ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿಸುದ್ದಿ: ಕೊವಿಡ್-19 ಸೋಂಕಿಗೆ "Cheap And Best" ಲಸಿಕೆ!

|
Google Oneindia Kannada News

ನವದೆಹಲಿ, ನವೆಂಬರ್.23: ಕೊರೊನಾವೈರಸ್ ಲಸಿಕೆಗಾಗಿ ಇಡೀ ಜಗತ್ತು ಎದುರು ನೋಡುತ್ತಿದೆ. ಇದರ ಮಧ್ಯೆ ಆಕ್ಸ್ ಫರ್ಡ್ ಆಸ್ಟ್ರಾಜೆನಿಕಾ ಲಸಿಕೆಯು ಶೇ.70.40ರಷ್ಟು ಸೋಂಕಿನ ವಿರುದ್ಧ ಹೋರಾಡಬಲ್ಲ ಸಾಮರ್ಥ್ಯವನ್ನು ಹೊಂದಿರುವುದು ಗೊತ್ತಾಗಿದೆ.

ಎರಡು ಬಾರಿ ಸೋಂಕಿತರಿಗೆ ಈ ಲಸಿಕೆ ನೀಡಲಾಗಿದ್ದು, ಮೊದಲ ಬಾರಿಗೆ AZD1222 ಲಸಿಕೆಯು ಶೇ.62ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದ್ದರೆ, ಎರಡನೇ ಬಾರಿಗೆ ಶೇ.90ರಷ್ಟು ಪ್ರಭಾವಶಾಲಿ ಎಂದು ತಿಳಿದು ಬಂದಿದೆ. ಇದರಿಂದಾಗಿ ಲಸಿಕೆಯನ್ನು ಎರಡು ಬಾರಿ ಪ್ರಯೋಗಿಸಿದ ಸಂದರ್ಭದಲ್ಲಿ ಶೇ.70.40ರಷ್ಟು ಪ್ರಭಾವಶಾಲಿ ಎಂಬುದು ಗೊತ್ತಾಗುತ್ತದೆ.

Covid-19 Vaccine: ತುರ್ತು ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಬಳಸಲು ಅನುಮತಿCovid-19 Vaccine: ತುರ್ತು ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಬಳಸಲು ಅನುಮತಿ

ಇಂಗ್ಲೆಂಡ್ ಮತ್ತು ಬ್ರೆಜಿಲ್ ನ ವೈದ್ಯಕೀಯ ಪ್ರಯೋಗದಲ್ಲಿ ತಿಳಿದು ಬಂದ ಆಂತರಿಕ ವಿಶ್ಲೇಷಣೆ ಪ್ರಕಾರ AZD1222 ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿದೆ. ಕೊವಿಡ್-19 ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಾದ ಮತ್ತು ಆರೋಗ್ಯದಲ್ಲಿ ಏರುಪೇರಾದ ಯಾವುದೇ ಘಟನೆಗಳು ವರದಿಯಾಗಿಲ್ಲ ಎಂದು ಆಸ್ಟ್ರಾಜೆನಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

