ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನ ಈ 5 ಲಕ್ಷಣಗಳಿದ್ದರೆ ಆಸ್ಪತ್ರೆಗೆ ದಾಖಲಾಗಲೇಬೇಕು

|
Google Oneindia Kannada News

ನವದೆಹಲಿ, ಏಪ್ರಿಲ್ 20: ದೇಶದಲ್ಲಿ ಕಳೆದ ಹದಿನೈದು ದಿನದಿಂದೀಚೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಕೊರೊನಾ ಸೋಂಕು ತಗುಲಿದವರೆಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ, ಮನೆಯಲ್ಲಿದ್ದೇ ಕಡಿಮೆಯಾಗಬಹುದು.ದೇಶದಲ್ಲಿ ಪ್ರತಿ ನಿತ್ಯ 2 ಲಕ್ಷಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ, ಹಾಗೆಯೇ ಆಕ್ಸಿಜನ್ ಕೊರತೆಯೂ ಎದುರಾಗಿದೆ.

ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!

ಇದೀಗ ಕೇವಲ 60ವರ್ಷ ದಾಟಿದವರಿಗೆ ಮಾತ್ರ ಕೊರೊನಾ ಸೋಂಕು ತಗುಲುತ್ತಿದೆ ಎನ್ನುವುದು ತಪ್ಪು, ಎಲ್ಲಾ ವಯಸ್ಸಿನವರಿಗೂ ಸೋಂಕು ಹರಡುತ್ತಿದೆ, ಹಾಗೆಯೇ ಕಳೆದ ಬಾರಿಗಿಂತ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ.

ಆದರೆ ಕೊರೊನಾದ ಈ 5 ಲಕ್ಷಣಗಳಿದ್ದರೆ ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲೇಬೇಕು ಎಂದು ತಜ್ಞರು ಹೇಳುತ್ತಾರೆ.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಉಸಿರಾಟ ತೊಂದರೆ ಹಾಗೂ ಎದೆನೋವು ಹೆಚ್ಚಳವಾಗುವುದು ಕೊರೊನಾ ಸೋಂಕಿನ ಲಕ್ಷಣಗಳಾಗಿರಬಹುದು. ಈ ಸೋಂಕು ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡುತ್ತವೆ. ಉಸಿರಾಡುವುದು ನಿಮಗೆ ಕಷ್ಟ ಎನಿಸಿದರೆ ರೂಮಿನಿಂದ ಒಮ್ಮೆ ಹೊರಗಡೆ ಬನ್ನಿ ಶುದ್ಧ ಗಾಳಿ ಸೇವಿಸಿ ಆದರೂ ತೊಂದರೆ ಎನಿಸುತ್ತಿದ್ದರೆ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಎಂದಿದ್ದಾರೆ.

ನ್ಯುಮೋನಿಯಾ ಸಾಧ್ಯತೆ

ನ್ಯುಮೋನಿಯಾ ಸಾಧ್ಯತೆ

ಆಮ್ಲಜನಕ ಮಟ್ಟದಲ್ಲಿ ಕುಸಿತ ಕಂಡುಬಂದರೆ ಅದು ನ್ಯುಮೋನಿಯಾಗೆ ತಿರುಗುವ ಸಾಧ್ಯತೆ ಇದೆ ಹಾಗಾಗಿ ತೀವ್ರ ಎಚ್ಚರಿಕೆಯಿಂದಿರಬೇಕು, ಉಸಿರಾಟದ ತೊಂದರೆ ಆಯಾಸ ಉಂಟಾದರೆ ಚಿಕಿತ್ಸೆ ಪಡೆಯಬೇಕು.

ಮೆದುಳು, ನರಮಂಡಲಕ್ಕೂ ತೊಂದರೆ

ಮೆದುಳು, ನರಮಂಡಲಕ್ಕೂ ತೊಂದರೆ

ಈ ಕೊರೊನಾ ಸೋಂಕು ಮೆದುಳು, ನರಮಂಡಲಕ್ಕೂ ತಗುಲಬಹುದು, ಸೋಂಕು ಉಲ್ಬಣಗೊಂಡರೆ ಮರೆವು ರೀತಿಯ ಸಾಕಷ್ಟು ಕಾಯಿಲೆಗಳಿಗೂ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ತೊದಲಿದಂತೆ ಮಾತನಾಡುತ್ತಾರೆ, ಮರೆವು ಹೆಚ್ಚಿರುತ್ತದೆ.

ಎದೆನೋವು

ಎದೆನೋವು

ಯಾವುದೇ ರೀತಿಯ ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಎದೆನೋವು ಕಾಣಿಸಿಕೊಂಡರೂ ಆರೈಕೆಯ ಅಗತ್ಯವಿರುತ್ತದೆ. ಎದೆ ಒಳಗೆ ಹಾಗೂ ಹೊರ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಎದೆಗೂಡಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಜತೆಗೆ ಮಾಂಸಖಂಡಗಳಲ್ಲಿ ನೋವು ಇರುತ್ತದೆ.

ತುಟಿ ನೀಲಿ ಬಣ್ಣಕ್ಕೆ ತಿರುಗುತ್ತದೆ

ತುಟಿ ನೀಲಿ ಬಣ್ಣಕ್ಕೆ ತಿರುಗುತ್ತದೆ

ದೇಹಕ್ಕೆ ಆಮ್ಲಜನಕ ಪ್ರಮಾಣ ಕಡಿಮೆಯಾದಂತೆ ತುಟಿಯು ನೀಲಿ ಬಣ್ಣಕ್ಕೆ ತಿರುಗುತ್ತದೆ ಇಂತಹ ಲಕ್ಷಣಗಳು ಕಂಡು ಬಂದರೂ ಆಸ್ಪತ್ರೆಗೆ ದಾಖಲಾಗಬೇಕು. ಜತೆಗೆ ಮುಖವು ಕೂಡ ನೀಲಿಗಟ್ಟುತ್ತದೆ. ಹಾಗೆಯೇ ಚರ್ಮ ಸುಕ್ಕುಗಟ್ಟಿದಂತಾಗುತ್ತದೆ. ಅಷ್ಟೇ ಅಲ್ಲದೆ ಜ್ವರ, ಒಣಕಫ, ಗಂಟಲು ನೋವು, ಮಂಡಿ ನೋವು, ಮೈಕೋವು ನೋವು ಕೂಡ ಕೊರೊನಾ ಸೋಂಕಿನ ಲಕ್ಷಣವಾಗಿದೆ.

Recommended Video

ಟೀಂ ಇಂಡಿಯಾ ಮಾಜಿ ನಾಯಕ ಧೋನಿ ತಂದೆ ತಾಯಿಗೆ ಕೊರೊನಾ ಪಾಸಿಟಿವ್‌ | Oneindia Kannada

English summary
The trajectory of COVID cases in the country is spiking up yet again. With over 2,00,000 fresh cases recorded as of April 16, 2021, the fourth wave of coronavirus is perhaps the scariest one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X