• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ನೆಗೆಟಿವ್ ಬಂದಿದ್ದರೂ ಕೂಡ ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ

|

ನವದೆಹಲಿ, ಏಪ್ರಿಲ್ 23: ಕೊರೊನಾ ಸೋಂಕು ನೆಗೆಟಿವ್ ಬಂದಿರಬಹುದು ಆದರೆ ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಒಂದೊಮ್ಮೆ ಲಕ್ಷಣಗಳಿದ್ದರೂ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಜನರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!

ಯಾಕೆಂದರೆ ಕೊರೊನಾ ಸೋಂಕಿತ ಲಕ್ಷಣಗಳನ್ನು ಸಣ್ಣ ಪ್ರಮಾಣದಲ್ಲಿ ಅವರು ಎದುರಿಸುತ್ತಿರುತ್ತಾರೆ, ಇಂದು ಪರೀಕ್ಷೆಯಲ್ಲಿ ನೆಗೆಟಿವ್ ಬಂದು ನಾಳೆಯೇ ಪಾಸಿಟಿವ್ ಬರಬಹುದು ಎಚ್ಚರವಾಗಿರಿ.

ಯಾಕೆಂದರೆ ಕೆಲವೊಮ್ಮೆ ಸಣ್ಣ ಪ್ರಮಾಣದ ಲಕ್ಷಣಗಳನ್ನು ಹೊಂದಿದ್ದಲ್ಲಿ ಪರೀಕ್ಷೆಯಲ್ಲಿ ನೆಗೆಟಿವ್ ಬರಬಹುದು.

ಕೋವಿಡ್ ಪರೀಕ್ಷೆ ಎಷ್ಟರ ಮಟ್ಟಿಗೆ ನಿಖರತೆ ಹೊಂದಿದೆ

ಕೋವಿಡ್ ಪರೀಕ್ಷೆ ಎಷ್ಟರ ಮಟ್ಟಿಗೆ ನಿಖರತೆ ಹೊಂದಿದೆ

ಕೊರೊನಾ ಸೋಂಕನ್ನು ಮೊದಲಿಗೆ ಪತ್ತೆ ಹಚ್ಚಲು ಆರ್‌ಟಿಪಿಸಿಆರ್ ಉತ್ತಮ ಮಾರ್ಗವೆಂದು ನಂಬಲಾಗಿದೆ. ಅದು ಅತ್ಯಂತ ನಿಖರವಾಗಿದೆ ಎಂದು ಹೇಳಲಾಗಿದೆ. ಆದರೆ ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಈ ಪರೀಕ್ಷೆಯಲ್ಲಿಯೂ ಸುಳ್ಳು ಫಲಿತಾಂಶ ಬಂದಿದೆ ಎಂದು ಹೇಳಲಾಗುತ್ತಿದೆ.

ಲಕ್ಷಣವಿದೆ ಆದರೂ ವರದಿ ನೆಗೆಟಿವ್

ಲಕ್ಷಣವಿದೆ ಆದರೂ ವರದಿ ನೆಗೆಟಿವ್

ನಿಮಗೆ ಕೊರೊನಾ ಲಕ್ಷಣವಿದ್ದರೂ ವರದಿಯಲ್ಲಿ ನೆಗೆಟಿವ್ ಬಂದಿರುವುದಕ್ಕೆ ತಲೆ ಕೆಡಿಸಿಕೊಂಡಿದ್ದೀರಾ, ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ರೂಪಾಂತರ ತಳಿಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ನೆಗೆಟಿವ್ ವರದಿಗಳು ಬರುತ್ತಿವೆ. ಅಷ್ಟೇ ಅಲ್ಲದೆ ನಿಮ್ಮಲ್ಲಿ ರೋಗ ಲಕ್ಷಣಗಳು ಸಣ್ಣ ಪ್ರಮಾದಲ್ಲಿರುವಾಗ ಈ ಪರೀಕ್ಷೆಯು ಸೋಂಕನ್ನು ಪತ್ತೆಹಚ್ಚುವಲ್ಲಿ ವಿಫಲವಾಗುತ್ತಿದೆ. ಮತ್ತು ನಿಮ್ಮ ಗಂಟಲ ದ್ರವ ಮಾದರಿಯನ್ನು ಸರಿಯಾಗಿ ಸಂಗ್ರಹಿಸದಿದ್ದರೂ ಕೂಡ ನೆಗೆಟಿವ್ ವರದಿ ಬರಬಹುದು ಎಂದು ತಜ್ಞರು ಹೇಳಿದ್ದಾರೆ.

