ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ 2ನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರ ತಗ್ಗಿಸುವ ಸಾಧ್ಯತೆ

|
Google Oneindia Kannada News

ನವದೆಹಲಿ, ಏಪ್ರಿಲ್ 28: ಭಾರತದಲ್ಲಿ ಕೊರೊನಾವೈರಸ್ ನಾಲ್ಕನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಬೂಸ್ಟರ್ ಡೋಸ್ ಲಸಿಕೆ ವಿತರಣೆಗೆ ಒತ್ತು ನೀಡುವುದಕ್ಕೆ ಸರ್ಕಾರ ನಿರ್ಧರಿಸಿದೆ.

ದೇಶದಲ್ಲಿ ಎರಡನೇ ಡೋಸ್ ಲಸಿಕೆ ಹಾಗೂ ಬೂಸ್ಟರ್ ಡೋಸ್ ಲಸಿಕೆ ನಡುವಿನ ಅಂತರವನ್ನು 9 ತಿಂಗಳಿನಿಂದ 6 ತಿಂಗಳಿಗೆ ತಗ್ಗಿಸುವುದಕ್ಕೆ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು ಶಿಫಾರಸ್ಸು ಮಾಡಿದೆ. ಈ ತಜ್ಞರ ಸಮಿತಿ ಶಿಫಾರಸ್ಸಿನ ಕುರಿತು ಏಪ್ರಿಲ್ 29ರಂದು ಮಹತ್ವದ ಸಭೆ ನಡೆಸಲಾಗುವುದು.

ಕೊರೊನಾವೈರಸ್ ನಿಯಂತ್ರಣಕ್ಕಾಗಿ ಲಸಿಕೆ ವಿತರಣೆಗೆ ವೇಗ ನೀಡಲು ಪ್ರಧಾನಿ ಕರೆ ಕೊರೊನಾವೈರಸ್ ನಿಯಂತ್ರಣಕ್ಕಾಗಿ ಲಸಿಕೆ ವಿತರಣೆಗೆ ವೇಗ ನೀಡಲು ಪ್ರಧಾನಿ ಕರೆ

ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರವನ್ನು ಕಡಿತಗೊಳಿಸುವ ಕುರಿತು ಚರ್ಚೆ ನಡೆಯಲಿದೆ. ಜಾಗತಿಕ ಮಟ್ಟದಲ್ಲಿನ ಅಂಕಿ-ಅಂಶಗಳು, ವೈಜ್ಞಾನಿಕ ಕಾರಣಗಳು ಹಾಗೂ ಇತರೆ ರಾಷ್ಟ್ರಗಳಲ್ಲಿ ಈ ಅಂತರವನ್ನು ನೋಡಿಕೊಂಡು ಇಲ್ಲಿ ಅವಧಿಯನ್ನು ತಗ್ಗಿಸುವುದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಎರಡು ಡೋಸ್ ಪ್ರಭಾವ ಎಷ್ಟು ತಿಂಗಳವರೆಗೂ ಇರುತ್ತದೆ?

ಎರಡು ಡೋಸ್ ಪ್ರಭಾವ ಎಷ್ಟು ತಿಂಗಳವರೆಗೂ ಇರುತ್ತದೆ?

ICMR ಮತ್ತು ಇತರ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳಲ್ಲಿನ ಅಧ್ಯಯನಗಳು ಮೊದಲ ಡೋಸ್ ಲಸಿಕೆ ವಿತರಣೆಯಿಂದ ಆರು ತಿಂಗಳ ನಂತರ ಪ್ರತಿಕಾಯ ಮಟ್ಟವು ಕ್ಷೀಣಿಸುತ್ತದೆ. ಎರಡೂ ಡೋಸ್‌ಗಳೊಂದಿಗೆ ಬೂಸ್ಟರ್ ನೀಡುವುದರಿಂದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದು ಸೂಚಿಸಿದೆ.

2ನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರ

2ನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರ

ದೇಶದಲ್ಲಿ ಪ್ರಸ್ತುತ ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ಅಥವಾ ಮುನ್ನೆಚ್ಚರಿಕೆ ಡೋಸ್ ನಡುವಿನ ಅಂತರವನ್ನು 9 ತಿಂಗಳಿಗೆ ನಿಗದಿಪಡಿಸಲಾಗಿದೆ. ಭಾರತದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನವರಿ 10ರಿಂದ ವೈದ್ಯಕೀಯ ಸಿಬ್ಬಂದಿ, ಮೊದಲ ಶ್ರೇಣಿ ಕಾರ್ಮಿಕರು, 60 ವರ್ಷ ಮೇಲ್ಪಟ್ಟ ಹಾಗೂ ಅಸ್ವಸ್ಥತೆಯನ್ನು ಹೊಂದಿರುವ 45 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲಾಗುತ್ತಿದೆ.

ದೇಶದಲ್ಲಿ 18 ವರ್ಷ ಮೇಲ್ಪಟ್ಟವರು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಬೂಸ್ಟರ್ ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ಏಪ್ರಿಲ್ 10ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಘೋಷಿಸಿತ್ತು.

ದೇಶದಲ್ಲಿ ವಿವಿಧ ಹಂತಗಳಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ

ದೇಶದಲ್ಲಿ ವಿವಿಧ ಹಂತಗಳಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ

ಕಳೆದ 2021ರ ಜನವರಿ 16ರಂದು ಮೊದಲ ಬಾರಿಗೆ ಕೋವಿಡ್-19 ಲಸಿಕೆಯ ವಿತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಫೆಬ್ರವರಿ 2ರಂದು ಎರಡನೇ ಹಂತದಲ್ಲಿ ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಿಸಲಾಯಿತು. ಮಾರ್ಚ್ 1ರಿಂದ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥತೆಯನ್ನು ಹೊಂದಿರುವವರಿಗೆ ಕೋವಿಡ್-19 ಲಸಿಕೆ ವಿತರಿಸಲು ಶುರು ಮಾಡಲಾಯಿತು. ತದನಂತರ ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಿಸಲು ಅನುಮತಿ ನೀಡಲಾಗಿತ್ತು. ಮೇ 1ರ ನಂತರದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆ ವಿತರಿಸುವುದಕ್ಕೆ ಅನುಮತಿಸಲಾಗಿತ್ತು.

2022ರ ಜನವರಿ 3ರಂದು 15 ರಿಂದ 18 ವಯೋಮಾನದವರಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡುವುದಕ್ಕೆ ಕೇಂದ್ರ ಸರ್ಕಾರವು ಅನುಮೋದನೆಯನ್ನು ನೀಡಿತು. ಇದರ ಬೆನ್ನಲ್ಲೇ ಮಾರ್ಚ್ 16ರಂದು 12 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ವಿತರಿಸುವುದಕ್ಕೆ ಅನುಮತಿ ನೀಡಲಾಯಿತು. ಹೀಗೆ ಹಂತ-ಹಂತವಾಗಿ ಲಸಿಕೆ ವಿತರಣೆಗೆ ದೇಶದಲ್ಲಿ ಅನುಮತಿ ನೀಡಲಾಗಿದೆ.

ಭಾರತದಲ್ಲಿ ಈವರೆಗೆ 188 ಕೋಟಿ ಡೋಸ್ ಲಸಿಕೆ ವಿತರಣೆ

ಭಾರತದಲ್ಲಿ ಈವರೆಗೆ 188 ಕೋಟಿ ಡೋಸ್ ಲಸಿಕೆ ವಿತರಣೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಲಸಿಕೆ ವಿತರಣೆಯನ್ನು ಈವರೆಗೂ ವೇಗವಾಗಿ ನಡೆಸಲಾಗಿದೆ. ದೇಶದಲ್ಲಿ ಇದುವರೆಗೂ 1,88,19,40,971 ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ. 12 ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ 2,75,34,619 ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ. ಇದರ ಮಧ್ಯೆ ವೈದ್ಯರು ಮತ್ತು ಮೊದಲ ಶ್ರೇಣಿ ಕಾರ್ಮಿಕರಿಗೆ ಬೂಸ್ಟರ್ ಡೋಸ್ ಅನ್ನೂ ಕೂಡ ಉಚಿತವಾಗಿ ವಿತರಿಸಲಾಗುತ್ತಿದೆ. ಇದುವರೆಗೂ 2,72,46,893 ಮಂದಿಗೆ ಬೂಸ್ಟರ್ ಡೋಸ್ ಅನ್ನು ನೀಡಲಾಗಿದೆ.

English summary
Coronavirus Vaccine: Gap Between Second dose And Booster Dose Likely To Be Reduced To 6 Month: Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X