ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ವರ್ಷದಲ್ಲಿ 36 ಸಿಬಿಐ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಪ್ರಕರಣ

By ಅನಿಲ್ ಆಚಾರ್
|
Google Oneindia Kannada News

ಕಳೆದ ಮೂರು ವರ್ಷದಲ್ಲಿ 36 ಸಿಬಿಐ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಪ್ರಕರಣ ದಾಖಲಾಗಿದೆ ಎಂದು ಗುರುವಾರ ಸರಕಾರ ತಿಳಿಸಿದೆ. ಸಿಬಿಐನೊಳಗಿನ ವಿಚಾರವನ್ನು ಆಂತರಿಕವಾಗಿ ನಿಗಾ ಮಾಡುವ ವ್ಯವಸ್ಥೆ ಇದೆ. ಸಂಸ್ಥೆಯೊಳಗಿನ ಅಧಿಕಾರಿಗಳ ಮೇಲೆ ಆರೋಪ ಬಂದಾಗ ಪದ್ಧತಿ ಅನುಸರಿಸಲಾಗುತ್ತದೆ.

ಕಳೆದ ಮೂರು ವರ್ಷದಲ್ಲಿ ಸಿಬಿಐನಿಂದ ಅಂತ ಹತ್ತು ಪ್ರಾಥಮಿಕ ವಿಚಾರಣೆಗಳು ಹಾಗೂ ಇಪ್ಪತ್ತು ಸಾಮಾನ್ಯ ಪ್ರಕರಣಗಳು ಮೂವತ್ತಾರು ಸಿಬಿಐ ಅಧಿಕಾರಿಗಳು ಮತ್ತು ಇತರರ ವಿರುದ್ಧ ದಾಖಲಾಗಿದೆ ಎಂದು ಸರಕಾರ ತಿಳಿಸಿದೆ.

Corruption case against 36 CBI officers in last 3 years

ಕೇಂದ್ರ ವಿಚಕ್ಷಣಾ ದಳ ನಿರ್ವಹಿಸಿರುವ ದತ್ತಾಂಶದ ಪ್ರಕಾರ, 2016ರ ಜನವರಿಯಿಂದ ಜುಲೈ 2, 2019ರ ಅವಧಿಯಲ್ಲಿ ಆರು ಅಧಿಕಾರಿಗಳನ್ನು ಒಳಗೊಂಡಂತೆ ಏಳು ದೂರು ದಾಖಲಾಗಿದೆ (ಎರಡು ದೂರಿನಲ್ಲಿ ಸಿಬಿಐ ಅಧಿಕಾರಿಗಳ ಹೆಸರಿಲ್ಲ). ಭ್ರಷ್ಟಾಚಾರದ ಬಗ್ಗೆ ನಂಬಲರ್ಹ ಮಾಹಿತಿ ಮೂಲಕ ಆರೋಪ ಕೇಳಿಬಂದಿದೆ ಎಂದು ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ಉತ್ತರ ನೀಡಿದ್ದಾರೆ.

ಚುನಾವಣೆ ನಂತರ ಬಿಜೆಪಿ ಪಾಲಿಗೆ ಐಟಿ, ಸಿಬಿಐ ಮುಗಿದ ಅಧ್ಯಾಯ: ಕಾಂಗ್ರೆಸ್ಚುನಾವಣೆ ನಂತರ ಬಿಜೆಪಿ ಪಾಲಿಗೆ ಐಟಿ, ಸಿಬಿಐ ಮುಗಿದ ಅಧ್ಯಾಯ: ಕಾಂಗ್ರೆಸ್

ತನಿಖೆ ಮಾಡಿ, ವರದಿ ಸಲ್ಲಿಸಬೇಕು ಎಂದು ಈ ದೂರುಗಳನ್ನೆಲ್ಲ ಸಿಬಿಐನ ಕೇಂದ್ರ ವಿಚಕ್ಷಣ ದಳದಿಂದ ಮುಖ್ಯ ವಿಚಕ್ಷಣ ಅಧಿಕಾರಿಗಳಿಗೆ ವಹಿಸಲಾಗಿದೆ.

English summary
Corruption case against 36 CBI officers in last 3 years, information revealed by union minister Jitendra Singh in Rajyasabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X