ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ನೇ ಹಂತದಲ್ಲಿ ಶೇ.90ರಷ್ಟು ಕೊವಿಡ್-19 ಲಸಿಕೆಗಳು ಯಶಸ್ವಿ!

|
Google Oneindia Kannada News

ನವದೆಹಲಿ, ನವೆಂಬರ್.09: ಕೊರೊನಾವೈರಸ್ ಸೋಂಕಿಗೆ ಲಸಿಕೆ ನಿರೀಕ್ಷೆಯಲ್ಲಿ ಇಡೀ ಜಗತ್ತು ಎದುರು ನೋಡುತ್ತಿದೆ. ಪಿ-ಫಿಜರ್ ಮತ್ತು ಬಯೋ-ಎನ್-ಟೆಕ್ ಸಂಸ್ಥೆಯು ನಡೆಸಿದ 3ನೇ ಹಂತದ ವೈದ್ಯಕೀಯ ಪ್ರಯೋಗವು ಶೇ.90ರಷ್ಟು ಯಶಸ್ವಿಯಾಗಿದೆ.

ಕೊವಿಡ್-19 ಸೋಂಕು ನಿಯಂತ್ರಿಸುವಲ್ಲಿ ಲಸಿಕೆಯು ಹೆಚ್ಚು ಪರಿಣಾಮಕಾರಿ ಎಂಬುದು ಸ್ಪಷ್ಟವಾಗಿರುವ ಬಗ್ಗೆ ಕಂಪನಿಯು ಸೋಮವಾರ ಘೋಷಿಸಿದೆ. ವಿಶ್ವದಾದ್ಯಂತ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಲಸಿಕೆ ಕುರಿತು ಘೋಷಣೆ ಹೊರಡಿಸಲಾಗಿದೆ. ಇದರ ಬೆನ್ನಲ್ಲೇ ಯುರೋಪಿಯನ್ ಷೇರು ಮಾರುಕಟ್ಟೆ ಮತ್ತು ತೈಲಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.

ಕೊರೊನಾವೈರಸ್ ಪತ್ತೆಗೆ 'ಫೆಲುಡಾ' ಪರೀಕ್ಷೆ: 500 ರೂ. ಮಾತ್ರ!ಕೊರೊನಾವೈರಸ್ ಪತ್ತೆಗೆ 'ಫೆಲುಡಾ' ಪರೀಕ್ಷೆ: 500 ರೂ. ಮಾತ್ರ!

ಪ್ರಾಥಮಿಕ ಮಾಹಿತಿ ಪ್ರಕಾರ, ಕೊವಿಡ್-19 ರೋಗಿಗೆ ಮೊದಲ ಡೋಸ್ ನೀಡಿದ 28 ದಿನಗಳಲ್ಲಿ ಹಾಗೂ ಎರಡು ಡೋಸ್ ನೀಡಿದ 7 ದಿನಗಳಲ್ಲೇ ಆತನಲ್ಲಿ ಸಂರಕ್ಷಣಾ ವ್ಯವಸ್ಥೆ ವೃದ್ಧಿಸಿದೆ ಎಂದು ತಿಳಿದು ಬಂದಿದೆ.

Coronavirus Vaccine 90% Effective In Phase 3 Trial: Pfizer

ಕೊವಿಡ್-19 ವಿರುದ್ಧ ಪರಿಣಾಮಕಾರಿ ಲಸಿಕೆ:

"ಕೊರೊನಾವೈರಸ್ ಲಸಿಕೆಗೆ ಸಂಬಂಧಿಸಿದಂತೆ ನಡೆಸಿದ ಮೂರನೇ ಹಂತದ ಪ್ರಯೋಗದ ಮೊದಲ ಫಲಿತಾಂಶದಲ್ಲಿ ಲಸಿಕೆಯ ಸಾಮರ್ಥ್ಯ ಸಾಬೀತಾಗಿದೆ. ಕೊವಿಡ್-19 ಸೋಂಕಿನ ಪ್ರಭಾವವನ್ನು ತಗ್ಗಿಸುವ ಹಾಗೂ ನಿಯಂತ್ರಿಸುವ ಶಕ್ತಿಯು ಲಸಿಕೆಯಲ್ಲಿ ಇರುವುದು ಆರಂಭಿಕ ಹಂತದಲ್ಲೇ ಗೊತ್ತಾಗಿದೆ ಎಂದು ಪಿ-ಫಿಜರ್ ಅಧ್ಯಕ್ಷ ಮತ್ತು ಸಿಇಒ ಆಲ್ಬರ್ಟ್ ಬೌರ್ಲಾ ತಿಳಿಸಿದ್ದಾರೆ. ಜಾಗತಿಕ ಸಾಂಕ್ರಾಮಿಕ ಪಿಡುಗು ಹೋಗಲಾಡಿಸುವ ನಿಟ್ಟಿನಲ್ಲಿ ಸಂಶೋಧನೆಯು ಹೆಜ್ಜೆ ಇರಿಸಿದೆ. ಇಡೀ ವಿಶ್ವಕ್ಕೆ ತೀರಾ ಅತ್ಯವಶ್ಯವಾಗಿ ಬೇಕಾಗಿರುವ ಕೊವಿಡ್-19 ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ಕಂಪನಿಯು ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಹೇಳಿದ್ದಾರೆ.

ಪಿ-ಫಿಜರ್ ಕಂಪನಿ ಅಭಿವೃದ್ಧಿಪಡಿಸಿದ ಕೊವಿಡ್-19 ಲಸಿಕೆಯು ಸಂಪೂರ್ಣ ಸುರಕ್ಷಿತ ಎಂಬುದನ್ನು ಸಾಬೀತುಪಡಿಸುವ ದತ್ತಾಂಶಗಳನ್ನು ನೀಡುವುದಕ್ಕೆ ಕನಿಷ್ಠ 2 ತಿಂಗಳ ಬೇಕಾಗುತ್ತದೆ. ತುರ್ತು ಅಗತ್ಯ ಇದ್ದಲ್ಲಿ ನವೆಂಬರ್ ಮೂರನೇ ವಾರದಲ್ಲೇ ಲಸಿಕೆ ಬಳಸುವುದಕ್ಕೆ ಅನುಮತಿ ನೀಡಲಾಗುತ್ತಿದೆ. ಅಕ್ಟೋಬರ್ ಮಧ್ಯಭಾಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಗುರುತಿಸಿದಂತೆ 42 ಕೊವಿಡ್-19 ಲಸಿಕೆ ಮಾದರಿ ಮೇಲೆ ಸಂಶೋಧನೆ ನಡೆಸಲಾಗುತ್ತಿದೆ. ಮೂರನೇ ಹಂತದಲ್ಲಿರುವ ಶೇ.90ರಷ್ಟು ಲಸಿಕೆಗಳು ಯಶಸ್ವಿ ಹಂತದಲ್ಲಿರುವ ಬಗ್ಗೆ ಆರಂಭಿಕ ವರದಿಗಳು ಬರುತ್ತಿವೆ.

English summary
Coronavirus Vaccine 90% Effective In Phase 3 Trial, Says Pfizer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X