ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಜೊತೆಗೆ ಜೀವನ, ಎಸಿ ತಾಪಮಾನ ಎಷ್ಟಿರಬೇಕು?

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಕೊರೊನಾವೈರಸ್ ಸೋಂಕು ಹರಡುವ ಬಗ್ಗೆ ಇನ್ನೂ ಚರ್ಚೆ ಜಾರಿಯಲ್ಲಿದೆ. ಈ ನಡುವೆ ಬೇಸಿಗೆಯ ಬಿಸಿಯಲ್ಲಿ ಮನೆಯಲ್ಲಿರುವ ಎಸಿ ಹಾಕುವ ಮುನ್ನ ಎಚ್ಚರ. ಎಸಿ, ತಂಪು ವಾತಾವರಣ ಕೊರೊನಾಕ್ಕೆ ನೀಡಬಹುದು ಆಹ್ವಾನ ಎಂಬ ಸುದ್ದಿ ಬಂದಿದೆ.

Recommended Video

ಗುಜರಾತ್‌ನ ರಸ್ತೆಗಳಲ್ಲಿ ಕೊರೊನ ನರ್ತನ | Corona Art | Oneindia Kannada

ವೈರಸ್ ಹರಡದಂತೆ ಏರ್ ಕಂಡೀಷನರ್ ಬಳಸುವುದು ಹೇಗೆ? ಬಳಸಲು ಯಾವುದಾದರೂ ಮಾರ್ಗಸೂಚಿ ಇದೆಯೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ...

ವಿಜ್ಞಾನಿಗಳ ಸಲಹೆ ಮೇರೆಗೆ ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಯಂತೆ ಏರ್ ಕೂಲರ್, ಏರ್ ಕಂಡೀಷನರ್ ಬಳಕೆಯಿಂದ ಕೊರೊನಾ ಹರಡುವುದಿಲ್ಲ. ಆದರೆ, ಥಂಡಿ ವಾತಾವರಣವಿದ್ದರೆ ಕೆಲವರಿಗೆ ಶೀತ ಉಂಟಾಗುವ ಸಾಧ್ಯತೆ ಯಿರುತ್ತದೆ. ಹೀಗಾಗಿ, ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ತನ್ನ ಫೀಲ್ಡ್ ಆಫೀಸರ್ ಗಳಿಗೆ ಕಚೇರಿಗಳಿಗೆ ನಿರ್ದಿಷ್ಟ ತಾಪಮಾನ ಬಳಕೆಯಲ್ಲಿ ಎಸಿ ಬಳಸಲು ಸೂಚನೆ ನೀಡಿದೆ.

Coronavirus: What is the right AC temperature to set

ಎಸಿ ತಾಪಮಾನ: ಏರ್ ಕಂಡೀಷನರ್ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ನಿಂದ 30 ಡಿಗ್ರಿ ಸೆಲ್ಸಿಯಸ್ ನಷ್ಟಿರಬೇಕು. ತೇವಾಂಶ 40 ರಿಂದ 70% ರಷ್ಟಿರಬೇಕು ಎಂದು ಸೂಚನೆ ನೀಡಲಾಗಿದೆ. ಹೀಟಿಂಗ್ ರೆಫ್ರಿಜೆರೇಟಿಂಗ್ ಹಾಗೂ ಏರ್ ಕಂಡೀಷನರ್ ಇಂಜಿನಿಯರ್ಸ್ ಸೊಸೈಟಿ ನೀಡಿದ ಸಲಹೆಯಂತೆ ಈ ಮಾರ್ಗಸೂಚಿ ನೀಡಲಾಗಿದೆ.

ವೈರಸ್ ಹರಡುವಿಕೆ 20.5 nand 24 ಡಿಗ್ರಿ ಸೆಂಟಿಗ್ರೇಡ್ ಇದ್ದಾಗ ಕಡಿಮೆ ಪ್ರಮಾಣದಲ್ಲಿರುತ್ತದೆ. 30 ಡಿಗ್ರಿ ಮೇಲ್ಪಟ್ಟು ವೈರಸ್ ಇರುವಿಕೆ ತೀರಾ ಕಡಿಮೆ ಎಂದು ತಿಳಿದು ಬಂದಿದೆ.

ಆದಷ್ಟು ಹೊರಗಿನ ವಾತಾವರಣ, ಗಾಳಿ ಸೇವನೆ ಒಳ್ಳೆಯದು, ಫ್ಯಾನ್, ಏರ್ ಕೂಲರ್, ಎಸಿ ಬಳಕೆ ಕಡಿಮೆ ಮಾಡಿ, ಅಗತ್ಯವಿದ್ದರೆ, ಸೂಚನೆ ಪಾಲಿಸಿ ಎಂದು ಸೂಚಿಸಲಾಗಿದೆ.

English summary
There has been a concern about air conditioners amidst the coronavirus outbreak. The question is can air conditioners spread the virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X