ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿಸುದ್ದಿ: 35 ರೂಪಾಯಿಗೆ ಕೊರೊನಾವೈರಸ್ ಸೋಂಕಿತರಿಗೆ ಔಷಧಿ!

|
Google Oneindia Kannada News

ನವದೆಹಲಿ, ಆಗಸ್ಟ್.04: ನೊವೆಲ್ ಕೊರೊನಾವೈರಸ್ ಸೋಂಕಿನ ಹರಡುವಿಕೆ ಭಾರತಕ್ಕೆ ಭಾರತವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. 2020ರಲ್ಲಿ ಯಾವುದೇ ಕಾರಣಕ್ಕೂ ಕೊವಿಡ್-19 ಸೋಂಕಿಗೆ ಲಸಿಕೆ ಕಂಡು ಹಿಡಿಯುವುದು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ.

Recommended Video

ಒಂದು ದಿನ ಮುಂಚಿತವಾಗಿಯೇ ಅಯೋಧ್ಯೆಗೆ ಭೇಟಿ ಕೊಟ್ಟ ಯೋಗಿ | Oneindia Kannada

ವಿಶ್ವದಾದ್ಯಂತ ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯುವುದಕ್ಕೆ ವೈದ್ಯಕೀಯ ಸಂಸ್ಥೆಗಳು ಮತ್ತು ಸಾಂಕ್ರಾಮಿಕ ರೋಗತಜ್ಞರು, ವಿಜ್ಞಾನಿಗಳು ಪೈಪೋಟಿಗೆ ಬಿದ್ದಿದ್ದಾರೆ. ಜಗತ್ತಿನಾದ್ಯಂತ ಮೂರು ರಾಷ್ಟ್ರಗಳಲ್ಲಿ ಕೊವಿಡ್-19 ಸೋಂಕಿನ ಲಸಿಕೆಗೆ ಸಂಶೋಧನೆಯು ಮೂರನೇ ಹಂತವನ್ನು ತಲುಪಿದೆ.

ಕೊರೊನಾವೈರಸ್ ನಿವಾರಣೆಗೆ ಲಸಿಕೆ ಕಂಡು ಹಿಡಿಯಲು ಹೇಗಿದೆ ಪೈಪೋಟಿ?ಕೊರೊನಾವೈರಸ್ ನಿವಾರಣೆಗೆ ಲಸಿಕೆ ಕಂಡು ಹಿಡಿಯಲು ಹೇಗಿದೆ ಪೈಪೋಟಿ?

ಇಂಗ್ಲೆಂಡ್, ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ನಡೆಸಿರುವ ಕೊರೊನಾವೈರಸ್ ಲಸಿಕೆಯ ಪ್ರಯೋಗಳು ಮೂರನೇ ಹಂತದವರೆಗೂ ಪಾಸ್ ಆಗಿವೆ. ಜುಲೈ 24 ರಂದು ವಿಶ್ವಸಂಸ್ಥೆ ಪ್ರಕಟಿಸಿದ ಬುಲೆಟಿನ್‌ನಲ್ಲಿ ಒಟ್ಟು ಮೂರು ಹಂತಗಳಲ್ಲಿ ಕ್ಲಿನಿಕಲ್ ಪ್ರಯೋಗಗಳು ನಡೆಯಲಿವೆ. ಒಟ್ಟು 141 ಲಸಿಕೆಗಳು ಪೂರ್ವ ವೈದ್ಯಕೀಯ ಪ್ರಯೋಗದಲ್ಲಿವೆ ಎಂದು ತಿಳಿಸಿದ್ದರು. ಇದರ ನಡುವೆ ಭಾರತದಲ್ಲಿ 35 ರೂಪಾಯಿಗೆ ಕೊವಿಡ್-19 ಸೋಂಕಿಗೆ ಮಾತ್ರೆಗಳು ಸಿದ್ಧಗೊಂಡಿವೆ ಎಂದು ಹೇಳಲಾಗುತ್ತಿದೆ.

