ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಿಲ್‌ಗೆ ಯಾವುದೇ ಅನುಮತಿ ಇಲ್ಲ; ಮತ್ತೊಮ್ಮೆ ಮುನ್ನೆಲೆಗೆ ಬಂದ ಚರ್ಚೆ

|
Google Oneindia Kannada News

ನವದೆಹಲಿ, ಮಾರ್ಚ್ 20: ಪತಂಜಲಿಯ ಕೊರೊನಿಲ್ ಔಷಧ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕೊರೊನಾ ಸೋಂಕಿಗೆ ಮದ್ದಾಗಿ ಕೊರೊನಿಲ್ ಔಷಧಿ ಬಳಕೆ ಕುರಿತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಯಾವುದೇ ಅನುಮತಿ ನೀಡಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಮಾಹಿತಿ ನೀಡಿದೆ.

ಕೊರೊನಿಲ್ ಔಷಧಿಯನ್ನು ಕಳೆದ ವರ್ಷ ಜೂನ್‌ನಲ್ಲಿ ಪತಂಜಲಿ ಬಿಡುಗಡೆ ಮಾಡಿತ್ತು. ಕೊರೊನಾ ಸೋಂಕನ್ನು ನಿವಾರಿಸಲು ಈ ಔಷಧ ಸಹಕಾರಿ ಎಂದು ಸಂಸ್ಥೆ ಮೊದಲು ಜಾಹೀರಾತು ನೀಡಿದ್ದು, ಈ ಬಗ್ಗೆ ಆಕ್ಷೇಪಗಳು ಕೇಳಿಬಂದ ನಂತರ ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವ ಔಷಧ ಎಂದು ಹೇಳಿಕೊಂಡಿತ್ತು.

Coronil Has No Regulatory Approval Said IMA

ಆನಂತರ ಪತಂಜಲಿ ಪರಿಚಯಿಸಲಾದ ಕೊರೊನಿಲ್ ಮಾತ್ರೆಗಳು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸರಕು ಉತ್ಪಾದನಾ ನೀತಿಯ ಎಲ್ಲಾ ಮಾನದಂಡಗಳನ್ನು ಪೂರೈಸಿದೆ. 158 ದೇಶಗಳು ಕೊರೊನಿಲ್ ಮಾರಾಟಕ್ಕೆ ಅನುಮತಿ ನೀಡಿವೆ. ಇದು ಐತಿಹಾಸಿಕ ಎಂದು ಸಂಸ್ಥೆ ಹೇಳಿಕೊಂಡಿತ್ತು.

ಐಎಂಐ ಸತ್ಯ ಒಪ್ಪಿಕೊಳ್ಳುತ್ತಿಲ್ಲ; ಕೊರೋನಿಲ್ ಸಮರ್ಥಿಸಿಕೊಂಡ ಪತಂಜಲಿ ಐಎಂಐ ಸತ್ಯ ಒಪ್ಪಿಕೊಳ್ಳುತ್ತಿಲ್ಲ; ಕೊರೋನಿಲ್ ಸಮರ್ಥಿಸಿಕೊಂಡ ಪತಂಜಲಿ

ಕೊರೊನಿಲ್ ವೈಜ್ಞಾನಿಕ ಹಾಗೂ ಸಂಶೋಧನಾ ಆಧರಿತ ಔಷಧ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹಾಗೂ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉಪಸ್ಥಿತಿಯಲ್ಲಿ ಔಷಧಿ ಹಾಗೂ ಪುರಾವೆ ದಾಖಲೆ ಬಿಡುಗಡೆಗೊಳಿಸಲಾಗಿತ್ತು. ಆದರೆ ಇದರ ಬೆನ್ನಲ್ಲೇ, ತಾನು ಯಾವುದೇ ಪಾರಂಪರಿಕ ಔಷಧಿ ಪರಿಶೀಲನೆ ನಡೆಸಿಲ್ಲ ಎಂದು ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿತ್ತು.

ಇದೀಗ ಕೊರೊನಾ ಸೋಂಕಿಗೆ ಕೊರೊನಿಲ್ ಔಷಧಿ ಬಳಕೆ ಸಂಬಂಧ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಿಂದ ಯಾವುದೇ ಅನುಮತಿ ದೊರೆತಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಮತ್ತೊಮ್ಮೆ ಹೇಳಿದೆ. ಮಾಹಿತಿ ಹಕ್ಕಿನಡಿ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಗೆ ಪ್ರಶ್ನಿಸಿದ್ದು, ಅರ್ಜಿ ಕುರಿತು ಪರಿಶೀಲಿಸಿ, ಆಯುಷ್ ಸಚಿವಾಲಯದೊಂದಿಗೆ ಚರ್ಚಿಸಲಾಗಿದೆ. ಕೊರೊನಿಲ್‌ಗೆ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

English summary
The Indian Medical Association (IMA) has claimed that Central Drug Standard Control Organisation has not given permission for the use of Coronil for Covid-19 treatment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X