ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 15 ಸಾವಿರ ಕೊರೊನಾ ಸಾವು, ಜಗತ್ತಿನಲ್ಲಿ ಎಷ್ಟನೇ ಸ್ಥಾನ?

|
Google Oneindia Kannada News

ದೆಹಲಿ, ಜೂನ್ 26: ಶುಕ್ರವಾರ ವರದಿ ಬಳಿಕ ಭಾರತದಲ್ಲಿ 15 ಸಾವಿರ ಜನರು ಕೊರೊನಾ ವೈರಸ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ 407 ಜನರು ಕೊವಿಡ್ ಮಹಾಮಾರಿಗೆ ಬಲಿಯಾಗಿದ್ದರೆ, ದೇಶದಲ್ಲಿ ಒಟ್ಟು 15,301 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ಇದೆ.

Recommended Video

T20 worldcup fixture will decide if IPL gets cancelled this year | Oneindia Kannada

ಭಾರತದಲ್ಲಿ ವರದಿಯಾಗಿರುವ ಒಟ್ಟು ಸಾವಿನ ಪೈಕಿ ಕೇವಲ ಐದು ರಾಜ್ಯಗಳಲ್ಲಿ ಶೇಕಡಾ 82.6% ರಷ್ಟು ಮಂದಿ ಸಾವನ್ನಪ್ಪಿದ್ದಾರೆ. ಅಂದ್ಹಾಗೆ, ಜಗತ್ತಿನಲ್ಲಿ ಈವರೆಗೂ 4.9 ಲಕ್ಷ ಜನರು ಕೊವಿಡ್ ಮಹಾಮಾರಿಯಿಂದ ಮೃತಪಟ್ಟಿದ್ದಾರೆ.

Breaking: ಭಾರತದಲ್ಲಿ ಮತ್ತೆ 17,296 ಕೊರೊನಾ ಸೋಂಕಿತರು ಪತ್ತೆBreaking: ಭಾರತದಲ್ಲಿ ಮತ್ತೆ 17,296 ಕೊರೊನಾ ಸೋಂಕಿತರು ಪತ್ತೆ

ಹಾಗಾದ್ರೆ, ಭಾರತದಲ್ಲಿ ಹೆಚ್ಚು ಕೊರೊನಾ ಸಾವು ಸಂಭವಿಸಿರುವುದು ಯಾವ ರಾಜ್ಯದಲ್ಲಿ? ಕೊವಿಡ್ ಸಾವಿನ ಅಂಕಿ ಅಂಶದಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ? ಪೂರ್ತಿ ವಿವರ ಮುಂದೆ ಓದಿ....

ಮಹಾರಾಷ್ಟ್ರದಲ್ಲಿ 6971 ಸಾವು

ಮಹಾರಾಷ್ಟ್ರದಲ್ಲಿ 6971 ಸಾವು

ಭಾರತದ ಪಾಲಿಗೆ ಅತಿ ಹೆಚ್ಚು ಕೊರೊನಾ ಸಾವು ವರದಿಯಾಗಿರುವುದು ಮಹಾರಾಷ್ಟ್ರದಲ್ಲಿ. ಸುಮಾರು 1.47 ಲಕ್ಷ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಒಟ್ಟು 6931 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರ ಪೈಕಿ ಮುಂಬೈ ನಗರದಲ್ಲೇ 4062 ಜನರು ಸಾವನ್ನಪ್ಪಿದ್ದಾರೆ.

ದೆಹಲಿ-ಗುಜರಾತ್‌ನಲ್ಲೂ ಹೆಚ್ಚು ಸಾವು

ದೆಹಲಿ-ಗುಜರಾತ್‌ನಲ್ಲೂ ಹೆಚ್ಚು ಸಾವು

ಮಹಾರಾಷ್ಟ್ರ ಬಿಟ್ಟರೆ ಹೆಚ್ಚು ಸಾವು ವರದಿಯಾಗಿರುವುದು ದೆಹಲಿ ಮತ್ತು ಗುಜರಾತ್‌ನಲ್ಲಿ. ದೆಹಲಿಯಲ್ಲಿ ಒಟ್ಟು 2429 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್‌ನಲ್ಲಿ 1754 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇನ್ನು ತಮಿಳುನಾಡಿನಲ್ಲಿ 911 ಮಂದಿ ಮೃತಪಟ್ಟಿರುವುದಾಗಿ ವರದಿಗಳು ಹೇಳಿದೆ.

ಜಗತ್ತಿನಲ್ಲೇ ಏಂಟನೇ ರಾಷ್ಟ್ರ ಭಾರತ

ಜಗತ್ತಿನಲ್ಲೇ ಏಂಟನೇ ರಾಷ್ಟ್ರ ಭಾರತ

ಇನ್ನು ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ಸಾವು ವರದಿಯಾಗಿರುವ ಪಟ್ಟಿಯಲ್ಲಿ ಭಾರತಕ್ಕೆ ಏಂಟನೇ ಸ್ಥಾನ. ಅಮೆರಿಕ, ಬ್ರೆಜಿಲ್, ಯುಕೆ, ಇಟಲಿ, ಸ್ಪೇನ್, ಮೆಕ್ಸಿಕೋ, ಫ್ರಾನ್ಸ್ ದೇಶಗಳ ನಂತರ ಭಾರತದಲ್ಲಿ ಅತಿ ಹೆಚ್ಚು ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ.

15 ಸಾವಿರಕ್ಕೂ ಹೆಚ್ಚು ಸಾವು ಕಂಡ ದೇಶಗಳು

15 ಸಾವಿರಕ್ಕೂ ಹೆಚ್ಚು ಸಾವು ಕಂಡ ದೇಶಗಳು

ಅಮೆರಿಕದಲ್ಲಿ ಈವರೆಗೂ 126,780 ಜನರು ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ನಲ್ಲಿ 55,054 ಮಂದಿ ಮೃತಪಟ್ಟಿದ್ದಾರೆ. ಯುಕೆಯಲ್ಲಿ 43,230 ಮರಣ ಹೊಂದಿದ್ದಾರೆ. ಇಟಲಿಯಲ್ಲಿ 34,678 ಜನರು ಸತ್ತಿದ್ದಾರೆ. ಸ್ಪೇನ್ ದೇಶದಲ್ಲಿ 28,330 ಜನರು ಜೀವ ಕಳೆದುಕೊಂಡಿದ್ದಾರೆ. ಫ್ರಾನ್ಸ್ ರಾಷ್ಟ್ರದಲ್ಲಿ 29,752 ಮಂದಿ ಹಾಗೂ ಮೆಕ್ಸಿಕೋದಲ್ಲಿ 25,060 ಜನರು ಸಾವನ್ನಪ್ಪಿದ್ದಾರೆ.

English summary
India crossed the tragic milestone of 15,000 Covid casualties on Thursday with 402 fresh deaths pushing the cumulative toll to 15,300.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X