ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವಿಶೇಷ ಮಾಸ್ಕ್ ಧರಿಸಿದರೆ ಕೊರೊನಾವೈರಸ್ ಅಂಟುವುದಿಲ್ಲ!

|
Google Oneindia Kannada News

ನವದೆಹಲಿ, ನವೆಂಬರ್.12: ಕೊರೊನಾವೈರಸ್ ಸೋಂಕು ನಿಯಂತ್ರಿಸುವುದಕ್ಕೆ ಮುಖಕ್ಕೆ ಮಾಸ್ಕ್ ಧರಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಯಾವ ರೀತಿಯ ಮಾಸ್ಕ್ ಗಳು ಹೆಚ್ಚು ಸುರಕ್ಷಿತ ಎನ್ನುವುದರ ಕುರಿತು ಸಂಶೋಧನಾ ಅಧ್ಯಯನ ವರದಿಯೊಂದನ್ನು ನೀಡಿದೆ.

ಹೊಸ ಕಾಟನ್ ಬಟ್ಟೆಗಳಲ್ಲಿ ಸಿದ್ಧಪಡಿಸಿದ ಮಾಸ್ಕ್ ಗಳು ಬಿಸಿಲಿಗೆ ಹಾಕಿದ ಒಂದು ಗಂಟೆಯಲ್ಲೇ ಶೇ.99.99ರಷ್ಟು ಬ್ಯಾಕ್ಟಿರಿಯಾಗಳನ್ನು ಕೊಲ್ಲುವುದಕ್ಕೆ ಸಹಾಯಕವಾಗಿದೆ ಎಂದು ಎಸಿಎಸ್ ಅಪ್ಲೈಡ್ ಮೆಟೀರಿಯಲ್ ಮತ್ತು ಇಂಟರ್ ಫೇಸಸ್ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಿದೆ.

ಕೊವಿಡ್ 19 ಚೇತರಿಕೆ: ವಿಶ್ವದೆಲ್ಲೆಡೆ 36,755,814, ಭಾರತದಲ್ಲಿ 8,064,698ಕೊವಿಡ್ 19 ಚೇತರಿಕೆ: ವಿಶ್ವದೆಲ್ಲೆಡೆ 36,755,814, ಭಾರತದಲ್ಲಿ 8,064,698

ಹೊಸದಾದ ಕಾಟನ್ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗಳನ್ನು 10 ಬಾರಿ ತೊಳೆದು ಮರುಬಳಕೆ ಮಾಡುವುದಕ್ಕೂ ಸೂಕ್ತವಾಗಿದೆ. ಸೂಕ್ಷ್ಮಾಣು ನಿಯಂತ್ರಣ ಶಕ್ತಿಯನ್ನು ಕಳೆದುಕೊಳ್ಳದೇ ಒಂದು ವಾರಗಳವರೆಗೂ ಬಳಸುವುದಕ್ಕೆ ಈ ಕಾಟನ್ ಮಾಸ್ಕ್ ಗಳು ಉಪಯುಕ್ತವಾಗಿವೆ ಎಂದು ಅಧ್ಯಯನವು ತಿಳಿಸಿದೆ.

Cotton Mask Kills 99.9% Viruses And Bacteria In An Hour Of Sunlight: Study

ಕೊವಿಡ್-19 ಸೋಂಕು ಹರಡುವಿಕೆ ಕುರಿತು ಮಾಸ್ಕ್ ನಿಂದ ಕಡಿವಾಣ

ವಿವಿಧ ಬಟ್ಟೆಗಳಿಂದ ಮುಖದ ಮಾಸ್ಕ್ ಗಳನ್ನು ಸಿದ್ಧಪಡಿಸಲಾಗುತ್ತದೆ. ಒಂದೊಂದು ವಿಧದ ಬಟ್ಟೆಗಳಲ್ಲಿ ಸಿದ್ಧಪಡಿಸಿದ ಮಾಸ್ಕ್ ಗಳು ಒಂದೊಂದು ರೀತಿ ಉಪಯುಕ್ತವಾಗಿವೆ. ಕೆಲವು ಮಾಸ್ಕ್ ಗಳು ನ್ಯಾನೊಸ್ಕೇಲ್ ಏರೋಸಾಲ್ ಕಣಗಳನ್ನು ಫಿಲ್ಟರ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಕೆಮ್ಮುವುದು ಮತ್ತು ಸೀನುವಿಕೆಯಿಂದ ಹಾಗೂ ಕೋವಿಡ್ -19 ಸೇರಿದಂತೆ ರೋಗಗಳ ಹರಡುವಿಕೆ ಕಡಿಮೆ ಮಾಡಲು ಮಾಸ್ಕ್ ಗಳು ಹೆಚ್ಚು ಸಹಕಾರಿ ಎನಿಸಿವೆ.

ಅಮೆರಿಕಾದಲ್ಲಿ ಕಾಟನ್ ಮಾಸ್ಕ್ ಪ್ರಯೋಗ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಡೇವಿಸ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೊಸ ಕಾಟನ್ ಬಟ್ಟೆಯನ್ನು ಮೊದಲಿಗೆ ಅಭಿವೃದ್ಧಿಪಡಿಸಿದ್ದರು. ಅದು ಹಗಲು ಬೆಳಕಿಗೆ ಬಂದಾಗ ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳನ್ನು (ಆರ್ಒಎಸ್) ಬಿಡುಗಡೆ ಮಾಡುತ್ತದೆ. ಬಟ್ಟೆಯ ಮೇಲ್ಮೈಗೆ ಜೋಡಿಸಲಾದ ಸೂಕ್ಷ್ಮಜೀವಿಗಳನ್ನು ತೊಳೆಯಬಹುದಾದ ಮತ್ತು ಮರುಬಳಕೆಗೆ ಸೂಕ್ತವಾದ ಹಾಗೂ ಧರಿಸುವುದಕ್ಕೆ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.

English summary
Cotton Mask Kills 99.9% Viruses And Bacteria In An Hour Of Sunlight: Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X