ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್ ಕೊವಿಡ್ ಲಸಿಕೆ ಪ್ರಾಣಿಗಳಿಗೆ ಹೆಚ್ಚು ಪರಿಣಾಮಕಾರಿ

|
Google Oneindia Kannada News

ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಪ್ರಾಣಿಗಳಿಗೆ ಹೆಚ್ಚು ಪರಿಣಾಮಕಾರಿ ಎಂಬುದು ತಿಳಿದುಬಂದಿದೆ.

ಕೋವ್ಯಾಕ್ಸಿನ್ ಭಾರತದಲ್ಲಿ ಮೊದಲನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಪ್ರಾಣಿಗಳ ಮೇಲೆ ರಕ್ಷಣಾತ್ಮಕ ಪರಿಣಾಮ ಹಾಗೂ ಇಮ್ಯುನೊಜೆನೆಸಿಟಿಯನ್ನು ಪ್ರದರ್ಶಿಸಿದೆ.

ಪಾಕಿಸ್ತಾನದಲ್ಲಿ ಚೀನಾದ ಕೊರೊನಾ ಲಸಿಕೆಯ 3ನೇ ಹಂತದ ಪ್ರಯೋಗ ಪಾಕಿಸ್ತಾನದಲ್ಲಿ ಚೀನಾದ ಕೊರೊನಾ ಲಸಿಕೆಯ 3ನೇ ಹಂತದ ಪ್ರಯೋಗ

ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಇಂಟಿರ್‌ನ್ಯಾಷನಲ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕೊವಿಡ್ 19 ಲಸಿಕೆ ಕೋವ್ಯಾಕ್ಸಿನ್ ಅನ್ನು ಭಾರತದಾದ್ಯಂತ 12 ಸಂಸ್ಥೆಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಮೊದಲ ಹಂತದ ಪರೀಕ್ಷೆಯ ಫಲಿತಾಂಶಗಳು ಉತ್ತೇಜನಕಾರಿಯಾಗಿದೆ.

Coronavirus Vaccine Covaxin Found Effective In Animal Trials

ಪ್ಲೇಸ್‌ಬೋ ಒಂದು ಗುಂಪಿನ ಮೇಲೆ ನಿಗಾ ಇರಿಸುತ್ತಿದೆ. ಒಟ್ಟು ಮೂರು ಗುಂಪುಗಳಿಗೆ ಮೂರು ವಿಧಧ ಲಸಿಕೆಯನ್ನು ಪ್ರಯೋಗಿಸಲಾಗಿದೆ. 14 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುತ್ತೆ.

ಲಸಿಕೆ ನೀಡಿದ ಗುಂಪುಗಳಲ್ಲಿ ನ್ಯುಮೋನಿಯಾ ಪತ್ತೆಯಾಗಿಲ್ಲ.ಎರಡು ಬಾರಿ ಲಸಿಕೆ ನೀಡಿದರೂ ಪ್ರಾಣಿಗಳಲ್ಲಿ ಯಾವುದೇ ಅಡ್ಡ ಪರಿಣಾಮ ಗೋಚರವಾಗಿಲ್ಲ.

ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ 'ಕೊವ್ಯಾಕ್ಸಿನ್ ಲಸಿಕೆಯನ್ನು ಎರಡನೇ ಹಂತದ ಮಾನವ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ.

ದೇಶೀಯ ಕೊರೊನಾ ಲಸಿಕೆ ಕೋವಾಕ್ಸಿನ್ ಅಭಿವೃದ್ಧಿ ಪಡಿಸುತ್ತಿರುವುದಾಗಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ಪ್ರಕಟಿಸಿತ್ತು.

ಕೋವಾಕ್ಸಿನ್ ಲಸಿಕೆಯನ್ನು ಇಂಜೆಕ್ಷನ್ ಮೂಲಕ ಮನುಷ್ಯರ ಮೇಲೆ ಪ್ರಯೋಗಿಸಿ ಅದರ ಫಲಿತಾಂಶದ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ.ಆರಂಭಿಕ ಹಂತದಲ್ಲಿ ಈ ಲಸಿಕೆ ಮನುಷ್ಯರಲ್ಲಿ ರೋಗನಿರೋದಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಇದೆ ಎನ್ನಲಾಗಿದೆ.

Recommended Video

Zameer Ahmed ದುಡ್ಡು ಮಾಡಿದ್ದು ಹೇಗೆ ಅಂತ ನಂಗೆ ಗೊತ್ತಿದೆ : Renukacharya | Oneindia Kannada

ಎರಡನೇ ಹಂತದ ಕೋವಾಕ್ಸಿನ್ ಲಸಿಕೆ ಯನ್ನು ಮಾನವರ ಮೇಲೆ ಪ್ರಯೋಗ ಮಾಡಲು ಭಾರತೀಯ ಔಷಧ ನಿಯಂತ್ರಣಾ ಸಂಸ್ಥೆ ಅನುಮತಿ ನೀಡಿದ್ದು ಮುಂದಿನ ವಾರದಲ್ಲಿ ಪ್ರಯೋಗಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

English summary
Bharat Biotech on Friday announced that the animal trials of its Covid-19 vaccine candidate Covaxin were successful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X