಪ್ಪು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಪುಲ್ವಾಮಾ ಘಟನೆ ನಡೆಯಬೇಕಾಗಿದ್ದೇ ಎಂದು ಸಮಾಜವಾದಿ ಪಕ್ಷದ ಮುಖಂಡ ಆಜಂಖಾನ್ ಹೇಳಿದ್ದಾರೆ.

ವಿಚಾರವಾದಿಗಳು ಟಾರ್ಗೆಟ್ ಮಾಡಿರುವುದು ಪ್ರಧಾನಿಯವರನ್ನೇ

ವಿಚಾರವಾದಿಗಳು ಟಾರ್ಗೆಟ್ ಮಾಡಿರುವುದು ಪ್ರಧಾನಿಯವರನ್ನೇ

ಪುಲ್ವಾಮಾ ಘಟನೆಯನ್ನು ಖಂಡಿಸುವ ಹೆಸರಿನಲ್ಲಿ ಮಾನವಹಕ್ಕು ಹೋರಾಟಗಾರರು, ವಿಚಾರವಾದಿಗಳು ಟಾರ್ಗೆಟ್ ಮಾಡಿರುವುದು ಪ್ರಧಾನಿಯವರನ್ನೇ. ಇವರ ನಿಲುವುಗಳನ್ನು ಕಂಡರೆ, ನಮ್ಮ ಸೈನಿಕರು ಹುತಾತ್ಮರಾದರು ಎನ್ನುವುದಕ್ಕಿಂತ ಪ್ರಧಾನಿಯವರನ್ನು ದೂರುವುದು ಇವರಿಗೆ ಮೊದಲಾಯಿತು. ಜೈಶ್ ಮೊಹಮ್ಮದ್ ಉಗ್ರ ಸಂಘಟನೆಯಲ್ಲಿರುವ ಮೋದಿಗೆ ಬೇಕಾದ ವ್ಯಕ್ತಿಯಿಂದಲೇ ಈ ದಾಳಿ ನಡೆದಿದೆ ಎನ್ನುವ ನೀಚ ಮಟ್ಟಕ್ಕೂ ಕೆಲವರು ಇಳಿದುಬಿಟ್ಟರು.

ಭಾರತೀಯ ಸೈನಿಕರನ್ನು ಅತ್ಯಾಚಾರಿಗಳು ಎಂದಿದ್ದರು

ಭಾರತೀಯ ಸೈನಿಕರನ್ನು ಅತ್ಯಾಚಾರಿಗಳು ಎಂದಿದ್ದರು

ಭಾರತೀಯ ಸೈನಿಕರನ್ನು ಅತ್ಯಾಚಾರಿಗಳು ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮೊಳಗಿರುವ ವಿಚಾರವಾದಿಗಳು ಟೀಕಿಸಿದ್ದರು. ಭಾರತ ವಿರೋಧಿ ಹೇಳಿಕೆ ನೀಡುವ, ದೇಶವನ್ನು ಛಿದ್ರಛಿದ್ರ ಮಾಡುತ್ತೇವೆ ಎನ್ನುವ ಮತೀಯ ವಿದ್ಯಾರ್ಥಿ ನಾಯಕರನ್ನು ನಮ್ಮ ಸರಕಾರವೇ ಪೋಷಿಸುತ್ತದೆ. ಅಷ್ಟೇ ಅಲ್ಲದೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲೂ ಪಕ್ಷದ ಟಿಕೆಟ್ ನೀಡುತ್ತದೆ.