AZD1222 ಲಸಿಕೆಯ ಎರಡು ಹಂತಗಳಲ್ಲಿ ಪ್ರಯೋಗ

AZD1222 ಲಸಿಕೆಯ ಎರಡು ಹಂತಗಳಲ್ಲಿ ಪ್ರಯೋಗ

ಕೊರೊನಾವೈರಸ್ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಸಾಮರ್ಥ್ಯವುಳ್ಳ AZD1222 ಲಸಿಕೆಯನ್ನು ಎರಡು ಹಂತಗಳಲ್ಲಿ ನೀಡಲಾಯಿತು. ಮೊದಲ ಹಂತದಲ್ಲಿ ಅರ್ಧ ಡೋಸ್ ಲಸಿಕೆ ನೀಡಲಾಗಿತ್ತು. ಯಾವುದೇ ಅಡ್ಡಪರಿಣಾಮ ಕಂಡು ಬಂದಿಲ್ಲ ಎಂದು ಸ್ಪಷ್ಟವಾದ ಬಳಿಕ ಒಂದು ತಿಂಗಳ ನಂತರದಲ್ಲಿ ಫುಲ್ ಡೋಸ್ ಲಸಿಕೆಯನ್ನು ನೀಡಲಾಗಿತ್ತು. ಎರಡನೇ ಹಂತದಲ್ಲಿ ಬೇರೆ ಸಂಯೋಜನೆಯ ಲಸಿಕೆಯ ಫುಲ್ ಡೋಸ್ ನ್ನು ಎರಡು ಬಾರಿ ನೀಡಿದಾಗ ಪರಿಣಾಮವು ಅಷ್ಟಾಗಿ ಕಂಡು ಬರಲಿಲ್ಲ. ಈ ಎರಡೂ ಲಸಿಕೆಗಳ ಸಂಯೋಜನೆಯಿಂದ ಕೊವಿಡ್-19 ಸೋಂಕಿನ ವಿರುದ್ಧ ಲಸಿಕೆಯು ಶೇ.70ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ಹೇಳಲಾಗುತ್ತಿದೆ.

ಯಾವ ಲಸಿಕೆ ಸಂಗ್ರಹಿಸಿಡಲು ಎಷ್ಟು ತಾಪಮಾನ?

ಯಾವ ಲಸಿಕೆ ಸಂಗ್ರಹಿಸಿಡಲು ಎಷ್ಟು ತಾಪಮಾನ?

ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸೋಂಕಿನ ವಿರುದ್ಧ ಶೇ.95ರಷ್ಟು ಪರಿಣಾಮಕಾರಿಯಾಗಿ ಹೋರಾಟಬಲ್ಲ ಲಸಿಕೆಗಳನ್ನು ಕೂಡಾ ಸಂಶೋಧಿಸಲಾಗುತ್ತಿದೆ. ಪಿ-ಫಿಜರ್ ಮತ್ತು ಮಾಡರ್ನಾ ಲಸಿಕೆಗಳು ಶೇ.95ಕ್ಕಿಂತ ಹೆಚ್ಚು ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಎಂಬುದು ವೈದ್ಯಕೀಯ ಪ್ರಯೋಗದಲ್ಲಿ ಈಗಾಗಲೇ ದೃಢಪಟ್ಟಿದೆ. ಆದರೆ, ಪಿ-ಫಿಜರ್ ಕಂಪನಿಯ ಲಸಿಕೆಯನ್ನು ಮೈನಸ್ 75 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಐದು ದಿನಗಳವರೆಗೆ ಸಂಗ್ರಹಿಸಿಡಲು ಸಾಧ್ಯವಾಗುತ್ತದೆ. ಇನ್ನು, ಮಾಡರ್ನಾ ಕಂಪನಿಯ mRNA-1273 ಲಸಿಕೆ ಮಾದರಿಯನ್ನು 2 ರಿಂದ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. AZD1222 ಲಸಿಕೆಯನ್ನು ಸಂಗ್ರಹಿಸಿಡಲು ಫ್ರಿಜ್ ಗಳಲ್ಲಿ ಬಳಸುವ ಸಾಮಾನ್ಯ ಪ್ರಮಾಣದ ತಾಪಮಾನವೇ ಸಾಕಾಗುತ್ತದೆ.

ಆಕ್ಸ್ ಫರ್ಡ್ ಸಂಸ್ಥೆ ಲಸಿಕೆ ಮಾದರಿಗೆ 500-600 ರೂ.

ಆಕ್ಸ್ ಫರ್ಡ್ ಸಂಸ್ಥೆ ಲಸಿಕೆ ಮಾದರಿಗೆ 500-600 ರೂ.

