ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಆಗಸ್ಟ್ 12ರಿಂದಲೇ ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ಲಭ್ಯ

|
Google Oneindia Kannada News

ನವದೆಹಲಿ, ಆಗಸ್ಟ್ 11: ಭಾರತದಲ್ಲಿ ಇತ್ತೀಚೆಗೆ ಅನುಮೋದನೆ ಪಡೆದಿರುವ ಕೊರ್ಬೆವಾಕ್ಸ್ ಕೋವಿಡ್-19 ಲಸಿಕೆಯು ಶುಕ್ರವಾರದಿಂದಲೇ ಲಭ್ಯವಾಗುವ ನಿರೀಕ್ಷೆಯಿದೆ ಎಂದು ತಯಾರಕ ಬಯೋಲಾಜಿಕಲ್ ಇ. ಲಿಮಿಟೆಡ್ (BE) ತಿಳಿಸಿದೆ.

ದೇಶದ ಸಾರ್ವಜನಿಕ ಮತ್ತು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಮತ್ತು COWIN ಅಪ್ಲಿಕೇಶನ್‌ನಲ್ಲಿ ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ಲಸಿಕೆಯು ಸಿಗಲಿದೆ. ಕೊವ್ಯಾಕ್ಸಿನ್ ಅಥವಾ ಕೊವಿಶೀಲ್ಡ್ ಲಸಿಕೆಯನ್ನು ಮೊದಲ ಮತ್ತು ಎರಡನೇ ಡೋಸ್ ಆಗಿ ಪಡೆದವರು ಕೊರ್ಬೆವ್ಯಾಕ್ಸ್ ಅನ್ನು ಬೂಸ್ಟರ್ ಡೋಸ್ ಆಗಿ ಪಡೆದುಕೊಳ್ಳಬಹುದು.

ವಯಸ್ಕರಿಗೆ ಕೊರ್ಬೊವಾಕ್ಸ್‌ ಬೂಸ್ಟರ್‌ ಡೋಸ್‌ ನೀಡಲು ಅನುಮತಿವಯಸ್ಕರಿಗೆ ಕೊರ್ಬೊವಾಕ್ಸ್‌ ಬೂಸ್ಟರ್‌ ಡೋಸ್‌ ನೀಡಲು ಅನುಮತಿ

ಭಾರತದಲ್ಲಿ ಕೊರ್ಬೆವ್ಯಾಕ್ಸ್ ಮೊದಲ ಹೆಟೆರೊಲಾಜಸ್ ಕೋವಿಡ್-19 ಲಸಿಕೆಯಾಗಿದೆ. ಅಂದರೆ ಮೊದಲ ಎರಡು ಲಸಿಕೆಗಳೊಂದಿಗೆ ಹೊಂದಿಕೊಳ್ಳುವ ಬೂಸ್ಟರ್ ಡೋಸ್ ಲಸಿಕೆ ಆಗಿ ಕೊರ್ಬೆವ್ಯಾಕ್ಸ್ ಕೆಲಸ ಮಾಡಲಿದೆ. ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಯನ್ನು ಪಡೆದುಕೊಂಡ 18 ವರ್ಷ ಮೇಲ್ಪಟ್ಟ ಜನರು ಕೊರ್ಬೆವ್ಯಾಕ್ಸ್ ಲಸಿಕೆಯನ್ನು ಪಡೆದುಕೊಳ್ಳಬಹುದು.

ಡಿಸಿಜಿಐ ಮೂಲಕ ಕೊರ್ಬೆವ್ಯಾಕ್ಸ್ ಲಸಿಕೆಗೆ ಅನುಮತಿ

ಡಿಸಿಜಿಐ ಮೂಲಕ ಕೊರ್ಬೆವ್ಯಾಕ್ಸ್ ಲಸಿಕೆಗೆ ಅನುಮತಿ

ಇಮ್ಯುನೈಸೇಶನ್‌ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಕೋವಿಡ್ -19 ವರ್ಕಿಂಗ್ ಗ್ರೂಪ್ ಇತ್ತೀಚೆಗೆ ಮಾಡಿದ ಶಿಫಾರಸಿನ ಆಧಾರದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯ ಕೊರ್ಬೆವಾಕ್ಸ್ ಅನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಜೂನ್ 4, 2022 ರಂದು 18 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಹೆಟೆರೊಲಾಜಸ್ ಕೋವಿಡ್ -19 ಬೂಸ್ಟರ್ ಡೋಸ್ ಆಗಿ ತುರ್ತು ಬಳಕೆಗಾಗಿ ಲಸಿಕೆಯನ್ನು ಅನುಮೋದಿಸಿದ ನಂತರ ಈ ಅನುಮೋದನೆ ನೀಡಲಾಗಿತ್ತು.