ಕೊವಿಡ್-19 ಸೌಮ್ಯ ಲಕ್ಷಣವಿರುವವರಿಗೆ ಈ ಮಾತ್ರೆ ಮದ್ದು

ಕೊವಿಡ್-19 ಸೌಮ್ಯ ಲಕ್ಷಣವಿರುವವರಿಗೆ ಈ ಮಾತ್ರೆ ಮದ್ದು

ಭಾರತದಲ್ಲಿ ಸನ್ ಫಾರ್ಮಾಟಿಕಲ್ ಇಂಡಸ್ಟ್ರೀಸ್ ಫರಿಪಿರಾವಿರ್ ಮಾತ್ರೆಯನ್ನು ಫ್ಲೂಗಾರ್ಡ್ ಬ್ರ್ಯಾಂಡ್ ಅಡಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಿತು. ಕೊರೊನಾವೈರಸ್ ಆರಂಭಿಕ ಮತ್ತು ಸೌಮ್ಯ ಲಕ್ಷಣಗಳನ್ನು ಹೊಂದಿರುವ ಸೋಂಕಿತರಿಗೆ 200 ಎಂಜಿಯ ಫರಿಪಿರಾವಿರ್ ಮಾತ್ರೆಯು ರಾಮಬಾಣವಾಗಲಿದೆ. ಆರಂಭಿಕ ಹಂತದಲ್ಲಿ ಕೊರೊನಾವೈರಸ್ ಸೋಂಕಿತರಲ್ಲಿ ಹರಡುತ್ತಿರುವ ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವುಳ್ಳ ಆಂಟಿ-ವೈರಸ್ ಇದಾಗಿದೆ. ಸೌಮ್ಯ ಲಕ್ಷಣಗಳನ್ನು ಹೊಂದಿರುವವರಿಗೆ ಈ ಮಾತ್ರೆ ಹೆಚ್ಚು ಉಪಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಕೇವಲ 35 ರೂಪಾಯಿಗೆ ಫರಿಪಿರಾವಿರ್ ಮಾತ್ರೆ ಲಭ್ಯ

ದೇಶದಲ್ಲಿ ಕೇವಲ 35 ರೂಪಾಯಿಗೆ ಫರಿಪಿರಾವಿರ್ ಮಾತ್ರೆ ಲಭ್ಯ

ದೇಶದಲ್ಲಿ ನೊವೆಲ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ 50,000ದ ಗಡಿ ದಾಟುತ್ತಿದೆ. ಸಾಮಾನ್ಯ ಹಂತದಲ್ಲಿ ಸಮುದಾಯಕ್ಕೆ ಸೋಂಕು ಹರಡುತ್ತಿರುವುದರಿಂದ ತುರ್ತಾಗಿ ಔಷಧಿ ಸಂಶೋಧನೆಯ ಅಗತ್ಯವಿದೆ ಎಂದು ಸನ್ ಫಾರ್ಮಾದ ಭಾರತೀಯ ವ್ಯವಹಾರಿಕ ವಿಭಾಗದ ಸಿಇಓ ಕೀರ್ತಿ ಗನೋರ್ ಕರ್ ತಿಳಿಸಿದ್ದಾರೆ. ಈ ಹಿನ್ನೆಲೆ ಕಂಪನಿಯು ಸೌಮ್ಯ ಲಕ್ಷಣ ಹೊಂದಿರುವವರ ಚಿಕಿತ್ಸೆಗೆ ಅಗತ್ಯವಾಗಿರುವ ಫರಿಪಿರಾವಿರ್ ಮಾತ್ರೆಯನ್ನು ಕೇವಲ 35 ರೂಪಾಯಿಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ ತೀರ್ಮಾನಿಸಿದೆ. ಕೊವಿಡ್-19 ಸೋಂಕಿನ ಆರಂಭಿಕ ಲಕ್ಷಣಗಳನ್ನು ಹೊಂದಿರುವವರಿಗೆ ಫರಿಪಿರಾವಿರ್ ಮಾತ್ರೆಗಳು ಉಪಯುಕ್ತವಾಗಿರಲಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.

ಮೂರನೇ ಹಂತದ ಪ್ರಯೋಗದಲ್ಲಿವೆ ಕೇವಲ 3 ಕೊರೊನಾ ಲಸಿಕೆಗಳುಮೂರನೇ ಹಂತದ ಪ್ರಯೋಗದಲ್ಲಿವೆ ಕೇವಲ 3 ಕೊರೊನಾ ಲಸಿಕೆಗಳು

