• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!

|

ಇಡೀ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ನ ತಡೆಗಟ್ಟಲು ವಿವಿಧ ದೇಶಗಳು ವಿವಿಧ ಕ್ರಮಗಳನ್ನು ಅನುಸರಿಸುತ್ತಿವೆ. ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮಂತ್ರವನ್ನು ಪಠಿಸುತ್ತಿವೆ.

   Scientific reason behind 21 days lockdown | Modi | Stayhome Stay Safe | Oneindia kannada

   ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ 21 ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಂಡರು. ಆ ಮೂಲಕ ಎಲ್ಲಾ ಭಾರತೀಯರು 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಮೋದಿ ಮನವಿ ಮಾಡಿದರು.

   India Lockdown: ಕೇಂದ್ರ ಸರ್ಕಾರದ ಈ ನಿಯಮಗಳ ಪಾಲನೆ ಕಡ್ಡಾಯIndia Lockdown: ಕೇಂದ್ರ ಸರ್ಕಾರದ ಈ ನಿಯಮಗಳ ಪಾಲನೆ ಕಡ್ಡಾಯ

   ಅಷ್ಟಕ್ಕೂ, ಪ್ರಧಾನಿ ಮೋದಿ '21' ದಿನಗಳ ಕಾಲ ಲಾಕ್ ಡೌನ್ ಘೋಷಿಸಿದ್ದು ಏಕೆ.? ಇದರಿಂದ ಹಿಂದೆ ಏನಾದರೂ ವೈಜ್ಞಾನಿಕ ಕಾರಣ ಇದೆಯಾ.? ಎಂಬ ಪ್ರಶ್ನೆಗಳು ಉದ್ಭವವಾಗುವುದು ಸಹಜ. ಇದಕ್ಕೆ ಉತ್ತರ ಇಲ್ಲಿದೆ.

   ವೈಜ್ಞಾನಿಕ ಮಾಹಿತಿ ಅಡಗಿದೆ

   ವೈಜ್ಞಾನಿಕ ಮಾಹಿತಿ ಅಡಗಿದೆ

   21 ದಿನಗಳ ಲಾಕ್‌ ಡೌನ್ ಅವಧಿಯನ್ನು ಘೋಷಿಸುವ ಮೋದಿಯ ನಿರ್ಧಾರದ ಹಿಂದೆ ವೈಜ್ಞಾನಿಕ ಮಾಹಿತಿ ಅಡಗಿದೆ. ಸಾಮಾನ್ಯವಾಗಿ ದೇಹ ಪ್ರವೇಶಿಸುವ ವೈರಸ್ ಗಳು ಎರಡನೇ ದಿನದಿಂದ ತಮ್ಮ ಪ್ರಭಾವವನ್ನು ಬೀರಲಾರಂಭಿಸುತ್ತವೆ. ಈ ಹಿನ್ನಲೆಯಲ್ಲಿ ದೇಹ ಒಂದು ವಾರ ಕಾಲ ಬಳಲುತ್ತದೆ. ಬಳಿಕ ನಿಧಾನವಾಗಿ ದೇಹದೊಳಗಿನ ರೋಗ ನಿರೋಧಕ ಶಕ್ತಿ ವೈರಸ್ ವಿರುದ್ಧ ಹೋರಾಟವನ್ನು ಆರಂಭಿಸುತ್ತದೆ. ಹೀಗೆ ನಡೆಯುವ ಪ್ರಕ್ರಿಯೆಯಲ್ಲಿ ವೈರಸ್ ಗಳ ಎದುರು ಇಮ್ಯೂನಿಟಿ ಜಯ ಸಾಧಿಸಿದರೆ ರೋಗಿ ಸುಧಾರಿಸಿಕೊಳ್ಳಲು ಆರಂಭಿಸುತ್ತಾನೆ. ಇಲ್ಲದಿದ್ದಲ್ಲಿ ಆರೋಗ್ಯ ಪರಿಸ್ಥಿತಿ ಹದಗೆಡುತ್ತದೆ. ಈ ಎಲ್ಲಾ ಪ್ರಕ್ರಿಯೆ ನಡೆಯಲು 21 ದಿನ ಬೇಕು. ಈ ಹಿಂದೆ ಕಾಣಿಸಿಕೊಂಡಿದ್ದ ಎಬೋಲಾ ರೋಗವೂ 21 ದಿನಗಳ ಇನ್ಕ್ಯುಬೇಷನ್ ಅವಧಿಯನ್ನು ಹೊಂದಿತ್ತು. ಕೊರೊನಾ ಕೂಡ ಬಹುಪಾಲು ಇದೇ ಲಕ್ಷಣಗಳನ್ನು ಹೊಂದಿಕೊಂಡಿದೆ. ಹೀಗಾಗಿ, 21 ದಿನಗಳ ಗೃಹ ದಿಗ್ಬಂಧನವನ್ನು ಮೋದಿ ವಿಧಿಸಿದ್ದಾರೆ.

