ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಉಪರಾಷ್ಟ್ರಪತಿ ಚುನಾವಣೆ: ಮತ ಎಣಿಕೆ ಆರಂಭ

|
Google Oneindia Kannada News

ನವದೆಹಲಿ, ಆಗಸ್ಟ್‌.6: ಭಾರತದ 16ನೇ ಉಪರಾಷ್ಟ್ರಪತಿ ಚುನಾವಣೆಗೆ ಮತದಾನ ಅಂತ್ಯಗೊಂಡಿದ್ದು, ಮತ ಎಣಿಕೆಯೂ ಆರಂಭಗೊಂಡಿದೆ.

ಭಾರತದ ಎರಡನೇ ಅತ್ಯುನ್ನತ ನಾಗರಿಕ ಸ್ಥಾನವಾದ ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲಿತ ಜಗದೀಪ್‌ ದಂಖರ್‌ ಅವರು ನಾಮಪತ್ರ ಸಲ್ಲಿಸಿದ್ದರು. ಅವರಿಗೆ ಪ್ರತಿಸ್ಪರ್ಧಿಯಾಗಿ ಯುಪಿಎ ಒಕ್ಕೂಟದಿಂದ ಕಾಂಗ್ರೆಸ್‌ ಬೆಂಬಲಿತ ಮಂಗಳೂರು ಮೂಲದವರಾದ ಶ್ರೀಮತಿ ಮಾರ್ಗರೇಟ್‌ ಆಳ್ವ ಅವರು ಕಣಕ್ಕೆ ಇಳಿದಿದ್ದರು.

ಶನಿವಾರ 5 ಗಂಟೆಗೆ ಮತದಾನ ಮುಕ್ತಾಯವಾಗಿದೆ. ಸುಮಾರು ಶೇ. 93ರಷ್ಟು ಸಂಸದರು ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಇಲ್ಲಿ ಒಟ್ಟು ಸಂಸದರ ಸಂಖ್ಯೆ 780 ಆಗಿದ್ದು, ಅದರಲ್ಲಿ ಬಿಜೆಪಿ 303 ಇದರಲ್ಲಿ 91 ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ 394 ಮಂದಿ ಇದ್ದಾರೆ. ಎನ್‌ಡಿಎ ಒಕ್ಕೂಟದ 47+ 5 ಮಂದಿ ನಾಮನಿರ್ದೇಶೀತರು ಸೇರಿ 446 ಮಂದಿ ಹಾಗೂ ಎನ್‌ಡಿಎ ಅಲ್ಲದವರು 81 ಮಂದಿ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ.

Counting of votes for Vice President election has started

ಎನ್‌ಡಿಎ ಬೆಂಬಲಿತ ಜಗದೀಪ್‌ ದಂಖರ್‌ ಅವರಿಗೆ ಶೇ. 70ರಷ್ಟ್ರು ಬಹುಮತ ಸಿಗುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ. ಇನ್ನೂ ಯುಪಿಎ ಬೆಂಬಲಿತ ಮಾರ್ಗರೇಟ್‌ ಆಳ್ವ ಅವರ ಪರ ಎಷ್ಟು ಮತಗಳು ಚಲಾಯಿತವಾಗಿವೆ ಎಂಬ ಅಂದಾಜು ಲಭ್ಯವಾಗಿಲ್ಲ.

Counting of votes for Vice President election has started

ಮಾರ್ಗರೇಟ್‌ ಆಳ್ವ ಅವರಿಗೆ ಟಿಎಸ್‌ಆರ್‌ ಜಾರ್ಖಂಡ್‌ ಮುಕ್ತಿ ಮೋರ್ಚಾ, ಡಿಎಂಕೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಬೆಂಬಲ ಘೋಷಿಸಿದ್ದವು. ಮಾಜಿ ಸಚಿವರಾಗಿದ್ದ ಮಾರ್ಗರೇಟ್‌ ಆಳ್ವಾ ಅವರು ಮೂಲತ ವಕೀಲೆಯಾಗಿದ್ದವರು. ಮಂಗಳೂರಿನವರಾದ ಅವರು ಕಾಂಗ್ರೆಸ್‌ನಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡು ರಾಜಕೀಯ ಉನ್ನತ ಸ್ಥಾನವನ್ನು ಅಲಂಕರಿಸಿದವರು.

English summary
Voting for the 16th Vice President of India has ended and counting has begun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X