ಕೊರೊನಾವೈರಸ್ ಸೋಂಕಿತರಿಗಾಗಿ ಹಲವು ಸಂಸ್ಥೆಗಳು ಲಸಿಕೆ ಸಂಶೋಧನೆ, ವೈದ್ಯಕೀಯ ಪ್ರಯೋಗ ಮತ್ತು ಉತ್ಪಾದನೆಯಲ್ಲಿ ತೊಡಗಿವೆ. ಈ ಪೈಕಿ ಆಕ್ಸ್ ಫರ್ಡ್ ಕೊವಿಡ್-19 ಲಸಿಕೆ ಮಾದರಿಯನ್ನು ಬಳಸಿಕೊಂಡು ಭಾರತ ಮತ್ತು ಬ್ರೆಜಿಲ್ ನಲ್ಲಿ ಲಸಿಕೆ ಉತ್ಪಾದಿಸಲಾಗುತ್ತಿದೆ. ಕೇವಲ 500 ರಿಂದ 600 ರೂಪಾಯಿಗೆ ಲಸಿಕೆಯು ಸಾಮಾನ್ಯ ಜನರಿಗೂ ಸಿಗಲಿದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಅದರ್ ಪೂನಾವಾಲಾ ಹೇಳಿದ್ದಾರೆ.

ಯಾವ ಸಂಸ್ಥೆಯ ಕೊರೊನಾವೈರಸ್ ಲಸಿಕೆಗೆ ಎಷ್ಟು ಬೆಲೆ?

ಯಾವ ಸಂಸ್ಥೆಯ ಕೊರೊನಾವೈರಸ್ ಲಸಿಕೆಗೆ ಎಷ್ಟು ಬೆಲೆ?

ಸರ್ಕಾರಕ್ಕೆ ಮಾಡರ್ನ ಕಂಪನಿಯು ಕೊರೊನಾವೈರಸ್ ಲಸಿಕೆ ಮಾರಾಟ ಮಾಡುವುದಕ್ಕೆ ಸಿದ್ಧವಾಗಿದೆ. ಒಂದು ಡೋಸ್ ಕೊವಿಡ್-19 ಲಸಿಕೆಗೆ 1854 ರೂಪಾಯಿಯಿಂದ 2744 ರೂಪಾಯಿ (25-37 ಡಾಲರ್) ನಿಗದಿಗೊಳಿಸಲಾಗುತ್ತದೆ ಎಂದು ಕಂಪನಿಯ ಸಿಇಓ ಸ್ಟೆಫನ್ ಬ್ಯಾನ್ಸಲ್ ತಿಳಿಸಿದ್ದಾರೆ. ಕೊರೊನಾವೈರಸ್ ಸೋಂಕಿತರಿಗೆ ಪಿ-ಫಿಜರ್ ಕಂಪನಿಯ ಲಸಿಕೆಯ ಒಂದು ಡೋಸ್ ಗೆ 1447 ರೂಪಾಯಿ(19.50 ಡಾಲರ್ ) ದರ ನಿಗದಿಗೊಳಿಸಲಾಗಿದೆ. ಒಬ್ಬ ಕೊವಿಡ್-19 ಸೋಂಕಿತನಿಗೆ ಕನಿಷ್ಠ 2 ಡೋಸ್ ಲಸಿಕೆ ಅಗತ್ಯವಿರುತ್ತದೆ. ಈ ಹಿನ್ನೆಲೆ ಪಿ-ಫಿಜರ್ ಕಂಪನಿಯ ಲಸಿಕೆ ಪಡೆದುಕೊಳ್ಳಲು ಕನಿಷ್ಠ 3708 ರೂಪಾಯಿ (50 ಡಾಲರ್) ವೆಚ್ಚವಾಗಲಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪಿ-ಫಿಜರ್ ಮತ್ತು ಮಾಡರ್ನಾ ಕಂಪನಿಯ ಕೊವಿಡ್-19 ಲಸಿಕೆಗಿಂತ ಅಗ್ಗದ ದರದಲ್ಲಿ ರಷ್ಯಾದ ಸ್ಪುಟಿಕ್-ವಿ ಲಸಿಕೆಯನ್ನು ನೀಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

English summary
Coronavirus Vaccine: Oxford, Pfizer Or Moderna, Which Is The Better In These. Here Get Full Details Of Covid-19 Vaccines In The World.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X