ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 22ರಿಂದ ವಿದೇಶಿ ವಿಮಾನಗಳ ಆಗಮನ ಬಂದ್

|
Google Oneindia Kannada News

ನವದೆಹಲಿ, ಮಾರ್ಚ್ 19 : ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ವಿದೇಶದಿಂದ ಆಗಮಿಸಿದವರ ಮೂಲಕ ದೇಶದಲ್ಲಿ ಸೋಂಕು ಹರಡುತ್ತಿದೆ. ಇದುವರೆಗೂ ದೇಶದಲ್ಲಿ ಕೊರೊನಾದಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ.

ವಿದೇಶದಿಂದ ಜನರು ಬರುವುದನ್ನು ತಡೆಯಲು ಸರ್ಕಾರ ಅಂತರಾಷ್ಟ್ರೀಯ ವಿಮಾನಗಳಿಗೆ ಲ್ಯಾಂಡಿಂಗ್ ನೀಡದಿರಲು ತೀರ್ಮಾನಿಸಿದೆ. ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಅಂತಾರಾಷ್ಟ್ರೀಯ ವಿಮಾನಗಳು ಬಂದ್ ಆಗಲಿವೆ.

ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳುವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳು

ಕೊರೊನಾ ಹರಡದಂತೆ ತಡೆಯಲು ವಿದೇಶದಿಂದ ಆಗಮಿಸುವವರನ್ನು ತಡೆಯುವುದು ಅನಿವಾರ್ಯವಾಗಿದೆ. ಆದ್ದರಿಂದ, ವಿದೇಶಿ ವಿಮಾನಗಳಿಗೆ ಲ್ಯಾಂಡಿಂಗ್ ನೀಡದಿರಲು ತೀರ್ಮಾನಿಸಲಾಗಿದೆ.

No Landing For International Flights In India From March 22

ಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲ

ಕೊರೊನಾ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ವಿಮಾನ ನಿಲ್ದಾಣದಲ್ಲಿ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರ ಕೈಗಳ ಮೇಲೆ ಆರೋಗ್ಯ ಇಲಾಖೆ ತಂಡದ ಸಿಬ್ಬಂದಿಗಳು ಚುನಾವಣೆ ಸಂದರ್ಭದಲ್ಲಿ ಬಳಸುವ ಶಾಹಿಯಿಂದ ಸ್ಟ್ಯಾಂಪಿಂಗ್ ಮಾಡುತ್ತಿದ್ದಾರೆ.

ಕೊರೊನಾ; ವಿಮಾನ ನಿಲ್ದಾಣದಿಂದ ಬರುವವರಿಗೆ ಸರ್ಕಾರದಿಂದಲೇ ದಿಗ್ಬಂಧನ!ಕೊರೊನಾ; ವಿಮಾನ ನಿಲ್ದಾಣದಿಂದ ಬರುವವರಿಗೆ ಸರ್ಕಾರದಿಂದಲೇ ದಿಗ್ಬಂಧನ!

ವಿಮಾನ ನಿಲ್ದಾಣದಲ್ಲಿ ಸ್ಟ್ಯಾಂಪಿಂಗ್ ಮಾಡಿಸಿಕೊಂಡವರು 14 ದಿನಗಳ ಪ್ರತ್ಯೇಕವಾಗಿರುವುದು ಅತ್ಯಾವಶ್ಯಕ. ವಿದೇಶದಿಂದ ಬಂದ ಪ್ರಯಾಣಿಕರಿಗೆ ಹಲವು ಮಾರ್ಗಸೂಚಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

English summary
Due to coronavirus outbreak international flights will not allowed to land in India from March 22 for a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X