ಸಾಮಾನ್ಯ ಜನರಿಗೂ ತಲುಪಬೇಕು ಫರಿಪಿರಾವಿರ್ ಮಾತ್ರೆ

ಸಾಮಾನ್ಯ ಜನರಿಗೂ ತಲುಪಬೇಕು ಫರಿಪಿರಾವಿರ್ ಮಾತ್ರೆ

ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ತರಳುತ್ತಿರುವ ಸಾಮಾನ್ಯ ಪ್ರಜೆಗಳಿಗೂ ಫರಿಪಿರಾವಿರ್ ಮಾತ್ರೆಯನ್ನು ಖರೀದಿಸುವಂತೆ ಆಗಬೇಕು. ಈ ಹಿನ್ನೆಲೆ ಅತ್ಯಂತ ಕಡಿಮೆ ಬೆಲೆಗೆ ಫ್ಲೂಗಾರ್ಡ್ ಬ್ರ್ಯಾಂಡ್ ನ ಫರಿಪಿರಾವಿರ್ ಮಾತ್ರೆಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದರಿಂದ ಬಡವರಿಗೆ ಆರ್ಥಿಕ ಒತ್ತಡ ತಪ್ಪಿಸಲು ಸಾಧ್ಯವಾಗುತ್ತದೆ. ಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಮಾತ್ರೆಗಳನ್ನು ಖರೀದಿಸುವುದಕ್ಕೆ ಸಾಧ್ಯವಾಗುತ್ತದೆ. ಭಾರತವನ್ನು ಸಾಂಕ್ರಾಮಿಕ ಪಿಡುಗಿನಿಂದ ಪಾರು ಮಾಡುವುದಕ್ಕೆ ಇದು ನಮ್ಮ ಪ್ರಯತ್ನವಾಗಿದೆ ಎಂದು ಸಿಇಓ ಕೀರ್ತಿ ಗನೋರ್ ಕರ್ ತಿಳಿಸಿದ್ದಾರೆ.

ಸರ್ಕಾರದ ಜೊತೆಗೆ ಫ್ಲೂಗಾರ್ಡ್ ಕಂಪನಿ ನಂಟು

ಸರ್ಕಾರದ ಜೊತೆಗೆ ಫ್ಲೂಗಾರ್ಡ್ ಕಂಪನಿ ನಂಟು

ಕೇಂದ್ರ ಸರ್ಕಾರ ಮತ್ತು ವೈದ್ಯಕೀಯ ಸಮುದಾಯದ ಜೊತೆಗೆ ಕಂಪನಿಯು ನಿರಂತರ ಸಂಪರ್ಕವನ್ನು ಹೊಂದಿದೆ. ನೊವೆಲ್ ಕೊರೊನಾವೈರಸ್ ಸೋಂಕಿತರಿಗೆ ಅಗತ್ಯವಾಗಿರುವ ಫ್ಲೂಗಾರ್ಡ್ ಬ್ರ್ಯಾಂಡ್ ನ ಫರಿಪಿರಾವಿರ್ ಮಾತ್ರೆಗಳನ್ನು ಸಾಮಾನ್ಯ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯವನ್ನು ಮಾಡುತ್ತಿದೆ. ಇನ್ನೇನು ಒಂದು ವಾರದಲ್ಲೇ ಫರಿಪಿರಾವಿರ್ ಮಾತ್ರೆಯು ಮಾರುಕಟ್ಟೆಗಳಲ್ಲಿ ಲಭ್ಯವಿರಲಿದೆ ಎಂದು ಸಂಸ್ಥೆಯು ತಿಳಿಸಿದೆ.

'ಸನ್ ಫಾರ್ಮಾ' ವಿಶ್ವದ ನಾಲ್ಕನೇ ದೊಡ್ಡ ವೈದ್ಯಕೀಯ ಸಂಸ್ಥೆ

'ಸನ್ ಫಾರ್ಮಾ' ವಿಶ್ವದ ನಾಲ್ಕನೇ ದೊಡ್ಡ ವೈದ್ಯಕೀಯ ಸಂಸ್ಥೆ

ಸನ್ ಫಾರ್ಮಾಸೆಟಿಕಲ್ ಸಂಸ್ಥೆಯು ವೈದ್ಯಕೀಯ ವಲಯದಲ್ಲಿ ವಿಶ್ವದಲ್ಲೇ ನಾಲ್ಕನೇ ದೊಡ್ಡ ಸಂಸ್ಥೆಯಾಗಿದ್ದು, ಭಾರತದಲ್ಲೇ ಅಗ್ರಮಾನ್ಯ ವೈದ್ಯಕೀಯ ಸಂಸ್ಥೆಯಾಗಿದೆ. ವಿಶ್ವದ 100 ದೇಶಗಳಿಗೆ ಸನ್ ಫಾರ್ಮಾ ಸಂಸ್ಥೆಯ ವೈದ್ಯಕೀಯ ಸಾಮಗ್ರಿಗಳನ್ನು ರಫ್ತು ಮಾಡಲಾಗುತ್ತಿದೆ. ಇದರ ಜೊತೆಗೆ ಸನ್ ಫಾರ್ಮಾಸೆಟಿಕಲ್ ಸಂಸ್ಥೆಯು ಪ್ರಪಂಚದ ಆರು ರಾಷ್ಟ್ರಗಳಲ್ಲಿ ವೈದ್ಯಕೀಯ ಸಾಮಗ್ರಿಗಳ ಉತ್ಪಾದನೆಯ ಅಂಗ-ಸಂಸ್ಥೆಗಳನ್ನು ಹೊಂದಿದೆ.

English summary
Coronavirus Treatment: Sun Pharma Launches Favipiravir At Rs 35 Per Tablet In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X