   ಸಂಪೂರ್ಣವಾಗಿ ಚೇತರಿಸಿಕೊಳ್ಳಲು 21 ದಿನ ಬೇಕು

   ಸಂಪೂರ್ಣವಾಗಿ ಚೇತರಿಸಿಕೊಳ್ಳಲು 21 ದಿನ ಬೇಕು

   ''21 ದಿನಗಳ ಕಾಲ ಮನೆಯಲ್ಲೇ ಇರಿ ಎಂದು ಮೋದಿ ಹೇಳಿರುವುದರ ಹಿಂದೆ ಒಂದು ಲಾಜಿಕ್ ಇದೆ. 14 ದಿನಗಳ ಇನ್ಕ್ಯುಬೇಷನ್ ಜೊತೆಗೆ ಉಳಿದ ಸೋಂಕು ಸಾಯಲು ಮತ್ತು ಸಂಪೂರ್ಣವಾಗಿ ಗುಣಮುಖರಾಗಲು ಇನ್ನೊಂದು ವಾರ ಕಾಲಾವಕಾಶ (21 ದಿನಗಳು) ಬೇಕು'' ಎಂದು ತಮಿಳುನಾಡು ಸಾರ್ವಜನಿಕ ಆರೋಗ್ಯ ನಿರ್ದೇಶಕ ಕೆ.ಕೊಳಂದಸಾಮಿ ಹೇಳಿದ್ದಾರೆ.

   ಮಧ್ಯರಾತ್ರಿ 12 ಗಂಟೆಯಿಂದ 21 ದಿನ ಭಾರತಕ್ಕೆ ಭಾರತವೇ ಬಂದ್!ಮಧ್ಯರಾತ್ರಿ 12 ಗಂಟೆಯಿಂದ 21 ದಿನ ಭಾರತಕ್ಕೆ ಭಾರತವೇ ಬಂದ್!

   ಪರಿಸ್ಥಿತಿಯ ಗಂಭೀರತೆ ಮನವರಿಕೆ

   ಪರಿಸ್ಥಿತಿಯ ಗಂಭೀರತೆ ಮನವರಿಕೆ

   ''21 ದಿನಗಳ ಲಾಕ್ ಡೌನ್ ನಿಂದಾಗಿ ಪರಿಸ್ಥಿತಿಯ ಗಂಭೀರತೆಯನ್ನು ಜನರಿಗೆ ಮನವರಿಕೆ ಮಾಡಲು ಮತ್ತು ಸಕಾರಾತ್ಮಕ ಅಭಿಪ್ರಾಯ ಬೆಳೆಸಲು ಸಹಕಾರಿ ಆಗುತ್ತದೆ. ಇದೇ ವೇಳೆ ಎಲ್ಲಾ ಕಟ್ಟಡಗಳು, ವಾಹನಗಳನ್ನು ಸೋಂಕು ರಹಿತ ಮಾಡಬಹುದು. ಹಾಗೇ, ಮುಂದಿನ ಹಂತದ ಕಾರ್ಯಚರಣೆಗೆ ಆಸ್ಪತ್ರೆಗಳು ಸಿದ್ಧವಾಗಬಹುದು. ಕಟ್ಟುನಿಟ್ಟಿನ ಸೂಚನೆಗಳನ್ನು ಜನ ಪಾಲಿಸಲೇಬೇಕು. ಯಾಕಂದ್ರೆ, ಎಲ್ಲರ ಜೀವನವೂ ಇದರ ಮೇಲೆ ಅವಲಂಬಿತವಾಗಿದೆ'' ಎಂದು ಡಾ.ಕೊಳಂದಸಾಮಿ ತಿಳಿಸಿದ್ದಾರೆ.

   ಒಳ್ಳೆಯ ಉಪಾಯ

   ಒಳ್ಳೆಯ ಉಪಾಯ

   ''ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು 21 ದಿನಗಳ ಲಾಕ್ ಡೌನ್ ಒಳ್ಳೆಯ ಉಪಾಯ. ವೈಯುಕ್ತಿಕ ಸ್ವಚ್ಛತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುಖಾಂತರ ಕೊರೊನಾ ಸೋಂಕು ತಡೆಗಟ್ಟಬಹುದು'' ಎಂದು ಚೆನ್ನೈನ ಪಬ್ಲಿಕ್ ಹೆಲ್ತ್ ಎಕ್ಸ್ ಪರ್ಟ್ ಕೆ.ಕುಗನಂಧಮ್ ತಿಳಿಸಿದ್ದಾರೆ.

   ಮತ್ತೆ 21 ದಿನ‌ ಜನತಾ ಕರ್ಫ್ಯೂ; ಯಾರು ಏನಂದರು?ಮತ್ತೆ 21 ದಿನ‌ ಜನತಾ ಕರ್ಫ್ಯೂ; ಯಾರು ಏನಂದರು?

   ಕೋವಿಡ್-19ಗೆ ಇನ್ಕ್ಯುಬೇಷನ್ ಅವಧಿ

   ಕೋವಿಡ್-19ಗೆ ಇನ್ಕ್ಯುಬೇಷನ್ ಅವಧಿ

   ಅನ್ನಾಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಜರ್ನಲ್ ನಲ್ಲಿ ಸೈನ್ಸ್ ಡೈಲಿ ಇತ್ತೀಚೆಗೆಷ್ಟೇ ವರದಿ ಮಾಡಿರುವ ಹೊಸ ಅಧ್ಯಯನದ ಪ್ರಕಾರ, ಕೋವಿಡ್-19 ಪೀಡಿತ 97.5% ಜನರಿಗೆ 5-11.5 ದಿನಗಳ ಒಳಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ, ಯು.ಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಕೋವಿಡ್-19 ಗೆ 14 ದಿನಗಳ ಇನ್ಕ್ಯುಬೇಷನ್ ಅವಧಿ ನೀಡಿದೆ.

   English summary
   Coronavirus: Is there any Scientific significance behind 21 days lock down?
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X