ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾಸ್'ಬಾತ್ ಸುದ್ದಿ: ಖಾಸಗಿ ಆಸ್ಪತ್ರೆಗಳಲ್ಲಿ 300 ರೂ. ಕೊರೊನಾ ಲಸಿಕೆಗೆ 1200 ರೂ.!

|
Google Oneindia Kannada News

ನವದೆಹಲಿ, ಮೇ 10: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ಲಸಿಕೆ ವಿತರಣೆಯಲ್ಲೂ ಭಾರೀ ದಂಧೆ ನಡೆಯುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್-19 ಲಸಿಕೆಯ ಬೆಲೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದನೆ ಆಗುತ್ತಿರುವ ಕೊವಿಶೀಲ್ಡ್ ಲಸಿಕೆಯ ಒಂದು ಡೋಸಿನ ಬೆಲೆ 250 ರೂಪಾಯಿಯಿಂದ 900 ರೂಪಾಯಿವರೆಗೂ ಏರಿಕೆಯಾಗಿದೆ.

ಆಫ್ರಿಕಾ ರಾಷ್ಟ್ರಗಳಿಗೂ ಆಪತ್ತು? ಹಸಿವು, ಬಡತನದ ನಡುವೆ ಇದೆಂತಹ ಶಿಕ್ಷೆ..?ಆಫ್ರಿಕಾ ರಾಷ್ಟ್ರಗಳಿಗೂ ಆಪತ್ತು? ಹಸಿವು, ಬಡತನದ ನಡುವೆ ಇದೆಂತಹ ಶಿಕ್ಷೆ..?

ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯ ಬೆಲೆಯು ಖಾಸಗಿ ವಲಯದ ಆಸ್ಪತ್ರೆಗಳಲ್ಲಿ 1,250 ರೂಪಾಯಿಯಿಂದ 1500 ರೂಪಾಯಿವರೆಗೂ ಏರಿಕೆ ಆಗಿರುವುದು ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರ ರಚಿಸಿರುವ Cowin ಅಪ್ಲಿಕೇಶನ್ ನಲ್ಲಿ ನಾಲ್ಕು ಪ್ರಸಿದ್ಧ ಆಸ್ಪತ್ರೆಗಳ ಹೆಸರನ್ನು ಮಾತ್ರ ತೋರಿಸಲಾಗುತ್ತಿದೆ. ಅಪೋಲೋ, ಮ್ಯಾಕ್ಸ್, ಫೋರ್ಟೀಸ್ ಮತ್ತು ಮಣಿಪಾಲ್ ಆಸ್ಪತ್ರೆ ಹೆಸರು ಮಾತ್ರ ಗೋಚರವಾಗುತ್ತಿದೆ.

ಕೊರೊನಾವೈರಸ್ ಲಸಿಕೆ ಮಾರಾಟದಲ್ಲಿ ಲಾಭದ ಲೆಕ್ಕ

ಕೊರೊನಾವೈರಸ್ ಲಸಿಕೆ ಮಾರಾಟದಲ್ಲಿ ಲಾಭದ ಲೆಕ್ಕ

ಇಡೀ ದೇಶವೇ ಕೊರೊನಾವೈರಸ್ ಎಂಬ ಮಹಾಮಾರಿ ಕೈಗೆ ಸಿಲುಕಿ ನಲುಗಿ ಹೋಗುತ್ತಿದೆ. ಇದರ ಮಧ್ಯೆ ಖಾಸಗಿ ಆಸ್ಪತ್ರೆಗಳು ತಮ್ಮ ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿವೆ. ದೇಶದಲ್ಲಿ ಅತಿಹೆಚ್ಚಿನ ಬೆಲೆಗೆ ಕೊವಿಡ್-19 ಲಸಿಕೆಯನ್ನು ಮಾರಾಟ ಮಾಡಲಾಗುತ್ತಿದೆ. ಕೊವಿಶೀಲ್ಡ್ ಅನ್ನು 12 ಡಾಲರ್ ಹಾಗೂ ಕೊವ್ಯಾಕ್ಸಿನ್ ಲಸಿಕೆಯನ್ನು 17 ಡಾಲರ್ ಬೆಲೆಗೆ ನೀಡಲಾಗುತ್ತಿದೆ. ಯಾವ ಆಸ್ಪತ್ರೆಗಳಲ್ಲಿ ಯಾವ ಲಸಿಕೆಗೆ ಎಷ್ಟು ಬೆಲೆ ನಿಗದಿಗೊಳಿಸಲಾಗಿದೆ ಎನ್ನುವುದರ ಮಾಹಿತಿಗಾಗಿ ಮುಂದೆ ಓದಿ.

