ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚರಾಜ್ಯಗಳ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಬಳಸುವಂತಿಲ್ಲ

|
Google Oneindia Kannada News

ನವದೆಹಲಿ, ಜನವರಿ 10: ಭಾರತದಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟಗೊಂಡಿದೆ. ಈ ರಾಜ್ಯಗಳಲ್ಲಿ ನೀಡುವ ಕೊವಿಡ್-19 ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರು ಅಥವಾ ಭಾವಚಿತ್ರವನ್ನು ಬಳಸುವಂತಿಲ್ಲ. ಈ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯವು CoWin ಪ್ಲಾಟ್‌ಫಾರ್ಮ್‌ಗೆ ಫಿಲ್ಟರ್‌ಗಳನ್ನು ಸೇರಿಸಿದೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರ, ಗೋವಾದ 40 ವಿಧಾನಸಭೆ ಕ್ಷೇತ್ರ, ಪಂಜಾಬ್ 117 ವಿಧಾನಸಭೆ ಕ್ಷೇತ್ರ, ಉತ್ತರಾಖಂಡ 70 ವಿಧಾನಸಭೆ ಕ್ಷೇತ್ರ ಮತ್ತು ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ.

Explained: ಪಂಚರಾಜ್ಯಗಳಿಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ: ಇಲ್ಲಿದೆ ಸಂಪೂರ್ಣ ವಿವರಣೆExplained: ಪಂಚರಾಜ್ಯಗಳಿಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ: ಇಲ್ಲಿದೆ ಸಂಪೂರ್ಣ ವಿವರಣೆ

ಕಳೆದ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳನ್ನು ಈ ಬಾರಿ ಪಂಚರಾಜ್ಯ ಚುನಾವಣೆಗಳಲ್ಲೂ ಜಾರಿಗೊಳಿಸುವುದಕ್ಕೆ ನಿರ್ಧರಿಸಲಾಗಿದೆ.

Coronavirus Vaccination Certificate will not Use PM Modis photo in 5 Election-bound States


ಏಳು ಹಂತಗಳಲ್ಲಿ ಮತದಾನ:

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ ಪ್ರಕಟಿಸಿದೆ. ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆದರೆ, ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ಪ್ರಧಾನಮಂತ್ರಿ ಫೋಟೋಗೆ ಪ್ರತಿಪಕ್ಷಗಳ ವಿರೋಧ:

ಕೊವಿಡ್-19 ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರ ಬಳಸುತ್ತಿರುವುದಕ್ಕೆ ಮೊದಲಿನಿಂದಲೂ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿವೆ. ಡಿಸೆಂಬರ್ ತಿಂಗಳಿನಲ್ಲಿ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಬಳಸದಂತೆ ಸಲ್ಲಿಸಿದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿತ್ತು. "ನರೇಂದ್ರ ಮೋದಿಯವರು ನಮ್ಮ ಪ್ರಧಾನಿಯೇ ಹೊರತೂ ಬೇರೆ ರಾಷ್ಟ್ರದ ಪ್ರಧಾನಮಂತ್ರಿಯಲ್ಲ. ಅವರು ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಕೇವಲ ನೀವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಕಾರಣ, ನೀವು ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ನಮ್ಮ ಪ್ರಧಾನಿಯ ಬಗ್ಗೆ ಏಕೆ ನಾಚಿಕೆಪಡುತ್ತೀರಿ? 100 ಕೋಟಿ ಜನರಿಗೆ ಇದರ ಬಗ್ಗೆ ಯಾವುದೇ ಸಮಸ್ಯೆ ಇಲ್ಲ, ನಿಮಗೆ ಏಕೆ? ನೀವು ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ," ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ತಿಳಿಸಿದ್ದರು.

English summary
Coronavirus Vaccination Certificate will not Use PM Modi's photo in 5 Assembly Election-bound States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X