ಕೊರ್ಬೆವ್ಯಾಕ್ಸ್ ಲಸಿಕೆಗೆ ಸಾಲು ಸಾಲು ಅನುಮೋದನೆ

ಕೊರ್ಬೆವ್ಯಾಕ್ಸ್ ಲಸಿಕೆಗೆ ಸಾಲು ಸಾಲು ಅನುಮೋದನೆ

ಕೊರ್ಬೆವ್ಯಾಕ್ಸ್ ಲಸಿಕೆಗೆ ಸಂಬಂಧಿಸಿದಂತೆ 2021ರ ಡಿಸೆಂಬರ್ ತಿಂಗಳಿನನಿಂದ 2022ರ ಏಪ್ರಿಲ್ ತಿಂಗಳವರೆಗೂ ಅನುಮೋದನೆಯನ್ನು ನೀಡಲಾಗಿದೆ. ಈ ಹಂತದಲ್ಲಿ 5 ವರ್ಷದ ಮೇಲ್ಪಟ್ಟ ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರು ಕೊರ್ಬೆವ್ಯಾಕ್ಸ್ ಅನ್ನು ಮೊದಲ ಮತ್ತು ಎರಡನೇ ಡೋಸ್ ಆಗಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿತ್ತು.

ಕೊರ್ಬೆವ್ಯಾಕ್ಸ್ ಲಸಿಕೆಯ 10 ಕೋಟಿ ಡೋಸ್

ಕೊರ್ಬೆವ್ಯಾಕ್ಸ್ ಲಸಿಕೆಯ 10 ಕೋಟಿ ಡೋಸ್

ಹೈದರಾಬಾದ್ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ (ಬಿಇ) ಇದುವರೆಗೆ 10 ಕೋಟಿ ಡೋಸ್ ಕೊರ್ಬೆವಾಕ್ಸ್ ಅನ್ನು ಕೇಂದ್ರಕ್ಕೆ ರವಾನಿಸಿದೆ. "12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಬೂಸ್ಟರ್ ಶಾಟ್ ಲಸಿಕೆಯನ್ನು ನೀಡಲು ಮಾರ್ಚ್ 16ರ 2022ರಂದು ಪ್ರಾರಂಭಿಸಲಾಯಿತು. ಇಲ್ಲಿಯವರೆಗೆ ಸುಮಾರು 7 ಕೋಟಿ ಡೋಸ್‌ಗಳನ್ನು ನೀಡಲಾಗಿದ್ದು, 2.9 ಕೋಟಿ ಮಕ್ಕಳು ಎರಡು-ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ದೇಶದಲ್ಲಿ ಒಟ್ಟು 207.45 ಕೋಟಿ ಡೋಸ್ ಲಸಿಕೆ ವಿತರಣೆ

ದೇಶದಲ್ಲಿ ಒಟ್ಟು 207.45 ಕೋಟಿ ಡೋಸ್ ಲಸಿಕೆ ವಿತರಣೆ

ಕೊರೊನಾವೈರಸ್ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಇದುವರೆಗೂ 207.45 ಕೋಟಿ ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಒಟ್ಟು 207,45,11,199 ಡೋಸ್ ಲಸಿಕೆ ವಿತರಿಸಲಾಗಿದ್ದು, ಈ ಪೈಕಿ 102,11,98,626 ಮೊದಲ ಡೋಸ್ ಆಗಿದ್ದರೆ, 93,71,60,937 ಎರಡನೇ ಡೋಸ್ ಆಗಿದೆ. ಅದರಂತೆ 11,61,51,636 ಬೂಸ್ಟರ್ ಡೋಸ್ ಅನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
Coronavirus Vaccine: Corbevax likely to be available at vaccination centres from August 12th in india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X