ಕೊವಿಶೀಲ್ಡ್ ಲಸಿಕೆ ದರ ಎಷ್ಟು?

ಕೊವಿಶೀಲ್ಡ್ ಲಸಿಕೆ ದರ ಎಷ್ಟು?

ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಶೀಲ್ಡ್ ಲಸಿಕೆಗೆ ಎಷ್ಟು ಬೆಲೆ ನಿಗದಿಗೊಳಿಸಲಾಗಿದೆ ಎನ್ನುವುದರ ಪಟ್ಟಿ ಇಲ್ಲಿದೆ ನೋಡಿ.

ಖಾಸಗಿ ಆಸ್ಪತ್ರೆ ಹೆಸರು - ಬೆಲೆ - ಸ್ಥಳ

ಮ್ಯಾಕ್ಸ್ ಆಸ್ಪತ್ರೆ - 900 - ದೆಹಲಿ, ಗುರುಗಾವ್, ಮುಂಬೈ,

ಅಪೋಲೋ ಆಸ್ಪತ್ರೆ - 850 - ದೆಹಲಿ, ಅಹ್ಮದಾಬಾದ್, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ,

ಹೆಚ್ಎನ್ ರಿಲಯನ್ಸ್ - 700 - ಮುಂಬೈ

ಕೊವ್ಯಾಕ್ಸಿನ್ ಲಸಿಕೆ ದರ ಎಷ್ಟು?

ಕೊವ್ಯಾಕ್ಸಿನ್ ಲಸಿಕೆ ದರ ಎಷ್ಟು?

ಖಾಸಗಿ ಆಸ್ಪತ್ರೆ ಹೆಸರು - ಬೆಲೆ - ಸ್ಥಳ

ಮಣಿಪಾಲ್ - 1350 - ಗೋವಾ, ಬೆಂಗಳೂರು

ಪೋರ್ಟೀಸ್ - 1250 - ದೆಹಲಿ, ಗುರುಗಾವ್, ನೋಯ್ಡಾ, ಜೈಪುರ್,

ಯಶೋದಾ ಆಸ್ಪತ್ರೆ - 1200 - ಹೈದರಾಬಾದ್

ಬಿಜಿಎಸ್ ಆಸ್ಪತ್ರೆ - 1500 - ಬೆಂಗಳೂರು

ವುಡ್ ಲ್ಯಾಂಡ್ ಆಸ್ಪತ್ರೆ - 1500 - ಕೋಲ್ಕತ್ತಾ

ಅಪೋಲೋ ಆಸ್ಪತ್ರೆ - 1250 - ಹೈದರಾಬಾದ್, ಚೆನ್ನೆ

ಹೆಚ್ಎನ್ ರಿಲಯನ್ಸ್ - 1250 - ಮುಂಬೈ

ಖಾಸಗಿ ಆಸ್ಪತ್ರೆಗಳು ಲಸಿಕೆಗೆ ಎಷ್ಟು ತೆಗೆದುಕೊಳ್ಳಬೇಕು?

ಖಾಸಗಿ ಆಸ್ಪತ್ರೆಗಳು ಲಸಿಕೆಗೆ ಎಷ್ಟು ತೆಗೆದುಕೊಳ್ಳಬೇಕು?

ಕೇಂದ್ರ ಸರ್ಕಾರವು ಕೊರೊನಾವೈರಸ್ ಲಸಿಕೆಯನ್ನು 150 ರೂಪಾಯಿಗೆ ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೀಡುತ್ತದೆ. ಇದರ ಮೇಲೆ ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡುವುದಕ್ಕೆ ಹೆಚ್ಚುವರಿಯಾಗಿ 100 ರೂಪಾಯಿ ವಿಧಿಸಲು ಅವಕಾಶವಿದೆ. ಅಂದರೆ ಒಂದು ಡೋಸ್ ಲಸಿಕೆಗೆ 250 ರಿಂದ 300 ರೂಪಾಯಿವರೆಗೂ ಮಾತ್ರ ತೆಗೆದುಕೊಳ್ಳಬೇಕಾಗುತ್ತದೆ.

ಒಂದು ಡೋಸ್ ಲಸಿಕೆಗೆ 900 ರೂಪಾಯಿ ಪಡೆಯುವುದೇಕೆ?

ಒಂದು ಡೋಸ್ ಲಸಿಕೆಗೆ 900 ರೂಪಾಯಿ ಪಡೆಯುವುದೇಕೆ?