ನೆಗೆಟಿವ್ ಬಂದಿದ್ದರೂ ಈ ಲಕ್ಷಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ

ನೆಗೆಟಿವ್ ಬಂದಿದ್ದರೂ ಈ ಲಕ್ಷಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ

ಕೊರೊನಾ ಪರೀಕ್ಷೆ ಮಾಡಿಸಿದಾಗ ಒಂದೊಮ್ಮೆ ನಿಮ್ಮ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ ಕೂಡ ಸೋಂಕಿನ ಕೆಲವು ಲಕ್ಷಣಗಳು ನಿಮ್ಮಲ್ಲಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಕಡಿಮೆ ಪ್ರಮಾಣದ್ದಾಗಿದ್ದರೆ ಮನೆಯಲ್ಲಿಯೇ ಐಸೊಲೇಟ್ ಆಗಿ, ಯಾವುದೇ ಕಾರಣಕ್ಕೂ ನೆಗೆಟಿವ್ ಬಂದಿದೆ ಎಂದು ಎಲ್ಲೆಂದರಲ್ಲಿ ಅಡ್ಡಾಡಬೇಡಿ, ಜಾಗ್ರತೆ ವಹಿಸಿ ಬೇರೆಯವರ ಅಮೂಲ್ಯ ಜೀವವನ್ನು ಕಾಪಾಡಲು ಸಹಾಯ ಮಾಡಿ.

ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳು

ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳು

*ರುಚಿ ಹಾಗೂ ವಾಸನೆ ತಿಳಿಯುವುದಿಲ್ಲ
*ಜ್ವರ ಹಾಗೂ ಮೈ ನಡುಕ
*ಆಯಾಸ
*ಗಂಟಲು ನೋವು
*ಗ್ಯಾಸ್ಟ್ರಿಕ್‌ನಂತಹ ಲಕ್ಷಣಗಳು ಕಾಣಿಸುತ್ತವೆ.

ಕೊರೊನಾ ನೆಗೆಟಿವ್ ವರದಿ ಬಂದರೆ ಏನು ಮಾಡಬೇಕು

ಕೊರೊನಾ ನೆಗೆಟಿವ್ ವರದಿ ಬಂದರೆ ಏನು ಮಾಡಬೇಕು

ರೂಪಾಂತರಿ ಕೊರೊನಾ ಸೋಂಕು ಆರ್‌ಪಿಸಿಆರ್ ಪರೀಕ್ಷೆಯಲ್ಲಿ ತಿಳಿಯುವುದಿಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಂದೊಮ್ಮೆ ನಿಮಗೆ ಲಕ್ಷಣಗಳಿದ್ದರೂ ನೆಗೆಟಿವ್ ಬಂದರೆ ಆಕ್ಸಿಜನ್ ಪ್ರಮಾಣವನ್ನು ಪರೀಕ್ಷಿಸಿ, ಪಲ್ಸ್ ಆಕ್ಸಿಮೀಟರ್ ಬಳಕೆ ಮಾಡಿ.
ಹಾಗೆಯೇ ನೆಗೆಟಿವ್ ವರದಿ ಬಂದು 2-3 ದಿನಗಳಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿಸಿ, ಒಂದೊಮ್ಮೆ ಆಗಲೂ ನೆಗೆಟಿವ್ ಬಂದರೆ ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್ ಮಾಡಿಸಿ ಎಂದು ಸಲಹೆ ನೀಡಿದ್ದಾರೆ.

English summary
Coronavirus symptoms in COVID negative person: Do not ignore these symptoms even if your tested negative for covid-19. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X