ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಕ್ಕೆ ತಲೆಬಾಗಿದ ಎಲ್ಲಾ ಮತ, ಧರ್ಮ, ಪಂಥದವರು

|
Google Oneindia Kannada News

ನವದೆಹಲಿ ಮಾರ್ಚ್ 17: ಎಲ್ಲಾ ಧರ್ಮ, ಜಾತಿ, ಮತ, ಪಂಥವು ಕೊರೊನಾಕ್ಕೆ ತಲೆ ಬಾಗಿದೆ.

ದೇಶದೆಲ್ಲೆಡೆ ಕೊರೊನಾ ವೈರಸ್ ವ್ಯಾಪಕವಾಗಿ ಹಡರುತ್ತಿದೆ. ಅದನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ 15 ದಿನಗಳ ಕಾಲ ತಾಜ್‌ಮಹಲ್‌ನ್ನು ಮುಚ್ಚಲಾಗುತ್ತಿದೆ.

ಹಾಗೆಯೇ ಶಿರಡಿ ಸಾಯಿಬಾಬಾ ದೇವಾಲಯ ಮುಚ್ಚಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮವನ್ನು ಅನುಸರಿಸಲಾಗಿದೆ.

ಇನ್ನು ಮಂತ್ರಾಲಯದಲ್ಲಿ ಎಂದಿನಂತೆ ಭಕ್ತರು ಬರಬಹುದು ಆದರೆ ತೀರ್ಥವನ್ನು ಮಾತ್ರ ವಿತರಿಸಲಾಗುತ್ತಿದೆ. ಮದುವೆ ಸಮಾರಂಭಗಳಲ್ಲಿ 100ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಹೇಳಲಾಗಿದೆ.

ಕೊರೊನಾ ವೈರಸ್ ಇಡೀ ಮನುಕುಲಕ್ಕೆ ಮಾರಕವಾಗಿರುವುದರಿಂದ ಈ ಸೋಂಕು ಜನರಲ್ಲಿ ಹರಡುವುದನ್ನು ತಡೆಯುವ ಸಲುವಾಗಿ ತಾಜ್ ಮಹಲ್ ಸೇರಿದಂತೆ ರಾಷ್ಟ್ರ ರಾಜಧಾನಿಯ ಎಲ್ಲಾ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಮಾರ್ಚ್.31ರ ವರೆಗೆ ಮುಚ್ಚುವಂತೆ ಪ್ರವಾಸೋದ್ಯಮ ಸಚಿವಾಲಯದ ಆದೇಶಿಸಿದೆ.

ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಕಲಬುರ್ಗಿಯ ವೈದ್ಯನಿಗೂ ಕೊರೊನಾ ಪಾಸಿಟಿವ್ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಕಲಬುರ್ಗಿಯ ವೈದ್ಯನಿಗೂ ಕೊರೊನಾ ಪಾಸಿಟಿವ್

ಕೊರೋನಾ ವೈರಸ್​ಗೆ ವಿಶ್ವದಾದ್ಯಂತ 6,500 ಜನ ಮೃತಪಟ್ಟಿದ್ದರೆ 1,68,000 ಜನರಿಗೆ ಈ ಸೋಂಕು ತಗುಲಿದೆ. ಇನ್ನೂ ಭಾರತದಲ್ಲಿ 114 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು ಕಳೆದ ಒಂದು ವಾರದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ದೆಹಲಿಯಲ್ಲಿ ಚಿತ್ರ ಮಂದಿರಗಳು ಬಂದ್

ದೆಹಲಿಯಲ್ಲಿ ಚಿತ್ರ ಮಂದಿರಗಳು ಬಂದ್

1.3 ಶತಕೋಟಿ ಜನರಿರುವ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನವ ದೆಹಲಿಯಲ್ಲಿ ಈಗಾಗಲೇ ಚಿತ್ರಮಂದಿರಗಳು, ಶಾಲಾ ಕಾಲೇಜುಗಳು ಸೇರಿದಂತೆ ಬಹುತೇಕ ಸಾರ್ವಜನಿಕ ವಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕಳೆದ ತಿಂಗಳು ಭಾರತಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಹೆಂಡತಿ ಇವಾಂಕಾ ಟ್ರಂಪ್ ಇಲ್ಲಿಗೆ ಭೇಟಿ ನೀಡಿದ್ದರು.

ತಾಜ್ ಮಹಲ್ ವಿಶ್ವ ಪಾರಂಪರಿಕ ತಾಣ

ತಾಜ್ ಮಹಲ್ ವಿಶ್ವ ಪಾರಂಪರಿಕ ತಾಣ

ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣ ಎಂದು ಗೌರವ ಸೂಚಿಸಿದೆ. ಮೊಘಲ್ ಸಾಮ್ರಾಜ್ಯದ ಅಪರೂಪದ ಶಿಲ್ಪಕಲೆಯಾದ ತಾಜ್ ಮಹಲ್ ಅನ್ನು ಸಂಪೂರ್ಣ ಅಮೃತ ಶಿಲೆಯಿಂದ ನಿರ್ಮಿಸಲಾಗಿದ್ದು, ಅಲ್ಲದೆ ವಿಶ್ವದ ಏಳು ಅದ್ಭುತಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಇದು ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವೂ ಕೂಡ ಇದಾಗಿದೆ.

ಶಿರಡಿ ದೇವಾಲಯ ಬಂದ್

ಶಿರಡಿ ದೇವಾಲಯ ಬಂದ್

ಕೊರೊನಾ ಭೀತಿಯಿಂದಾಗಿ ಅನಿರ್ಧಿಷ್ಟಾವಧಿಗೆ ಶಿರಡಿ ದೇವಾಲಯವನ್ನು ಮುಚ್ಚಲಾಗಿದೆ. ಕೊರೊನಾ ವೈರಸ್ ಇದೀಗ ಎಲ್ಲೆಲ್ಲೂಭಯದ ವಾತಾವರಣ ನಿರ್ಮಾಣ ಮಾಡಿದೆ. ಶಿರಡಿ ಸಾಯಿಬಾಬಾ ದೇವಸ್ಥಾನವನ್ನು ಮುಚ್ಚುವಂತೆ ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲೂ ಕೊರೊನಾ ಭೀತಿ

ಕುಕ್ಕೆ ಸುಬ್ರಹ್ಮಣ್ಯದಲ್ಲೂ ಕೊರೊನಾ ಭೀತಿ

ಹೆಚ್ಚುತ್ತಿರುವ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳಲ್ಲಿ ತಲಾ ಇಬ್ಬರಂತೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ದೇವಸ್ಥಾನದ ಆಡಳಿತ ಮಂಡಳಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳಲ್ಲಿ ಇಷ್ಟು ದಿನ ಕುಟುಂಬ ಸದಸ್ಯರು ಪಾಲ್ಗೊಳ್ಳುತ್ತಿದ್ದರು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ತಲಾ ಇಬ್ಬರಂತೆ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.

English summary
The annual three day Urs of Mughal emperor Shah Jahan, builder of the iconic Taj Mahal, will not be held, as scheduled from March 21. Also Shirdi Saibaba Temple closed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X