ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ದಿನಗಳಲ್ಲಿ ಕೊರೊನಾ ಬೀಭತ್ಸ ರೂಪ, ವಿಷಮ ಸ್ಥಿತಿ: ಭವಿಷ್ಯವಾಣಿ

|
Google Oneindia Kannada News

ಲಾಕ್ ಡೌನ್ ಸಡಿಲಗೊಂಡ ನಂತರ ಭಾರತದಲ್ಲಿ ಕೊರೊನಾ ವೈರಸ್ ಅತಿವೇಗದಲ್ಲಿ ಹರಡುತ್ತಿದೆ. ಈಗಾಗಲೇ, ಸೋಂಕಿತರ ಸಂಖ್ಯೆ ಮೂರು ಲಕ್ಷವನ್ನು ದಾಟಿಯಾಗಿದೆ. ಕೇವಲ ಹತ್ತು ದಿನಗಳಲ್ಲಿ ಒಂದು ಲಕ್ಷ ಜನರಿಗೆ ಸೋಂಕು ತಗಲಿದೆ.

Recommended Video

ಪರೋಟ ಮೇಲೆ ಮಾತ್ರ 18% GST , ರೂಟ್ಟಿ ಮೇಲೆ 5% ಮಾತ್ರ | Oneindia Kannada

ಕೊರೊನಾ ವೈರಸ್ ವಿಚಾರದಲ್ಲಿ ಹಲವರ ಭವಿಷ್ಯ ಠುಸ್ ಆಗಿದೆ. ಈ ನಡುವೆ, ಇಂದುಜೀ ಎಂದೇ ಹೆಸರಾಗಿರುವ ಆಚಾರ್ಯ ಇಂದು ಪ್ರಕಾಶ್, ಈ ವೈರಾಣುವಿನಂದಾಗಿ ಜಾಗತಿಕವಾಗಿ ಯಾವರೀತಿ ತೊಂದರೆಯಾಗಲಿದೆ ಎನ್ನುವುದನ್ನು ವಿವರಿಸಿದ್ದಾರೆ.

ಜೂನ್ 21ಕ್ಕೆ ಸೂರ್ಯ ಗ್ರಹಣದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮಗಳೇನು?ಜೂನ್ 21ಕ್ಕೆ ಸೂರ್ಯ ಗ್ರಹಣದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮಗಳೇನು?

ಜೂನ್ 21ಕ್ಕೆ ಸೂರ್ಯ ಗ್ರಹಣವೂ ಎದುರಾಗಲಿದೆ, ಜೊತೆಗೆ, ಜೂನ್ ತಿಂಗಳಲ್ಲಿ ಹಲವು ರಾಶಿಗಳು ತಮ್ಮ ಪಥವನ್ನು ಬದಲಾಯಿಸಲಿದೆ. ಇದು, ವಿಶ್ವಕ್ಕೆ ಅನಿಷ್ಠವನ್ನು ತರಲಿದೆ, ಒಳ್ಳೆಯದನ್ನೂ ಮಾಡಲಿದೆ ಎಂದು ಆಚಾರ್ಯರು ಭವಿಷ್ಯ ನುಡಿದಿದ್ದಾರೆ.

ಕೊರೊನಾ ವೈರಸ್ ತನ್ನ ಭಯಾನಕ ರೂಪವನ್ನು ಮುಂದಿನ ದಿನದಲ್ಲಿ ತೋರಿಸಲಿದೆ ಎಂದಿರುವ ಆಚಾರ್ಯರು, ಭಾರತದಲ್ಲಿ ಗಮನಾರ್ಹ ರಾಜಕೀಯ ಬದಲಾವಣೆ ನಡೆಯಲಿದೆ ಎಂದಿದ್ದಾರೆ. ಆಚಾರ್ಯರ ಭವಿಷ್ಯದ ಪ್ರಮುಖ ಅಂಶ ಇಂತಿದೆ.

ಜೂನ್ 21 ಖಂಡಗ್ರಾಸ ಸೂರ್ಯಗ್ರಹಣ: ಮನುಕುಲಕ್ಕೆ ಮಾರಕವೇ? ಇಲ್ಲಿದೆ ಭವಿಷ್ಯ ಜೂನ್ 21 ಖಂಡಗ್ರಾಸ ಸೂರ್ಯಗ್ರಹಣ: ಮನುಕುಲಕ್ಕೆ ಮಾರಕವೇ? ಇಲ್ಲಿದೆ ಭವಿಷ್ಯ

ಸೂರ್ಯ ಮತ್ತು ಶುಕ್ರ

ಸೂರ್ಯ ಮತ್ತು ಶುಕ್ರ

ಸೂರ್ಯ ಮತ್ತು ಶುಕ್ರನು ವೃಶ್ಚಿಕ ರಾಶಿ, ಮಿಥುನ ರಾಶಿಯಲ್ಲಿ ಗುರು ಮತ್ತು ಶನಿ, ಜೊತೆಗೆ, ಮಂಗಳನು ಕುಂಭ ರಾಶಿಯಲ್ಲಿ ಇರುತ್ತಾನೆ. ಜೂನ್ ಹದಿನಾಲ್ಕಕ್ಕೆ ಮೂರು ಗ್ರಹಗಳು ತನ್ನ ಪಥವನ್ನು ಬದಲಿಸಿವೆ. ಅವೆಂದರೆ ಸೂರ್ಯ, ಮಂಗಳ, ಗುರು. ಅದರಲ್ಲಿ ಸೂರ್ಯ ರಾಶಿ ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ.