ಆಲೀಗಢ ಮುಸ್ಲಿಂ ವಿವಿಯ ವಿದ್ಯಾರ್ಥಿಯೊಬ್ಬ ಉಗ್ರರ ದಾಳಿಗೆ ಖುಷಿ ಪಡುತ್ತಾನೆ

ಆಲೀಗಢ ಮುಸ್ಲಿಂ ವಿವಿಯ ವಿದ್ಯಾರ್ಥಿಯೊಬ್ಬ ಉಗ್ರರ ದಾಳಿಗೆ ಖುಷಿ ಪಡುತ್ತಾನೆ

ಆಲೀಗಢ ಮುಸ್ಲಿಂ ವಿವಿಯ ವಿದ್ಯಾರ್ಥಿಯೊಬ್ಬ ಉಗ್ರರ ದಾಳಿಯ ನಂತರ, ಜೈಷ್ - ಇ -ಮೊಹಮ್ಮದ್ ಸಂಘಟನೆಯನ್ನು ಅಭಿನಂದಿಸುತ್ತಾನೆ. ಆ ವಿದ್ಯಾರ್ಥಿಯನ್ನು ವಿವಿ ತಕ್ಷಣವೇ ಅಮಾನತು ಮಾಡಿದ್ದರೂ, ಇಂತಹ ಯುವಕರಿಗೆ ಜಿಹಾದ್ ಬಗ್ಗೆ ಬ್ರೈನ್ ವಾಷ್ ಮಾಡುವವರನ್ನು ಮೊದಲು ದೇಶದಿಂದ ಗಡೀಪಾರು ಮಾಡಬೇಕು. ಮೊನ್ನೆಯ ಉಗ್ರಕೃತ್ಯದ ನಂತರ ಕೇಂದ್ರ ಸರಕಾರ, ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದೆ. ಲೇಟಾದರೂ ಮೋದಿ ಸರಕಾರದ ಸಮರ್ಥನೀಯ ಕೆಲಸವಿದು.

ಮೌಲಾನಾ ಅಜರ್, ಹಫೀಜ್ ಸಯೀದ್, ದಾವೂದ್ ಇಬ್ರಾಹಿಂ

ಮೌಲಾನಾ ಅಜರ್, ಹಫೀಜ್ ಸಯೀದ್, ದಾವೂದ್ ಇಬ್ರಾಹಿಂ

ಮೌಲಾನಾ ಅಜರ್, ಹಫೀಜ್ ಸಯೀದ್, ದಾವೂದ್ ಇಬ್ರಾಹಿಂ, ಝಕೀರ್ ರೆಹಮಾನ್ ಲಕ್ವಿ, ಹಾಶಿಂ ಸಯೀದ್ ಮುಂತಾದ ಟಾಪ್ ಉಗ್ರರು ಪಾಕಿಸ್ತಾನದ ಸೇನೆಯ ನೆರಳಿನಲ್ಲೇ ರಾಜಾರೋಷವಾಗಿ ಬದುಕುತ್ತಿದ್ದಾರೆ. ಹೀಗಿದ್ದಾಗಲೂ ಘಟನೆಗೆ ನಾವೇ ಕಾರಣ ಎನ್ನುವುದಕ್ಕೆ ಪಾಕಿಸ್ತಾನ ಸಾಕ್ಷಿ ಕೇಳುತ್ತಿದೆ. ಪಾಕಿಸ್ತಾನದ ಮೇಲೆ ಯುದ್ದ ಘೋಷಿಸುವುದೇ ಸರಿಯಾದ ಕ್ರಮ ಎನ್ನುವುದು ಬಹುತೇಕ ಭಾರತೀಯರು ಅಭಿಪ್ರಾಯ. ಯುದ್ದ ಎನ್ನುವುದು ಅಷ್ಟು ಸುಲಭದ ಮಾತಲ್ಲ, ಹಲವು ರಾಜತಾಂತ್ರಿಕ ಫಾರ್ಮಾಲಟೀಸ್ ಇರುತ್ತದೆ ಎನ್ನುವುದೂ ತಿಳಿದುಕೊಳ್ಲಬೇಕಾದ ವಿಚಾರ. ಪಾಕಿಸ್ತಾನಕ್ಕೆ ಬುದ್ದಿ ಕಲಿಸುವುದರ ಜೊತೆಗೆ, ಭಾರತದಲ್ಲಿರುವ ಪಾಕಿಸ್ತಾನೀಯ ಮನಸ್ಥಿತಿಯರನ್ನು ವಿಚಾರಿಸಿಕೊಳ್ಳಬೇಕಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India has to be alert on terrorists as well as Pakistan support minded Indians. After Pulwama terror attack some groups in country criticizing Prime Minister Narendra Modi instead of showing unity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more