ಕೊರೊನಾವೈರಸ್ ಲಸಿಕೆಗೆ ಖಾಸಗಿ ಆಸ್ಪತ್ರೆಗಳಲ್ಲಿ 900 ರೂಪಾಯಿ ತೆಗೆದುಕೊಳ್ಳುತ್ತಿರುವುದು ಏಕೆ ಎನ್ನುವ ಬಗ್ಗೆ ಮ್ಯಾಕ್ಸ್ ಆಸ್ಪತ್ರೆ ವಕ್ತಾರರೊಬ್ಬರು ತಿಳಿಸಿ ಕೊಟ್ಟಿದ್ದಾರೆ. ಜಿಎಸ್ ಟಿ, ಸಂಚಾರಿ ವೆಚ್ಚ ಹಾಗೂ ಸಂಗ್ರಹಣೆ ವೆಚ್ಚ ಸೇರಿದರೆ ಒಂದು ಡೋಸ್ ಕೊವಿಶೀಲ್ಡ್ ಲಸಿಕೆಗೆ 660 ರಿಂದ 670 ರೂಪಾಯಿ ಆಗುತ್ತದೆ. ಲಸಿಕೆ ಸಾಗಾಟ ಮತ್ತು ನೀಡುವ ಸಂದರ್ಭದಲ್ಲಿ ಶೇ.5 ರಿಂದ 6ರಷ್ಟು ಲಸಿಕೆ ವೇಸ್ಟೇಜ್ ಹೋಗುತ್ತದೆ. ಇದನ್ನು ಸೇರಿಸಿದರೆ ಒಂದು ಡೋಸ್ ಲಸಿಕೆಗೆ 710 ರಿಂದ 715 ರೂಪಾಯಿ ಆಗುತ್ತದೆ. ಇದರ ಹೊರತಾಗಿ ಲಸಿಕೆ ವಿತರಣೆ ಸಿಬ್ಬಂದಿ ಬಳಸುವ ಸ್ಯಾನಿಟೈಸರ್, ಪಿಪಿಇ ಕಿಟ್ ಮತ್ತು ಬಯೋ ಮೆಡಿಕಲ್ ವೆಸ್ಟೇಜ್ ಬೆಲೆ 170 ರಿಂದ 180 ರೂಪಾಯಿ ಆಗುತ್ತದೆ. ಆದ್ದರಿಂದ ಒಂದು ಡೋಸ್ ಕೊವಿಶೀಲ್ಡ್ ಲಸಿಕೆಯ ಬೆಲೆ 900 ರೂಪಾಯಿ ಆಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆ ಒಂದು ಡೋಸ್ ಲಸಿಕೆಗೆ ನೀಡುವುದೆಷ್ಟು?

ಖಾಸಗಿ ಆಸ್ಪತ್ರೆ ಒಂದು ಡೋಸ್ ಲಸಿಕೆಗೆ ನೀಡುವುದೆಷ್ಟು?

ಭಾರತದಲ್ಲಿ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಯನ್ನು ಕೇಂದ್ರ, ರಾಜ್ಯ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಒಂದು ಡೋಸ್ ಕೊವಿಶೀಲ್ಡ್ ಲಸಿಕೆಗೆ 150 ರೂಪಾಯಿ, ರಾಜ್ಯ ಸರ್ಕಾರಕ್ಕೆ 300 ರೂಪಾಯಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿ ಬೆಲೆ ನಿಗದಿಗೊಳಿಸಲಾಗಿದೆ. ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಕೂಡಾ ಇದರಿಂದ ಹೊರತಾಗಿಲ್ಲ. ಕೇಂದ್ರ ಸರ್ಕಾರಕ್ಕೆ ಕೊವಿಶೀಲ್ಡ್ ಲಸಿಕೆಗೆ 150 ರೂಪಾಯಿ ನೀಡಿದರೆ, ಅದೇ ಒಂದು ಡೋಸ್ ಲಸಿಕೆಗೆ ರಾಜ್ಯ ಸರ್ಕಾರ 400 ರೂಪಾಯಿ ಹಾಗೂ ಖಾಸಗಿ ಆಸ್ಪತ್ರೆಗಳು 1200 ರೂಪಾಯಿ ಪಾವತಿಸಬೇಕಿದೆ.

Recommended Video

Oxygen ಹೆಸರಿನಲ್ಲಿ ಹಣ ತಿನ್ನುತ್ತಿರುವ ರಾಕ್ಷಸರು | Oneindia Kannada

English summary
Coronavirus Vaccine Rate In Private Sector Hospital: Here Read Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X