ಮಂಗಳ ರಾಶಿಯು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ

ಮಂಗಳ ರಾಶಿಯು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ

ಜೂನ್ 18ಕ್ಕೆ, ಮಂಗಳ ರಾಶಿಯು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಜೂನ್ 30ಕ್ಕೆ ವಕ್ರಗುರು ಧನು ರಾಶಿಗೆ ಪ್ರವೇಶಿಸಲಿದ್ದಾನೆ. ಗುರು ಭಾಗ್ಯ ಸ್ಥಾನದಿಂದ ಅಷ್ಟಮ ಸ್ಥಾನಕ್ಕೆ ಬರಲಿದ್ದಾನೆ. ಆಷಾಡ ಅಮವಾಸ್ಯೆಯಂದು ಸೂರ್ಯಗ್ರಹಣವಿರಲಿದೆ. ರಾಜಕೀಯವಾಗಿ ಭಾರತದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಸಾಮಾಜಿಕ ಸೌಹಾರ್ದತೆಯ ವಿಚಾರದಲ್ಲಿ ದೊಡ್ಡ ಗಂಢಾಂತರ ಎದುರಾಗಲಿದೆ.

ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಿತಿ ಇನ್ನೂ ಉತ್ತಮವಾಗಲಿದೆ

ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಿತಿ ಇನ್ನೂ ಉತ್ತಮವಾಗಲಿದೆ

ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಿತಿ ಇನ್ನೂ ಉತ್ತಮವಾಗಲಿದೆ. ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಎದುರಾಗಲಿದೆ. ಭಾರತದ ಉದ್ಯೋಗ ಕ್ಷೇತ್ರ ಸುಧಾರಿಸಲಿದೆ, ಆರ್ಥಿಕವಾಗಿಯೂ ಅಭಿವೃದ್ದಿ ಕಾಣಲಿದೆ. ಜೂನ್ 30ರ ಅವಧಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದೊಡ್ಡದು ಕಾಣಬಹುದು. ಆದರೆ, ಈ ದಿನಾಂಕದ ನಂತರ ವೈರಸ್ ಹರಡುವುದು ಕಮ್ಮಿಯಾಗಲಿದೆ.

ಕೊರೊನಾ, ಜಾಗತಿಕವಾಗಿ ತನ್ನ ಬೀಭತ್ಸ ರೂಪ ತೋರಿಸಲಿದೆ

ಕೊರೊನಾ, ಜಾಗತಿಕವಾಗಿ ತನ್ನ ಬೀಭತ್ಸ ರೂಪ ತೋರಿಸಲಿದೆ

ಸೆಪ್ಟಂಬರ್ 13ರವರೆಗೆ ಕೊರೊನಾ ಎಫೆಕ್ಟ್ ಇರಲಿದೆ. ಜೂನ್ 30ರವರೆಗೆ ಕೊರೊನಾ, ಜಾಗತಿಕವಾಗಿ ತನ್ನ ಬೀಭತ್ಸ ರೂಪ ತೋರಿಸಲಿದೆ. ಆದರೆ ಭಾರತೀಯರು ಭಯ ಪಡುವ ಅಗತ್ಯವಿಲ್ಲ, ಯಾಕೆಂದರೆ ನಮ್ಮ ದೇಶ ಭಾಗ್ಯ ಸ್ಥಾನದಲ್ಲಿದೆ. ಸೆಪ್ಟಂಬರ್ 13-23ರ ಅವಧಿಯಲ್ಲಿ ವಿಶ್ವಕ್ಕೆ ದೊಡ್ಡ ಆಪತ್ತು ಕಾದಿದೆ.

ಅಮೆರಿಕಾದ ರಾಷ್ಟ್ರಪತಿ ವಿರುದ್ದ ಮಹಾಭಿಯೋಗ

ಅಮೆರಿಕಾದ ರಾಷ್ಟ್ರಪತಿ ವಿರುದ್ದ ಮಹಾಭಿಯೋಗ

ಮುಂದಿನ ದಿನಗಳಲ್ಲಿ ವಿಶ್ವದ ಆರ್ಥಿಕ ಸ್ಥಿತಿ ನೆಲಕಚ್ಚಲಿದೆ. 29.05.2025ರವರೆಗೆ ಭಾರತದ ಆರ್ಥಿಕ ಸ್ಥಿತಿ ಉಚ್ಚ್ರಾಯ ಸ್ಥಿತಿಗೆ ಹೋಗಲಿದೆ. ಜುಲೈ ತಿಂಗಳಲ್ಲಿ ಅಮೆರಿಕಾದ ರಾಷ್ಟ್ರಪತಿ ವಿರುದ್ದ ಮಹಾಭಿಯೋಗ ಪ್ರಸ್ತಾವನೆಯಾಗಲಿದೆ. ಅದು ಪಾಸ್ ಆದರೆ ಅಮೆರಿಕಕ್ಕೆ ದೊಡ್ಡ ಹೊಡೆತ ಬೀಳಲಿದೆ - ಆಚಾರ್ಯ ಇಂದು ಪ್ರಕಾಶ್.

English summary
Coronavirus Will Spread More Till June 30 Prediction By Acharya Indu Prakash,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X